
ಶಿವಮೊಗ್ಗ: ಸೆಂಟ್ರಲ್ ಜೈಲಿಗೆ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ ತಂಡ ದಿಢೀರನೆ ದಾಳಿ ನೀಡಿದ್ದು ಇಂದು ಮುಂಜಾನೆ ಸುಮಾರು 3:00 ಗಂಟೆಗೆ ಹೊತ್ತಿಗೆ ದಿಡೀರ್ ದಾಳಿ ನಡೆದಿದ್ದು ಸುಮಾರು ನಾಲ್ಕು ಗಂಟೆಗಳ ಕಾಲ ಇಡೀ ಜೈಲನ್ನು ತಪಾಸಣೆ ನಡೆಸಿದ್ದಾರೆ.
ಕುತೂಹಲ ಮೂಡಿಸಿದ ಎಸ್ಪಿ ನೇತೃತ್ವದ ದಾಳಿ :
ಎಸ್ ಪಿ ನೇತೃತ್ವದ ತಂಡ ಜೈಲಿಗೆ ಧಿಡೀರ್ ದಾಳಿ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ ಏಕೆಂದರೆ ಎಸ್ ಪಿ ಮಿಥುನ್ ಕುಮಾರ್ ಸಾಕಷ್ಟು ಸಲ ಜೈಲಿಗೆ ತಮ್ಮ ಸಿಬ್ಬಂದಿಗಳೊಡನೆ ದಿಢೀರ್ ದಾಳಿ ನಡೆಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅಡಿಷನಲ್ ಎಸ್ಪಿ ನೇತೃತ್ವದ ತಂಡ ಕೂಡ ದಿಢೀರ್ ದಾಳಿ ನಡೆಸಿದೆ. ಹೀಗಿದ್ದಾಗು ಕೂಡ ಜೈಲಿನಲ್ಲಿ ಕೆಲವೊಂದು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಹೊರ ಜಗತ್ತಿಗೆ ಕಂಡುಬರುತ್ತಿದೆ ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಬಸವೇಶ್ ನಿಗೆ ಜೈಲಿನಿಂದಲೇ ಕೊಲೆಗೆ ಸಂಚು ರೂಪಿಸಿದ್ದು ಇತ್ತೀಚಿಗೆ ಬೆಳಕಿಗೆ ಬಂದಿತ್ತು. ಇದೆಲ್ಲಾ ಹೇಗೆ ಸಾಧ್ಯ ಜೈಲಿನಲ್ಲಿ ಮೊಬೈಲ್ ಸಿಗುತ್ತಾ..? ತಮಗೆ ಬೇಕಾದ ಸೌಲಭ್ಯಗಳನ್ನು ಬಳಸಿಕೊಂಡು ಜೈಲಿನಲ್ಲಿ ಕೈದಿಗಳು ಸುಖವಾಗಿ ಇದ್ದಾರಾ..? ಕೆಲವೊಂದು ನಟೋರಿಯಸ್ ರೌಡಿಗಳು ತಮ್ಮ ವರ್ಚಸ್ಸನ್ನು ಬಳಸಿಕೊಂಡು ಜೈಲಿನಲ್ಲಿ ಆರಾಮಾಗಿದ್ದಾರಾ..? ಎನ್ನುವ ಹಲವು ಪ್ರಶ್ನೆಗಳು ಮೂಡುತ್ತವೆ.
ಏಕೆಂದರೆ ಜೈಲಿನಲ್ಲಿ ಎಲ್ಲಾ ವ್ಯವಸ್ಥೆಗಳು ಸಿಗುತ್ತವೆ ಎನ್ನುವುದು ಲೋಕ ರೂಢಿ ಮಾತು ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಂದ ವಿಡಿಯೋ ಹಾಗೂ ಫೋಟೋಗಳು ಇದಕ್ಕೆ ಸಾಕ್ಷಿ ಹಿಂದಿನಿಂದಲೂ ಕೂಡ ಜೈಲು ಅಕ್ರಮದ ತಾಣವಾಗಿ ಮಾರ್ಪಟ್ಟಿದೆ ಇದಕ್ಕೆ ಇಲ್ಲಿನ ಅಧಿಕಾರಿಗಳು ಕೂಡ ದುಡ್ಡಿನ ಆಸೆಗ ಬಿದ್ದು ಸಾತ್ ನೀಡುತ್ತಿದ್ದಾರೆ.
ಹೀಗಾಗಿ ಪುಡಿ ರೌಡಿಗಳು ಸೇರಿದಂತೆ ಪಾತಕ ಲೋಕದ ನಟೋರಿಯಸ್ ರೌಡಿಗಳು ತಮಗೆ ಬೇಕಾದಂತೆ ಆರಾಮಾಗಿ ಜೀವಿಸುತ್ತಿದ್ದಾರೆ. ಇದು ಸಾಲದೆಂಬಂತೆ ಜೈಲಿನಿಂದಲೇ ತಮ್ಮ ನೆಟ್ವರ್ಕ್ ಬಳಸಿಕೊಂಡು ತಮ್ಮ ವಿರೋಧಿಗಳಿಗೆ ಚಟ್ಟ ಕಟ್ಟುವ ಪ್ಲಾನ್ ಹಾಕುತ್ತಿದ್ದಾರೆ. ಇದರಲ್ಲಿ ಕೆಲವರು ಸಕ್ಸಸ್ ಕೂಡ ಆಗಿದ್ದಾರೆ. ಇವೆಲ್ಲ ಬೆಳವಣಿಗೆಗಳ ಮಧ್ಯ ರೇಣುಕಸ್ವಾಮಿ ಕೊಲೆ ಪ್ರಕರಣದ ದರ್ಶನ್ ಗ್ಯಾಂಗ್ ನ ಕೆಲವು ಪ್ರಮುಖ ಆರೋಪಿಗಳು ಶಿವಮೊಗ್ಗಕ್ಕೆ ಶಿಫ್ಟ್ ಆಗುವ ಸಾಧ್ಯತೆಯಿದ್ದು ಆ ದಿಕ್ಕಿನಲ್ಲೂ ಎಸ್ ಪಿ ದಾಳಿ ನೀಡಿರುವುದು ಪ್ರಾಮುಖ್ಯತೆ ಪಡೆದಿದೆ .
ಎಸ್ ಪಿ ಮಿಥುನ್ ಕುಮಾರ್ ಜೈಲಿನಲ್ಲಿ ಬೀಡಿ ಬಿಟ್ಟರೆ ಬೇರೇನು ಸಿಕ್ಕಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ.
ನಟ ದರ್ಶನ್ ವಿಡಿಯೋ ವೈರಲ್ ಬೆನ್ನಲ್ಲೇ ಏಳು ಜನ ಜೈಲಿನ ಸಿಬ್ಬಂದಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.
ಎಸ್ ಪಿ ಮಿಥುನ್ ಕುಮಾರ್ ನೇತೃತ್ವದ 100ಜನ ಸಿಬ್ಬಂದಿಗಳನ್ನು ಒಳಗೊಂಡ ತಂಡದಲ್ಲಿ ಪ್ರಮುಖವಾಗಿ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಎ ಜಿ ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ, ಕೃಷ್ಣ ಮೂರ್ತಿ, ಡಿವೈಎಸ್.ಪಿ, ಡಿ.ಎ.ಆರ್, ಶಿವಮೊಗ್ಗ ಮಂಜುನಾಥ್ ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ, ರವಿ ಪಾಟೀಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ದೀಪಕ್ ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ, ಸತ್ಯ ನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಪ್ರಶಾಂತ್ ಸಶಸ್ತ್ರ ಪೊಲೀಸ್ ನಿರೀಕ್ಷಕರು, ಡಿಎಆರ್ ಶಿವಮೊಗ್ಗ ಹಾಗೂ 2 ಪಿಎಸ್ಐ ಒಳಗೊಂಡ ಸಿಬ್ಬಂದಿಗಳ ತಂಡ ದಾಳಿ ನಡೆಸಿ ನಡೆಸಿದೆ.