ಕುಖ್ಯಾತ ಪಾತಕಿ ಕಡೇಕಲ್ ಅಬೀದ್ ಮೇಲೆ ಪೊಲೀಸರು ಗುಂಡೇಟು ಹಾರಿಸಿದ್ದು ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಈ ಪ್ರಕರಣ ನಡೆದಿದೆ.
ಭದ್ರಾವತಿಯಲ್ಲಿ ಹಿಂದೆ ಸುಮಾರು 16 ಜನರ ಒಳಗೊಂಡ ತಂಡ ಒಂದು ಕೊಲೆಗೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದು ಆಗ ಪೊಲೀಸರ ಮಧ್ಯಪ್ರವೇಶದಿಂದ ಆ ಕೊಲೆ ಯತ್ನ ವಿಫಲವಾಗಿತ್ತು ಆ ಸಮಯದಲ್ಲಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾದಾಗ ಎಂಟು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು .
ನಂತರ ಪೊಲೀಸರ ಕಾರ್ಯಾಚರಣೆಯಲ್ಲಿ ಶಾಹಿದ್ ಖುರೇಶಿ ಹಿಡಿಯಲು ಮುಂದಾದರು ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಪ್ರಯತ್ನ ಪಟ್ಟಾಗ ಆತನ ಕಾಲಿಗೆ ಗುಂಡೇಟು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದರು.
ಈ ಪ್ರಕರಣದಲ್ಲಿ ಕಡೇಕಲ್ ಅಬೀದ್ ತಲೆಮರಿಸಿಕೊಂಡಿದ್ದ ಇಂದು ಆತನನ್ನು ಹಿಡಿಯಲು ಹೋದಾಗ ಆತ ಪೊಲೀಸ್ ಪೇದೆ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದಾಗ ಇನ್ಸ್ಪೆಕ್ಟರ್ ನಾಗಮ್ಮ ಈತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ರಘುರಾಜ್ ಹೆಚ್.ಕೆ..9449553305…