ಶಿವಮೊಗ್ಗ: ಜಿಲ್ಲೆಯ ನೂತನ ಡಿಡಿಪಿಐ ಆಗಿ ಮಂಜುನಾಥ್ ಅಧಿಕಾರ ಸ್ವೀಕರಿಸಿದ್ದು ನಿವೃತ್ತಿ ಅಂಚಿನಲ್ಲಿದ್ದ ಪರಮೇಶ್ವರಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಿವೃತ್ತಿಗೆ ಕೇವಲ 8 ರಿಂದ 10 ತಿಂಗಳು ಇದ್ದ ಪರಮೇಶ್ವರಪ್ಪ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಹಿಂದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಬಿಇಓ ಆಗಿ ನಂತರ ಶಿವಮೊಗ್ಗ ಜಿಲ್ಲೆಯ ಬಿಸಿಎಂ ಆಫೀಸರ್ ಆಗಿ ಚಿಕ್ಕಮಂಗಳೂರಿನಲ್ಲಿ ಎಜುಕೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದ ಮಂಜುನಾಥ್ ಅವರನ್ನು ಪರಮೇಶ್ವರಪ್ಪ ಅವರ ಸ್ಥಳಕ್ಕೆ ವರ್ಗಾಯಿಸಲಾಗಿದೆ.