
ದಾವಣಗೆರೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಇಂದು ನ್ಯಾಮತಿ ತಾಲೂಕಿನ ಚೀಲೂರಿನ ಬಳಿ ಮರಳಿನ ಹಣ ಹಂಚಿಕೆ ವಿಚಾರವಾಗಿ ಕೊಲೆ ನಡೆದಿರುವುದು ಸಾಕ್ಷಿ ಆಗಿದೆ.
ಮರಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವರಾಜ್ ಎಂಬಾತನನ್ನು ಕಡದಕಟ್ಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸತೀಶ್ ಹಾಗೂ ಆತನ ಮಗ ಅಭಿಷೇಕ್ ಮತ್ತು ಗುಂಪು ಕೊಲೆ ಮಾಡಿದ್ದು ಇನ್ನೊಬ್ಬ ಭರತ್ ಎಂಬುವವನಿಗೆ ಗಂಭೀರ ಗಾಯವಾಗಿದ್ದು ಮರಳಿನ ಹಣ ಹಂಚಿಕೆ ವಿಚಾರವಾಗಿ ಈ ಹಲ್ಲೇ ಹಾಗೂ ಕೊಲೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ.