Wednesday, April 30, 2025
Google search engine
Homeಭದ್ರಾವತಿಬಸವೇಶ್ ಹಠಾವೋ ಭದ್ರಾವತಿ ಬಚಾವೋ ಬಿಹಾರ್ ಮತ್ ಬನವೋ..! ಲೋಕಾಯುಕ್ತರಿಂದ ದಾಖಲಾಗುತ್ತಾ ಸುಮೋಟೋ ಕೇಸ್..?!

ಬಸವೇಶ್ ಹಠಾವೋ ಭದ್ರಾವತಿ ಬಚಾವೋ ಬಿಹಾರ್ ಮತ್ ಬನವೋ..! ಲೋಕಾಯುಕ್ತರಿಂದ ದಾಖಲಾಗುತ್ತಾ ಸುಮೋಟೋ ಕೇಸ್..?!

ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕು ಹಿಂದೆ ವಿ ಐ ಎಸ್ ಎಲ್ ಹಾಗೂ ಎಂಪಿಎಂ ನಂತಹ ಕಾರ್ಖಾನೆಗಳಿಗೆ ಹೆಸರುವಾಸಿಯಾಗಿದ್ದು ಉಕ್ಕಿನ ನಗರಿ ಎದ್ದು ಕೀರ್ತಿ ಪಡೆದಿತ್ತು ಹಲವು ಜನರಿಗೆ ಉದ್ಯೋಗ ಸಿಕ್ಕಿದ್ದು ರಾಜ್ಯದಲ್ಲಿಯೇ ಭದ್ರಾವತಿಗೆ ಉತ್ತಮ ಹೆಸರು ಇತ್ತು ಆಗ ಕೂಡ ಇಸ್ಪೀಟ್ ಓಸಿ ಅಂತಹ ದಂಧೆಗಳು ನಡೆಯುತ್ತಿದ್ದವು ಜೊತೆಗೆ ಅಪ್ಪಾಜಿ ಗೌಡ ವರ್ಸಸ್ ಸಂಗಮೇಶ್ ಹೋರಾಟ ನಿರಂತರವಾಗಿತ್ತು ಒಂದು ಚುನಾವಣೆಯಲ್ಲಿ ಸಂಗಮೇಶ್ ಗೆದ್ದರೆ ಮತ್ತೊಂದು ಚುನಾವಣೆಯಲ್ಲಿ ಅಪ್ಪಾಜಿ ಗೌಡ ಗೆಲ್ಲುತ್ತಿದ್ದರು ಈ ಹೋರಾಟಗಳು ನಿರಂತರವಾಗಿ ಇಬ್ಬರ ನಡುವೆ ನಡೆಯುತ್ತಿದ್ದವು .

ಈಗ ಏನಾಗಿದೆ ಭದ್ರಾವತಿಗೆ…?!

ಅದ್ದು ಇದ್ದ ಇಸ್ಪೀಟ್ ಓಸಿ ಮರಳು ಮಾಫಿಯಾ ದಂಧೆ ಇದ್ದು ವ್ಯಾಪಕವಾಗಿ ವಿಸ್ತಾರವಾಗಿದ್ದು ಇದನ್ನು ನಿಯಂತ್ರಿಸಬೇಕಾದ ಶಾಸಕರೇ ಮೌನವಾಗಿದ್ದಾರೆ..?! ಶಾಸಕರ ಪುತ್ರ ಬಸವೇಶ್ ಕೈಯಲ್ಲಿ ಇಡೀ ಭದ್ರಾವತಿ ತಾಲೂಕು ನಲುಗಿ ಹೋಗಿದೆ ಬಸವೇಶ್ ಅಂದರೆ ಸಾಕು ಅಧಿಕಾರಿಗಳ ವಲಯದಲ್ಲಿ ನಡುಕ ಶುರುವಾಗುತ್ತದೆ ಆ ಮಟ್ಟದ ಹಾವಳಿ ಶಾಸಕರ ಮುದ್ದಿನ ಪುತ್ರ ಬಸವೇಶ್ ಇಟ್ಟಿದ್ದಾನೆ‌.

ಅಧಿಕಾರಿಗಳಿಗೆ ಏಕವಚನದಲ್ಲೇ ವಾಗ್ದಾಳಿ..!

ಶಾಸಕ ಸಂಗಮೇಶ್ ಪುತ್ರ ಬಸವೇಶ್ ಯಾವ ಅಧಿಕಾರಿಗಳನ್ನು ಬಿಟ್ಟಿಲ್ಲ ಹೆಸರು ಹೇಳಲು ಇಚ್ಚಿಸಿದ ಕೆಲವು ಅಧಿಕಾರಿಗಳು ಮೌನವಹಿಸಿದ್ದಾರೆ ತಹೀಶೀಲ್ದಾರ್, ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳು, ಈತನ ಮಾತಿಗೆ ಎದುರು ಮಾತನಾಡುವುದಿಲ್ಲ ಒಂದು ವೇಳೆ ಮಾತನಾಡಿದರೆ ಅವರಿಗೂ ಸಂಸ್ಕೃತ ಪದಗಳು ಗ್ಯಾರಂಟಿ, ಒಂದು ವೇಳೆ ಈ ತರ ಅಕ್ರಮ ದಂಧೆ ನಡೆಯುವ ಜಾಗಕ್ಕೆ ಗೊತ್ತಿಲ್ಲದೆ ಅಪ್ಪಿ ತಪ್ಪಿ ಯಾವುದಾದರೂ ಅಧಿಕಾರಿ ಹೋದರಂತೂ ಅವರ ಕಥೆ ಮುಗಿಯಿತು ಬಿಡಿ ಅವರ ಇಡೀ ಕುಟುಂಬ ಈ ತರಹ ಸಂಸ್ಕೃತ ಭಾಷೆಯಲ್ಲಿ ಬಂದುಬಿಡುತ್ತಾರೆ.

ಗಣಿ ಇಲಾಖೆಯ ವಿಜ್ಞಾನಿಯ ಮೇಲೆ ಏಕವಚನದಲ್ಲಿ ವಾಗ್ದಾಳಿ..!

ಗಣಿ ಇಲಾಖೆಯ ವಿಜ್ಞಾನಿಜ್ಯೋತಿ, ಪ್ರಿಯಾ ದೊಡ್ಡ ಗೌಡರ್ ಅವರನ್ನು ಒಳಗೊಂಡ ತಂಡ ಮೊನ್ನೆ ಭದ್ರಾವತಿಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ತಡರಾತ್ರಿ ತಾಳಿ ನಡೆಸಿದ್ದರು ಆ ಸಮಯದಲ್ಲಿ ಶಾಸಕಸಂಗಮೇಶ್ ಪುತ್ರನ ಎಂಟ್ರಿ ಆಗುತ್ತದೆ ಆಗ ನೋಡಿ ಶುರುವಾಗುತ್ತದೆ ಸಂಸ್ಕೃತ ಬಸವೇಶ್ ನ ಬಾಯಿಂದ ….

ಹೇ ಕೊಡೋ ಅವಳಿಗೆ ಫೋನನ್ನು ಫೋನ್ ಮಾಡಿದ್ರೆ ಫೋನ್ ಎತ್ತಕ್ಕಾಗಲ್ವಾ…?! ಆ ಕಡೆಯಿಂದ ಅಧಿಕಾರಿ ಜ್ಯೋತಿ ಇಲ್ಲ ಸಾರ್ ಹೇಳಿ ಏನಾಗಬೇಕು…. ಬಸವೇಶ್ ಏನಾಗಬೇಕು ಅಂತ ಕೇಳ್ತೀಯಾ ನೀವೇನು ಅಲ್ಲಿ ದರೋಡೆ ಮಾಡಕ್ಕೆ ಬಂದಿದ್ದೀರಾ.. ಇಲ್ಲ ಸಾರ್ ನಾವ್ ರೈಡ್ ಮಾಡಕ್ ಬಂದಿದೀವಿ… ಬಸವೇಶ್ ತನ್ನ ಮನೆಯಲ್ಲೂ ತಾಯಿ ತಂಗಿ ಇದ್ದಾರೆ ಎನ್ನುವುದನ್ನು ಮರೆತು ಹೇಳಬಾರದ ಎಲ್ಲಾ ಶಬ್ದಗಳನ್ನು ಹೇಳಿ ಮುಗಿಸುತ್ತಾನೆ…. ಬೇ ಮುಂಡೇ…. ಸೂ ಮುಂಡೆ… ಎನ್ನುವ ಶಬ್ದಗಳಿಂದ ಶುರುವಾಗಿ ಕೊನೆಗೆ ಕೇಳಲಾರದ ಶಬ್ದಗಳಿಂದ ಮುಗಿಸುತ್ತಾನೆ… ಇವನ ಸಂಸ್ಕೃತ ಪದಗಳು ಇವರ ದುರಂಕಾರವನ್ನು ಎತ್ತಿ ತೋರಿಸುತ್ತದೆ..

ಶಿವಮೊಗ್ಗದ ರಾಜಕಾರಣಿಗಳ ಮಕ್ಕಳಿಗೆ ಇಲ್ಲದ ಅಹಂಕಾರ ಬಸವೇಶ್ ನಿಗೆ ಏಕೆ…?!

ಶಿವಮೊಗ್ಗದಲ್ಲಿ ಹಲವು ರಾಜಕಾರಣಿಗಳ ಮಕ್ಕಳು ಈಗಲೂ ಕೂಡ ಸಕ್ರಿಯವಾಗಿ ರಾಜಕಾರಣದಲ್ಲಿ ಇದ್ದಾರೆ ಆದರೆ ಅವರುಗಳು ಎಲ್ಲೂ ಕೂಡ ಈ ತರವಾದ ಕೀಳು ಮಟ್ಟದ ಶಬ್ದಗಳನ್ನು ಬಳಸಿಲ್ಲ ಹಾಗೆ ಈ ತರಹ ಅಕ್ರಮ ದಂಧೆಗಳಿಗೆ ಬೆಂಬಲ ಕೂಡ ನೀಡಿಲ್ಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರರಾದ ಬಿ ವೈ ವಿಜಯೇಂದ್ರ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್, ಯೋಗೀಶ್, ಶರಣ್, ಸೇರಿದಂತೆ ಯಾರೊಬ್ಬರೂ ಈ ತರಹದ ಕೀಳು ಮಟ್ಟಕ್ಕೆ ಇಳಿದಿಲ್ಲ ಅವರಿಗೆ ಮನೆಯಲ್ಲಿ ಒಂದಷ್ಟು ಉತ್ತಮ ವಾತಾವರಣದಲ್ಲಿ ಬೆಳೆಸಿದ್ದಾರೆ ಆದರೆ ಶಾಸಕ ಸಂಗಮೇಶ್ ಪುತ್ರ ಬಸವೇಶನಿಗೆ ‌ ಇದ್ಯಾವುದು ಗೊತ್ತಿಲ್ಲ ತಾನು ಹೇಳಿದ್ದೆ ವೇದ ವಾಕ್ಯ… ಅಪ್ಪನ ಕಂಟ್ರೋಲಿಗೆ ಮಗ ಸಿಗುತ್ತಿಲ್ಲ… ಭದ್ರಾವತಿಯ ಶಾಸಕರ ಪುತ್ರನ ಕಾಟ ತಾಳಲಾರದೆ ಭದ್ರಾವತಿಯ ಜನರು ಸಂಗಮೇಶ್ ಹಟಾವೋ ಭದ್ರಾವತಿ ಬಚಾವೋ ಎನ್ನುತ್ತಿದ್ದಾರೆ…

ಇನ್ನೊಂದು ಬಿಹಾರ್ ಆಗದಿರಲಿ…!

ಭದ್ರಾವತಿ ತಾಲೂಕ್ ಇನ್ನೊಂದು ಬಿಹಾರ್ ರಾಜ್ಯವಾಗದಿರಲಿ ಎನ್ನುವುದು ಪ್ರಜ್ಞಾವಂತ ಶಿವಮೊಗ್ಗ ಜಿಲ್ಲೆಯ ನಾಗರಿಕರ ಆಗ್ರಹ ಏಕೆಂದರೆ ಬಿಹಾರ್ ರಾಜ್ಯದಲ್ಲಿ ಅಕ್ರಮ ಧಂದೆ ಕೋರರು ತಮ್ಮನ್ನು ತಡೆಯಲು ಬಂದ ಅಧಿಕಾರಿಗಳ ಮೇಲೆ ಗಾಡಿ ಹತ್ತಿಸಲು ಹೋಗುವುದು ಜನರನ್ನು ಸಾಯಿಸಿ ಅಲ್ಲೇ ಮುಚ್ಚಿ ಹಾಕುವುದು ಅಧಿಕಾರಿಗಳನ್ನು ಹೊಡೆದು ಸಾಯಿಸುವುದು ಮಾಡುತ್ತಿದ್ದರು ಇತ್ತೀಚಿನ ವರ್ಷಗಳಲ್ಲಿ ಅದು ನಿಯಂತ್ರಣಕ್ಕೆ ಬಂದಿದೆ ಆ ಮಾದರಿಯಲ್ಲಿ ಭದ್ರಾವತಿ ತಾಲೂಕ್ ಆಗದಿರಲಿ ಈಗಲೇ ಇದಕ್ಕೆ ನಿಯಂತ್ರಣ ಹಾಕಿ ಬಸವೇಶ್‌ ನನ್ನು ಬಂಧಿಸಿ ಎನ್ನುವುದು ಭದ್ರಾವತಿ ಜನರ ಆಗ್ರಹ…

ಲೋಕಾಯುಕ್ತರು ಇದರ ಬಗ್ಗೆ ಗಮನಹರಿಸುತ್ತಾರಾ…?!

ಈ ಘಟನೆ ನಡೆದ ಬಳಿಕ ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ದೂರು ಪ್ರತಿ ದೂರಿಗಳು ದಾಖಲು ಆಗಿಲ್ಲ ಪೊಲೀಸ್ ಇಲಾಖೆ ಕೂಡ ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಆದರೆ ಲೋಕಾಯುಕ್ತ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸುಮೊಟೊ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಾರಾ ಕಾದು ನೋಡಬೇಕು…

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...