Home ತೀರ್ಥಹಳ್ಳಿತೀರ್ಥಹಳ್ಳಿ :ತುಂಗಾ ನದಿಗೆ ಬಾಗಿನ ಅರ್ಪಿಸಿದ ಆರ್ ಎಂ ಮಂಜುನಾಥ್ ಗೌಡ..!

ತೀರ್ಥಹಳ್ಳಿ :ತುಂಗಾ ನದಿಗೆ ಬಾಗಿನ ಅರ್ಪಿಸಿದ ಆರ್ ಎಂ ಮಂಜುನಾಥ್ ಗೌಡ..!

by EDITOR NEWS WARRIORS
0 comments

ತೀರ್ಥಹಳ್ಳಿ: ಪುನರ್ವಸು ಮಳೆಯ ಅಬ್ಬರ ಹೆಚ್ಚಾಗಿದ್ದು ತುಂಗಾ ನದಿ ಮೈದುಂಬಿ ಹರಿಯುತ್ತಿದೆ ಪುರಾಣ ಪ್ರಸಿದ್ಧ ರಾಮಮಂಟಪ. ಮುಳುಗುವ ಹಂತಕ್ಕೆ ತಲುಪಿದ್ದು ಬುಧವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ರವರು ತುಂಗಾ ನದಿಗೆ ಭಾಗಿನ ಅರ್ಪಿಸಿದರು.

ಬುಧವಾರ ತುಂಗಾ ನದಿಯ ದಡದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆಗೆ ಆಗಮಿಸಿ ಬಾಗಿನ ಅರ್ಪಿಸಿದರು . ಶಾಂತ ರೀತಿಯಲ್ಲಿ ತುಂಗೆಯು ಹರಿಯಲಿ, ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಿ ಎಂದು ಬೇಡಿಕೆಯನ್ನಿಟ್ಟು ತೀರ್ಥಹಳ್ಳಿಯ ತುಂಗಾ ನದಿಗೆ ಭಕ್ತಿ ಭಾವದಿಂದ ಬಾಗಿನ ಸಮರ್ಪಿಸಿದ್ದೇನೆ ಕಳೆದ ವರ್ಷ ಮಳೆ ಕಡಿಮೆಯಾಗಿ ಮಲೆನಾಡು ಕೂಡ ಬಯಲು ಸೀಮೆ ರೀತಿ ಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿತ್ತು. ಕುಡಿಯುವ ನೀರಿಗೂ ತೊಂದರೆ ಆಗಿತ್ತು. ರಾಮೇಶ್ವರನ ಅನುಗ್ರಹದಿಂದ ಪುನರ್ವಸು ಮಳೆ ಚೆನ್ನಾಗಿ ಆಗಿದೆ.ಇಲ್ಲಿಯವರೆಗೆ ತೀರ್ಥಹಳ್ಳಿಯಲ್ಲಿ ಎಲ್ಲೂ ಅಪಾಯ ಆಗಿಲ್ಲ. ಜನರಿಗೆ, ಜಾನುವಾರುಗಳಿಗೆ ಯಾರಿಗೂ ಕೂಡ ಅಪಾಯವಾಗದ ರೀತಿಯಲ್ಲಿ ಆಶೀರ್ವಾದ ಮಾಡಲಿ ಎಂದರು.

ಈ ವರ್ಷ ಇನ್ನು ಚೆನ್ನಾಗಿ ಮಳೆಯಾಗಲಿ, ಬೇಸಿಗೆಯಲ್ಲೂ ಸಹ ಕಳೆದ ವರ್ಷದ ಕಹಿ ನೆನಪು ಮರೆಸುವ ರೀತಿಯಲ್ಲಿ ತುಂಗೆಯು ಹರಿಯಲಿ, ರಾಮೇಶ್ವರ ನಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಯಾವುದೇ ಸಾವು ನೋವು ಆಗದೇ ಶಾಂತಿಯಿಂದ ಮಳೆ ಮುಂದುವರಿಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ರಹಮತುಲ್ಲಾ ಅಸಾದಿ, ಬಿ. ಗಣಪತಿ, ರಾಘವೇಂದ್ರ ಶೆಟ್ಟಿ,ಡಾ. ಸುಂದರೇಶ್, ಕೆಸ್ತೂರು ಮಂಜುನಾಥ್, ವೈ ನಾಗೇಂದ್ರ, ಕುರುವಳ್ಳಿ ನಾಗರಾಜ್ ಅರ್ಜುನ ಗೌಡ ನಾಗೇಶ್ ಮೇಳಿಗೆ ಸಂದೀ್ ಗಾಡ್ರುಗದ್ದೆ ಸುಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!