
ಶಿವಮೊಗ್ಗ: ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿರುವಂತಹ ನ್ಯೂ ಮಂಡಲಿ ಸರ್ಕಲ್ ನಲ್ಲಿ ಚೆನ್ನಾಗಿದ್ದ ಹೈವೇ ರೋಡನ್ನು 7 8 ದಿವಸ ಗಳ ಹಿಂದೆ ಅಗೆದು ಕೆ ಇ ಬಿ ಯಾ ಒಂದು ಕಾಮಗಾರಿಯನ್ನು ಮಾಡಿ ಮುಗಿಸಿದ್ದಾರೆ.
ಕೆಲಸ ಮುಗಿದ ನಂತರ ಆ ರಸ್ತೆಯನ್ನು ಸರಿಯಾಗಿ ಮುಚ್ಚದೆ ಗುಂಡಿಗಳನ್ನು ಮಾಡಿ ಹೋಗಿರುತ್ತಾರೆ ಕಾರ್ಯನಿರ್ವಹಿಸುತ್ತಿದ್ದಂತಹ ಅಧಿಕಾರಿಗಳನ್ನು ಸತತವಾಗಿ ಮೂರು ನಾಲ್ಕು ದಿನಗಳಿಂದ ಸ್ಥಳೀಯರು ಸಂಪರ್ಕಿಸಿದರು ಏನು ಪ್ರಯೋಜನವಾಗಿಲ್ಲ.
ಮೊದಲನೆಯ ದಿನ ಸಂಪರ್ಕಿಸಿದ್ದಾಗ ನಾಳೆ ಗುಂಡಿಗಳನ್ನು ಮುಚ್ಚಿ ಕೊಡುತ್ತೇನೆ ಎಂದಿದ್ದರು ಆದರೆ ಈ ದಿನ ಕರೆ ಮಾಡಿದ್ದಾಗ ಹೇಳುತ್ತಾರೆ ಅವರಿಗೆ ಹೇಳಿದ್ದೇವೆ ಇವರಿಗೆ ಹೇಳಿದ್ದೇವೆ ಅಂತ ಅಲ್ಲಿ ಓಡಾಡಲಿಕ್ಕೆ ತುಂಬಾನೇ ತೊಂದರೆಯಾಗುತ್ತಿದೆ ಶಾಲಾ ವಾಹನಗಳು ಹಾಗೂ ವೃದ್ಧರು ಹೆಣ್ಣು ಮಕ್ಕಳು ದೊಡ್ಡ ದೊಡ್ಡ ವಾಹನಗಳಲ್ಲಿ ಸಂಚರಿಸುವಾಗ ಅಲ್ಲಿ ತುಂಬಾ ಧೂಳು ಬರುತ್ತಿದೆ ಅನಾರೋಗ್ಯಕ್ಕೆ ತುತ್ತಾಗುವ ಸ್ಥಿತಿ ಉಂಟಾಗುತ್ತಿದೆ ತುಂಬಾ ತೊಂದರೆಯಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ, ನೌಕರರು ಕೆಲಸಕ್ಕೆ ತೆರಳುವಾಗ ಅಪಘಾತಗಳು ಸಂಭವಿಸುತ್ತಿದ್ದು ದೊಡ್ಡ ಅಪಘಾತ ಆಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬೇಗ ಗುಂಡಿಗಳನ್ನು ಮುಚ್ಚಿಸಿಲಿ ಎನ್ನುವುದು ಸ್ಥಳೀಯರ ಹಾಗೂ ಅಲ್ಲಿ ಓಡಾಡುವ ವಾಹನ ಸವಾರರ ಮನವಿ.
ಕೋಣಂದೂರಿನಲ್ಲೂ ಸಹ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಮರದ ತುಂಡುಗಳನ್ನು ಕಡಿದು ಹಾಗೆ ಬಿಟ್ಟಿದ್ದು ವಾಹನಸವಾರರ ಓಡಾಟಕ್ಕೆ ಅಡಚಣೆ ಉಂಟಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿ ಮಾಡಿ ಮರದ ತುಂಡುಗಳನ್ನು ತೆರವುಗೊಳಿಸಿ ಓಡಾಟಕ್ಕೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎನ್ನುವುದು ಸ್ಥಳೀಯರ ಮನವಿ.
