ಬಳ್ಳಾರಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿದ್ದು ಇದೀಗ ಅಲ್ಲಿನ ಜೈಲಿನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವಿಡಿಯೋ ಹಾಗೂ ಫೋಟೋ ರಿಲೀಸ್ ಆಗಿದ್ದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ ಈ ಸಂಬಂಧವಾಗಿ ಜೈಲಿನ 7 ಸಿಬ್ಬಂದಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿದೆ.
ದರ್ಶನ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ನಟ ದರ್ಶನ್ ಅನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ನಿರ್ಧರಿಸಿದ್ದು ಬಳ್ಳಾರಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ನಿರ್ಧರಿಸಿದೆ.
ಹೇಗಿದೆ ಗೊತ್ತಾ ಬಳ್ಳಾರಿ ಹಿಂಡಲಗಾ ಜೈಲ್..?!
ಬಳ್ಳಾರಿಯ ಹಿಂಡಲಗಾ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು ದುಡ್ಡಿದ್ದರೆ ಗಾಂಜಾ ಬಿಡಿ ಸಿಗರೇಟ್ ಮಧ್ಯ ಎಲ್ಲವೂ ಸಿಗಲಿದೆ ಹಾಗಾಗಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರವು ಒಂದೇ ಬಳ್ಳಾರಿ ಒಂದೇ ಯಾವುದೇ ವ್ಯತ್ಯಾಸವಿಲ್ಲ ಇಲ್ಲಿ ವಿಐಪಿ ಗಳಿಗೆ ಮಹತ್ವದ ಟ್ರೀಟ್ಮೆಂಟ್ ನೀಡುತ್ತಾರೆ. ಎಂದು ಆರು ವರ್ಷಗಳ ಕಾಲ ಕೈದಿಯಾಗಿ ಇದ್ದ ಜಯಸಿಂಹ ಎನ್ನುವ ಮಾಜಿ ಕೈದಿ ಒಬ್ಬ ಸ್ಪೋಟಕ ಹೇಳಿಕೆ ನೀಡಿದ್ದಾನೆ.