
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಹೋನ್ನೆತಾಳು ಶಾಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದ್ದು.
ಆಗುಂಬೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಅತ್ಯಂತ ಅಭೂತಪೂರ್ವ ಯಶಸ್ವಿಗೆ ಸಹಕರಿಸಿದ ಶಾಲೆಯ ಶಿಕ್ಷಕ ಬಳಗ, ಎಸ್ ಡಿ ಎಂ ಸಿ ಎಲ್ಲಾ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊನ್ನೇತಾಳು, ಸಹಕಾರ ನೀಡಿದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆಯವರು, ರಕ್ಷಣಾ ಇಲಾಖೆಯವರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ದಾನಿಗಳಿಗೂ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಯ ಮಕ್ಕಳಿಗೂ, ಎಲ್ಲಾ ಶಿಕ್ಷಕರಿಗೂ, ಕ್ರೀಡಾಕೂಟಕ್ಕೆ ಆಗಮಿಸಿದ ವಿವಿಧ ಗ್ರಾಮದ ಎಸ್‌ಡಿಎಂಸಿಯವರಿಗೂ, ಪೋಷಕರಿಗೂ ಕ್ರೀಡಾಕೂಟಕ್ಕೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೂ, ಸಹ ಶಿಕ್ಷಕರಿಗೂ ಮತ್ತು ನಿವೃತ್ತ ಶಿಕ್ಷಕರಿಗೂ ಹೋನ್ನೆ ತಾಳು ಶಾಲೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭಕೋರಿದ ತೀರ್ಥಹಳ್ಳಿ ತಾಲ್ಲೂಕಿನ ಶಾಸಕರಿಗೂ ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆಯವರೆಗೂ ಜೊತೆಗಿದ್ದು ಸಂಪೂರ್ಣ ಸಹಕಾರ ನೀಡಿದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಗ್ರಾಮ ಪಂಚಾಯತಿ ಹೊನ್ನೇತಾಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿವರ್ಗದವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮಾರ್ಗದರ್ಶನ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಬಿ.ಇ.ಓ, ಟಿ.ಪಿ.ಇ.ಓ, ಶಿಕ್ಷಣ ಸಂಯೋಜಕರು, ಸಿ.ಆರ್.ಪಿ ಯವರಿಗೂ ಅನಂತ ಧನ್ಯವಾದಗಳು.ಕ್ರೀಡಾಂಗಣ ಸಹಕಾರ ನೀಡಿದ ಗುಡ್ಡೇಕೇರಿ ಶಾಲೆಯ ಎಲ್ಲಾ ಶಿಕ್ಷಕರು ಅಧ್ಯಕ್ಷರು ಮತ್ತು ಸದಸ್ಯರು ಎಸ್.ಡಿ.ಎಂ.ಸಿ, ಸರ್ಕಾರಿ ಪ್ರೌಢ ಶಾಲೆ ಹೊಸೂರು-ಗುಡ್ಡೇಕೇರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರುಗಳಿಗೂ ಅನಂತ ವಂದನೆಗಳನ್ನು ಅರ್ಪಿಸಿದ್ದಾರೆ.