ಹಾವೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಆರು ವರ್ಷಗಳಿಂದ ಕಾರ್ಯನಿರ್ವಹಿಸಿ ಇತ್ತೀಚಿಗೆ ವರ್ಗಾವಣೆಯಾಗಿದ್ದ ಡಾ/ರಾಜೇಶ್ ಸುರಗಿಹಳ್ಳಿ ಮಂಗಳವಾರ ಹಾವೇರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಯಾಗಿದ್ದರು ಅವರ ಸ್ಥಳಕ್ಕೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಟರಾಜ್ ಅವರು ವರ್ಗಾವಣೆಯಾಗಿ ಬಂದಿರುತ್ತಾರೆ.
ಕಳೆದ ಆರು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಬಂದ ರಾಜೇಶ್ ಸುರುಗಿಹಳ್ಳಿ ಆಗ ವ್ಯಾಪಕವಾಗಿ ಹರಡಿದ್ದ ಕೆ ಎಫ್ ಡಿ ಮಂಗನ ಕಾಯಿಲೆ ನಿಯಂತ್ರಣ ಮಾಡುವಲ್ಲಿ ಒಂದಷ್ಟು ಯಶಸ್ಸು ಕಂಡಿದ್ದರು ಹಾಗೆ ಮುಂದೆ ಬಂದ ಕೋವಿಡ್ ನಂತಹ ಮಹಾಮಾರಿ ಭೀಕರ ಸಾಂಕ್ರಮಿಕ ಕಾಯಿಲೆ ಸಮಯದಲ್ಲೂ ಹಿರಿಯ ಕಿರಿಯ ಸಿಬ್ಬಂದಿಗಳ ಸಹಕಾರದಿಂದ ಹಗಲು ರಾತ್ರಿ ಎನ್ನದೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ಪ್ರತಿಯೊಬ್ಬರಿಗೂ ಸ್ಪಂದಿಸುತ್ತಿದ್ದ ರಾಜೇಶ್ ಸುರುಗಿಹಳ್ಳಿ ಬಗ್ಗೆ ಒಂದಷ್ಟು ಆರೋಪಗಳು ಆಪಾದನೆಗಳು ಇತ್ತು ಇದನ್ನು ಹೊರತುಪಡಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಹಾಗೆ ತಮ್ಮ ಹಿರಿಯ, ಕಿರಿಯ ಸಿಬ್ಬಂದಿಗಳೂಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರು.
ಈಗ ಹಾವೇರಿ ಜಿಲ್ಲೆಯಲ್ಲಿ ಖಾಲಿ ಇದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಹಾವೇರಿ ಜಿಲ್ಲೆಯಲ್ಲೂ ಕೂಡ ವ್ಯಾಪಕವಾಗಿ ಡೆಂಗ್ಯೂ ಹಬ್ಬಿದೆ ಸುರಗಿಹಳ್ಳಿಯವರಿಗೆ ಇದು ಕೂಡ ಸವಾಲಾಗಿದೆ. ಹಾವೇರಿಯಲ್ಲಿ ಕೂಡ ಶಿವಮೊಗ್ಗದ್ದ ಹಾಗೆ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿ ಎನ್ನುವುದು ಅವರ ಆತ್ಮೀಯರ ಆಶಯ.