ಶಿವಮೊಗ್ಗ: ಜನಸ್ನೇಹಿ, ಉತ್ತಮ ಕೆಲಸಗಾರ, ತನ್ನ ಜೊತೆಗೆ ಕೆಲಸ ಮಾಡುವರ ಜೊತೆ, ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಸದಾ ಬೇರೆಯವರ ಸಮಸ್ಯೆಗೆ ಸ್ಪಂದಿಸುತ್ತಿದ್ದ ನಗರದ ವಿದ್ಯಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ರೆಡ್ಡಿ ಮಣಿಪಾಲ್ ನಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಳೆದ ಹಲವಾರು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ರೆಡ್ಡಿ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು ಕೂಡ ತಲೆಯಲ್ಲಿ ರಕ್ತ ಗಟ್ಟಿಯಾಗದ ಕಾರಣ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ಅಕಾಲಿಕ ಅಗಲಿಕೆಗೆ ಸಹೋದ್ಯೋಗಿಗಳು, ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಬಂದು ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತ ದಿಲೀಪ್ ರೆಡ್ಡಿ ತಾಯಿ, ಪತ್ನಿ ಜೊತೆಗೆ ಒಂದುವರೆ ವರ್ಷದ ಮಗುವನ್ನು ಬಿಟ್ಟು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಇಂದು ರಾತ್ರಿ 12 ಗಂಟೆಗೆ ಶಿವಮೊಗ್ಗ ನಗರದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ತಂದು ನಂತರ ಇವರ ಹುಟ್ಟೂರಾದ ಚನ್ನಗಿರಿ ತಾಲೂಕು ಮರಡಿ ಗ್ರಾಮದಲ್ಲಿ ಸೆ. 12 ರ ಗುರುವಾರ ಮಧ್ಯಾಹ್ನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಅವರ ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ.
ದಿಲೀಪ್ ರೆಡ್ಡಿ ಅವರ ಅಕಾಲಿಕ ನಿಧನಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು,ಸಹ ಸಿಬ್ಬಂದಿಗಳು, ಬಂಧು ಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.