Wednesday, April 30, 2025
Google search engine
Homeರಾಷ್ಟ್ರೀಯದೇಶ ಕಂಡ ಚಾಣಾಕ್ಷ ಇಂಜಿನಿಯರ್ ಗೆ ಹುಟ್ಟಿದ ಹಬ್ಬದ ಶುಭಾಶಯಗಳು..!

ದೇಶ ಕಂಡ ಚಾಣಾಕ್ಷ ಇಂಜಿನಿಯರ್ ಗೆ ಹುಟ್ಟಿದ ಹಬ್ಬದ ಶುಭಾಶಯಗಳು..!

ಎಂಜಿನಿಯರ್ ಗಳಿಗೆ ಪ್ರೇರಣೆ, ನೋಡುಗರಿಗೆ ಆಕರ್ಷಣೆ, ಅಪರೂಪದಲ್ಲಿ ಅಪರೂಪ ಸರ್, ಎಂ ವಿಶ್ವೇಶ್ವರಯ್ಯ ಭಾರತ ದೇಶ ಕಂಡ ಚಾಣಾಕ್ಷ ಎಂಜಿನಿಯರ್, ಹೆಮ್ಮೆಯ ಕನ್ನಡಿಗ, ಭಾರತ ರತ್ನ ಪ್ರಶಸ್ತಿ ವಿಜೇತ ಮೋಕ್ಷಂಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬವನ್ನು ಎಂಜಿನಿಯರ್ಸ್ ಸಮುದಾಯ ‘ಎಂಜಿನಿಯರ್ಸ್ ದಿನವಾಗಿ’ ಸಡಗರದಿಂದ ಪ್ರತಿವರ್ಷ ಆಚರಿಸುತ್ತಾರೆ.

ದೇಶ ಕಟ್ಟುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ಅವರ ಪಾತ್ರ ಮಹತ್ವದ್ದು:
ಕೈಗಾರಿಕೀಕರಣ ಹೊಂದಿ ಇಲ್ಲವೇ ನಾಶವಾಗಿ ಎಂದು ದೇಶಕ್ಕೆ ಕರೆಕೊಟ್ಟ ಸರ್.ಎಂವಿ, ಭಾರತ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಅಣೆಕಟ್ಟು ನಿರ್ಮಾತೃ, ಅರ್ಥಶಾಸ್ತ್ರಜ್ಞ, ದಿವಾನರಾಗಿ ಗುರುತಿಸಿಕೊಂಡಿದ್ದರು, ಮಾತ್ರವಲ್ಲದೇ ದೇಶ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ವಿಶ್ವೇಶ್ವರಯ್ಯ ಹುಟ್ಟು-ತಂದೆ-ತಾಯಿ ಊರು ನಡೆದುಬಂದ ದಾರಿ:

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1860ರಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ಇವರ ಜನ್ಮದಿನ ಸೆಪ್ಟೆಂಬರ್ 15ನೇ ತಾರೀಖು ಭಾರತ ದೇಶ ‘ಇಂಜಿನಿಯರುಗಳ ದಿನವನ್ನಾಗಿ ಆಚರಿಸುತ್ತಿದೆ.

ಮುಂಬೈ ಸರ್ಕಾರದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ನೇಮಕ:

ಮುಂಬಯಿ ಸರ್ಕಾರ ಅವರನ್ನು ಅಸಿಸ್ಟೆಂಟ್‌ ಇಂಜಿನಿಯರ್‌ ಆಗಿ 1884ರ ಫೆಬ್ರವರಿಯಲ್ಲಿ ನೇಮಿಸಿತು. ಅಲ್ಲಿ ಅವರು ಸೂಪರಿಂಟೆಂಡೆಂಟ್‌ ಇಂಜಿನಿಯರ್‌ವರೆಗೆ ಹಲವು ಹುದ್ದೆ ನಿರ್ವಹಿಸಿದರು.

ಪುಣೆಯಲ್ಲಿ ಹೆಚ್ಚು ಸಮಯ ವಾಸವಿದ್ದ ಸರ್, ಎಂ,ವಿ:

ಭಾರತದ ಇರಿಗೇಷನ್‌ ಕಮಿಷನ್‌ ನೇಮಕವಾಯಿತು. ಆ ಕಮಿಷನ್ ಗೆ ಮುಂಬಯಿ ಪ್ರಾಂತ್ಯದ ನೀರಾವರಿಯ ಸಂಪೂರ್ಣ ಚಿತ್ರ, ಚರಿತ್ರೆಯ ಬಗ್ಗೆ ಎಂವಿ ವರದಿ ಸಲ್ಲಿಸಿದರು. 1901ರಲ್ಲಿಎಂವಿ ಒಂದು ವರ್ಷ ಬೊಂಬಾಯಿ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸಿದ್ದರು. ಆ ಅಧಿಕಾರ ಪಡೆದ ಪ್ರಥಮ ಭಾರತೀಯ ಅವರು. ತಮ್ಮ 24 ವರ್ಷಗಳ ಸೇವಾವಧಿಯಲ್ಲಿ ವಿಶ್ವೇಶ್ವರಯ್ಯನವರು 14 ವರ್ಷ ಪುಣೆಯಲ್ಲಿಯೇ ಕಳೆದಿದ್ದರು.

ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಿದ ಸರ್ ,ಎಂ,ವಿ:

ಹೈದರಾಬಾದ್‌ನ ಮಧ್ಯಭಾಗದಲ್ಲಿ ಹರಿಯುವ ಮೂಸಿ ನದಿ, 1908ರ ಸೆಪ್ಟೆಂಬರ್‌ ಬಂದ ಅತಿವೃಷ್ಟಿಯಿಂದಾಗಿ ಉಕ್ಕಿತು. 1500 ಜನ ಮೃತಪಟ್ಟರು. ಮುಂದೆ ಈ ರೀತಿಯ ಅವಘಡ ಆಗದಂತೆ ಸೂಕ್ತ ಯೋಜನೆ ನೀಡಲು ಸರಕಾರ ವಿಶ್ವೇಶ್ವರಯ್ಯನವರನ್ನು ಕೋರಿತು. 1909ರ ಏಪ್ರಿಲ್‌ನಲ್ಲಿ ಎಂವಿ ಕೆಲಸ ವಹಿಸಿಕೊಂಡರು. ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಿದರು.

ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ ,ಎಂ,ವಿ ಕೊಡುಗೆ ಅಪಾರ:
ಮೊದಲು ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿ, ತದನಂತರ 1912ರಲ್ಲಿ ದಿವಾನರಾಗಿ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಕೊಡುಗೆ ಅನನ್ಯ.

ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ, ವಿದ್ಯುತ್ ಉತ್ಪಾದನೆ, ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಪವಾಡ ಸದೃಶ ಸಾಧನೆ ಮಾಡಿದರು. ಲಕ್ಷಾಂತರ ರೈತರ ಪಾಲಿಗೆ ಆಶಾಕಿರಣವಾದ ಕೃಷ್ಣರಾಜ ಜಲಾಶಯವನ್ನು ಕೇವಲ 3 ವರ್ಷಗಳ ಅವಧಿಯಲ್ಲಿ ರೂಪಿಸಿ, ಅನುಷ್ಠಾನಗೊಳಿಸಿದರು. ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು.

ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ದಟ್ಟ ದಾರಿದ್ರ್ಯ ಬದುಕನ್ನು ಅನುಭವಿಸಿದ್ದ ಸರ್ ,ಎಂ,ವಿ:

ವಿಶ್ವೇಶ್ವರಯ್ಯ ನವರ ತಂದೆ 15 ವರ್ಷದವರಿರುವಾಗಲೇ ನಿಧನರಾದರು. ದಟ್ಟ ದಾರಿದ್ರ್ಯದ ಬದುಕು. ತಲೆ ಬೋಳಿಸಿಕೊಂಡು ಕೆಂಪು ಸೀರೆಯುಟ್ಟು ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ ಎಚ್ ರಾಮಯ್ಯನವರ ಸಹಾಯದಿಂದ 1875ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.


ವಿವಿಧ ದೇಶದ ವಿಜ್ಞಾನಿಗಳ ಪ್ರಮುಖ ಉಲ್ಲೇಖಗಳು:

ವಿಜ್ಞಾನ ಅಂದರೆ ತಿಳಿದುಕೊಳ್ಳುವುದು; ಎಂಜಿನಿಯರಿಂಗ್ ಅಂದ್ರೆ ಮಾಡುವುದು” – ಹೆನ್ರಿ ಪೆಟ್ರೋಸ್ಕಿ, ಅಮೇರಿಕನ್ ಎಂಜಿನಿಯರ್

ಸಾಫ್ಟ್‌ವೇರ್ ಕಲಾತ್ಮಕತೆ ಮತ್ತು ಎಂಜಿನಿಯರಿಂಗ್‌ನ ಉತ್ತಮ ಸಂಯೋಜನೆಯಾಗಿದೆ” – ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ

“ಎಂಜಿನಿಯರಿಂಗ್ ಕೊನೆಗೊಳ್ಳುವ ಸ್ಥಳದಲ್ಲಿ ವಾಸ್ತುಶಿಲ್ಪ ಪ್ರಾರಂಭವಾಗುತ್ತದೆ” – ವಾಲ್ಟರ್ ಗ್ರೋಪಿಯಸ್, ಜರ್ಮನ್ ವಾಸ್ತುಶಿಲ್ಪಿ.

ಸಾಮಾಜಿಕ ಜಾಲತಾಣದ ಸಂದೇಶಗಳು:

-ಎಂಜಿನಿಯರಿಂಗ್ ತುಂಬಾ ಸುಲಭ ಎಂದು ಎಲ್ಲರೂ ಹೇಳುತ್ತಾರೆ ಅದು ಉದ್ಯಾನವನದಲ್ಲಿ ನಡೆಯುವಂತೆಯೇ ಆದರೆ ಉದ್ಯಾನವನವನ್ನು ಜುರಾಸಿಕ್ ಪಾರ್ಕ್ ಎಂದು ಎಂಜಿನಿಯರ್‌ಗಳು ಮಾತ್ರ ತಿಳಿದಿದ್ದಾರೆ.

-ಪ್ರಪಂಚವು ನಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಾವು ಜಗತ್ತನ್ನು ಬದಲಾಯಿಸಬಹುದು. ನಮ್ಮಲ್ಲಿ ಪುಸ್ತಕಗಳು ಇಲ್ಲ, ಆದರೆ ಮನಸ್ಸಿನಲ್ಲಿ ಕ್ರಾಂತಿಕಾರಿ ವಿಚಾರಗಳಿವೆ. ನಾವು ಭೂಮಿಯ ಮೇಲಿನ ಅಪರೂಪದ ಸಾಮಾನ್ಯ ಓಟಗಾರರು, ನಮ್ಮನ್ನು ಭೇಟಿ ಮಾಡಿ ನಾವು ಎಂಜಿನಿಯರ್ ಗಳು.

-ವಿಜ್ಞಾನಿಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ಪ್ರಪಂಚವನ್ನು ಆವಿಷ್ಕರಿಸಿದರು. ಆದರೆ ಎಂಜಿನಿಯರ್‌ಗಳು ಅಸ್ತಿತ್ವದಲ್ಲಿಲ್ಲದ ಜಗತ್ತನ್ನು ಸೃಷ್ಟಿಸಿದರು.


ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರಮುಖ ಯೋಜನೆಗಳು:

-ಕೆಆರ್‌ಎಸ್‌ ಅಣೆಕಟ್ಟು

-ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆ

-ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ

-ಮೈಸೂರು ವಿಶ್ವವಿದ್ಯಾಲಯ

-ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು

-ಮೈಸೂರು, ಬೆಂಗಳೂರು ಸಾರ್ವಜನಿಕ ಗ್ರಂಥಾಲಯಗಳು

-ಕನ್ನಡ ಸಾಹಿತ್ಯ ಪರಿಷತ್ತು

-ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯ

-ಹೆಬ್ಬಾಳ ಕೃಷಿ ವಿದ್ಯಾಲಯ

-ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು

ಸರ್‌ ಎಂವಿಯವರ ಕೃತಿಗಳು

-ಮೆಮೊರೀಸ್‌ ಆಫ್‌ ಮೈ ವರ್ಕಿಂಗ್‌ ಲೈಫ್‌

-ಪ್ಲಾನ್ಡ್ ಎಕಾನಮಿ ಫಾರ್‌ ಇಂಡಿಯಾ

-ಅನ್‌ಎಂಪ್ಲಾಯ್‌ಮೆಂಟ್‌ ಇನ್‌ ಇಂಡಿಯಾ

-ನೇಷನ್‌ ಬಿಲ್ಡಿಂಗ್‌: ಎ ಫೈವ್‌ ಇಯರ್‌ ಪ್ಲಾನ್‌ ಫಾರ್‌ ಪ್ರಾವಿನ್ಸಸ್‌..

ಹೀಗೆ ದೇಶಕ್ಕೆ ತನ್ನ ಜೀವನವನ್ನೇ ಅರ್ಪಿಸಿದ ಮಹಾನ್ ಚೇತನಕ್ಕೆ ಸಾವೆಂಬುದು ಇಲ್ಲ ಎಷ್ಟು ದೇಶದ ವಿಜ್ಞಾನಿಗಳಿಗೆ, ಯುವಕರಿಗೆ, ಇಡೀ ದೇಶಕ್ಕೆ ಮಾದರಿ, ಅಚ್ಚರಿ, ವ್ಯಕ್ತಿಯಾಗಿರುವ ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನ ಪ್ರತಿವರ್ಷ ಸೆಪ್ಟೆಂಬರ್ 15ರಂದು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ. ಇಂತಹ ಮಹಾನ್ ಚೇತನಕ್ಕೆ ಕೋಟಿ ಕೋಟಿ ನಮನಗಳು….

ವರದಿ ..ರಘುರಾಜ್ ಹೆಚ್ .ಕೆ..

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...