
ಭದ್ರಾವತಿ: ಇಂದು ನಗರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂ ಬಾಂಧವರು ಮೆರವಣಿಗೆಯ ಸಂದರ್ಭದಲ್ಲಿ ಮಜ್ಜಿಗೆ ವಿತರಣೆ ಮಾಡುವುದರ ಮೂಲಕ ನಿಮ್ಮ ಹಬ್ಬದಲ್ಲಿ ನಾವು ಕೂಡ ಬಾಗಿ ಎನ್ನುವ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್, ರಾಜ್ ಚೋಪ್ರಾ, ಪ್ರಶಾಂತ್, ಡಾ| ವಿಕ್ರಂ, ಸುದರ್ಶನ್, ಹೆಚ್ ಎಸ್ ಮಂಜು, ಗಿರೀಶ್ ಶೆಟ್ಟಿ, ಧರ್ಮ ಮತ್ತು ಸ್ನೇಹಿತರರು ಮುಸ್ಲಿಂ ಬಾಂಧವರಿಗೆ ಮಜ್ಜಿಗೆ ವಿತರಣೆ ಮಾಡಿ ಸೌಹಾರ್ದತೆ ಹಾಗು ಪ್ರೀತಿಯ ಸಂದೇಶ ಸಾರುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿರುತ್ತಾರೆ.