ಭದ್ರಾವತಿ : ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ ನ್ಯೂ ಟೌನ್ ಪೊಲೀಸ್ ಠಾಣೆಯ ಮಿತಿಯಲ್ಲಿ ಒಂದು ಗುಂಡಿನ ದಾಳಿ ನಡೆದಿದ್ದು.
21 ವರ್ಷದ ನಸ್ರು ಅಲಿಯಾಸ್ ನಸ್ರುಲ್ಲಾ ಎನ್ನುವ ವೆಲ್ಡಿಂಗ್ ಕೆಲಸ ಮಾಡುವ ಅನ್ವರ್ ಕಾಲೋನಿ ನಿವಾಸಿ ಮೇಲೆ ಗುಂಡಿನ ದಾಳಿ ನಡೆದಿದ್ದು ಈತನ ಮೇಲೆ ಐದು ಪ್ರಕರಣಗಳಿವೆ.
ನಿನ್ನೆ ಓಲ್ಡ್ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಸುಮಾರು 1.4 ಕೆಜಿ ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ನಸ್ರು ಎನ್ನುವ ಆರೋಪಿ ತಪ್ಪಿಸಿಕೊಂಡಿದ್ದ ಇಂದು ಬೆಳಿಗ್ಗೆ ಪಿಎಸ್ಐ ಚಂದ್ರಶೇಖರ್ ಮತ್ತು ತಂಡ ಅವನನ್ನು ಹಿಡಿಯಲು ಹೋದಾಗ, ಅವನು ಪಿಎಸ್ಐ ಮತ್ತು ಸಿಬ್ಬಂದಿಯ ಮೇಲೆ ಕಂಟ್ರಿ ಪಿಸ್ತೂಲ್ ಮತ್ತು ಚಾಕುಗಳಿಂದ ದಾಳಿ ಮಾಡಲು ಪ್ರಯತ್ನಿಸಿದ್ದು. ಆಗ ಅನಿವಾರ್ಯವಾಗಿ ಆತನ ಕಾಲಿಗೆ ಪಿಎಸ್ಐ ಚಂದ್ರಶೇಖರ್ ಗುಂಡು ಹಾರಿಸಿದ್ದಾರೆ. ಬಂದಿತ ಆರೋಪಿ ನಸ್ರುನಿಂದ ಒಂದು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.