ಶಿವಮೊಗ್ಗ : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ನಡೆದಿದ್ದು 15 ಇನ್ಸ್ಪೆಕ್ಟರ್ಗಳ ವರ್ಗಾವಣೆ ಆಗಿದೆ ಅದರಲ್ಲಿ ಶಿವಮೊಗ್ಗದ ಇಬ್ಬರು ಸೇರಿದ್ದಾರೆ.
ಶಿವಮೊಗ್ಗದ ತುಂಗಾ ನಗರದಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು ಅವರ ಸ್ಥಳಕ್ಕೆ ಕೆ ಟಿ ಗುರುರಾಜ್ ವರ್ಗಾವಣೆಯಾಗಿ ಬಂದಿದ್ದಾರೆ.
ಹಾಗೆ ಸಿ ಇ ಎನ್ ನಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಎಂಎಸ್ ವರ್ಗಾವಣೆಯಾಗಿದ್ದು ಅವರಿಗೆ ಇನ್ನೂ ಸ್ಥಳ ತೋರಿಸಿಲ್ಲ ಅವರ ಸ್ಥಳಕ್ಕೆ ಹಿಂದೆ ತುಂಗಾನಗರದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು ನಂತರ ಪದೊನ್ನತಿ ಹೊಂದಿ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡ ಮಂಜುನಾಥ್ ಶಿವಮೊಗ್ಗ ಸೆನ್ ಗೆ ವರ್ಗಾವಣೆಯಾಗಿದ್ದಾರೆ.
ಆಯಾಕಟ್ಟಿನ ಜಾಗಗಳಿಗಾಗಿ ಭಾರಿ ಪೈಪೋಟಿ :
ಸಾಮಾನ್ಯವಾಗಿ ಸರ್ಕಾರಗಳು ಆಡಳಿತದ ಹಿತ ದೃಷ್ಟಿಯಿಂದ ಒಂದಷ್ಟು ವರ್ಗಾವಣೆಗಳನ್ನು ಮಾಡಿದರೆ ಕೆಲವು ಅಧಿಕಾರಿಗಳೇ ಆಯಾಕಟ್ಟಿನ ಜಾಗಗಳಿಗಾಗಿ ತಮ್ಮ ಶಿಫಾರಸ್ಸುಗಳನ್ನು ಬಳಸಿಕೊಂಡು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಇದು ವ್ಯವಸ್ಥೆಯಲ್ಲಿ ಮಾಮೂಲು ಕೆಲವೊಂದು ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದರೆ ಅವರಿಗೆ ಎಲ್ಲವೂ ಸುಸೂತ್ರ ಹಾಗಾಗಿ ಅದೇ ಸ್ಥಳಗಳನ್ನು ಅವರು ಆರಿಸಿಕೊಂಡಿರುತ್ತಾರೆ ಅದಕ್ಕೋಸ್ಕರ ಶಿಫಾರಸ್ಸು ಹಣ ಎಲ್ಲವೂ ಖರ್ಚಾಗಿರುತ್ತದೆ ಯಥಾಪ್ರಕಾರ ಅದನ್ನು ಹಿಂಪಡೆಯಲು ಇಲ್ಲಿ ಕಸರತ್ತು ಪ್ರಾರಂಭವಾಗುತ್ತದೆ .
ವರ್ಗಾವಣೆಯಾಗಿ ಹೋದವರು ವಾಪಸ್ ಬಂದರು ಆಶ್ಚರ್ಯ ಇಲ್ಲ ಹಾಗೆ ಒಂದಷ್ಟು ಜನ ವರ್ಗಾವಣೆಯಾಗಿ ಹೋದರು ಆಶ್ಚರ್ಯವಿಲ್ಲ ಆದರೆ ಕೆಲವು ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕಾದ ಅವಶ್ಯಕತೆ ಇರುತ್ತದೆ ಅವರಿಂದ ಒಂದಷ್ಟು ಕಾನೂನಿನ ವ್ಯವಸ್ಥೆ ಉತ್ತಮವಾಗುವುದರಲ್ಲಿ ಸಂಶಯವಿಲ್ಲ ಆದರೆ ಕೆಲವು ಅಧಿಕಾರಿಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಓಡಾಡಿಕೊಂಡು ಇಲ್ಲೇ ವರ್ಗಾವಣೆ ಮಾಡಿಕೊಂಡು ಇದ್ದಾರೆ ಅಂತವರ ವರ್ಗಾವಣೆಯಾದರೆ ಒಳಿತು ವ್ಯವಸ್ಥೆ ಒಳಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವವರ ವರ್ಗಾವಣೆಯಾದರೆ ಆಡಳಿತದ ಹಿತದೃಷ್ಟಿಯಿಂದ ಕಷ್ಟ ಆ ದಿಕ್ಕಿನಲ್ಲಿ ಸಚಿವರ ಚಿಂತನೆ ಇರಲಿ ಎನ್ನುವುದು ಸಾರ್ವಜನಿಕರ ಕಳಕಳಿ..
ರಘುರಾಜ್ ಹೆಚ್.ಕೆ..9449553305…