
ಶಿವಮೊಗ್ಗ: ಈ ವರ್ಷವೂ ಕೂಡ ಈದ್ ಮಿಲಾದ್ ಗಣೇಶ ಹಬ್ಬ ಒಟ್ಟಿಗೆ ಬಂದಿದೆ ಆದರೆ ಎಲ್ಲೂ ಯಾವ ಗೊಂದಲಗಳಿಗೂ ಅವಕಾಶ ಮಾಡಿಕೊಡದ ರೀತಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.

ಮುಂಜಾಗ್ರತಾ ದೃಷ್ಟಿಯಿಂದ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಣೇಶ ಹಬ್ಬದ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ಸುಸೂತ್ರವಾಗಿ ಸಾಗಲು ಸಾಕಷ್ಟು ಶ್ರಮ ಪಟ್ಟಿದೆ.

ಇದಕ್ಕೆ ಪೂರಕವಾಗಿ ಹಿಂದೂ ಮುಸಲ್ಮಾನ ಬಾಂಧವರು ಸಾಥ್ ನೀಡಿದ್ದಾರೆ ಅವರಿಗೂ ಇದರ ಒಳ ಅರಿವು ಅರ್ಥವಾಗಿದೆ ಎಂದೆನಿಸುತ್ತದೆ ಯಾರದೋ ರಾಜಕೀಯ ಬೇಳೆ ಬೇಯಿಸಲು ತಾವು ಬಲಿಯಾಗುವುದು ಬೇಡ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬದುಕೋಣ ನಮ್ಮಲ್ಲಿ ಒಗ್ಗಟ್ಟಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ನಾವು ಒಂದಾಗಿ ಹಬ್ಬ ಆಚರಿಸೋಣ ಪರಸ್ಪರ ಸಿಹಿ ಹಂಚಿಕೊಳ್ಳುವುದರ ಮೂಲಕ ಬಾವಕ್ಯತೆಯನ್ನು ಸಾರೋಣ ಶಿವಮೊಗ್ಗಕ್ಕೆ ಅಂಟಿರುವ ಕಳಂಕವನ್ನು ತೆಗೆದು ಹಾಕೋಣ ಎನ್ನುವ ಸಂಕಲ್ಪ ಮಾಡಿರುವ ಹಿಂದೂ ಮುಸ್ಲಿಂ ಬಾಂಧವರು ಪರಸ್ಪರ ಸಿಹಿ ಹಂಚಿಕೊಳ್ಳುವುದರ ಮೂಲಕ ಸಂಭ್ರಮದಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಇಂದು ಮಧ್ಯಾಹ್ನ ಶಿವಮೊಗ್ಗ ನಗರದ ಈದ್ ಮಿಲಾದ್ ಮೆರವಣಿಗೆಯು ನೇತಾಜಿ ವೃತ್ತಕ್ಕೆಬಂದಾಗ ಚಿರಂಜೀವಿ, ಬಾಬಣ್ಣ, ರುದ್ರೇಶ್, ಕಣ್ಣ, ಪವನ್, ಸೂರಿ, ಗುರು, ಮಂಜುನಾಥ್, ಚೇತನ್, ಅಮಿತ* ಮತ್ತು ಇತರರು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ಸಿಹಿ ಹಾಗೂ ಪಾನೀಯವನ್ನು ಹಂಚಿ ಭಾವೈಕ್ಯತೆಯನ್ನು ಮೆರೆದಿರುತ್ತಾರೆ. ಸೂಳೆಬೈಲಿನ ದುರ್ಗಮ್ಮ ದೇವಸ್ಥಾನದ ಹತ್ತಿರ ಬಂದಾಗ ಸೂಳೆಬೈಲಿನ ಮನೋಜ್ ಕುಮಾರ್, ರಾಮು, ಶ್ರೀಧರ್, ಅಶೋಕ, ಮಂಜು, ಎಂ ರಾಜು, ಪ್ರಕಾಶ್, ಕುಮಾರ, ಸುನಿಲ್, ಗಾಂಧಿ ಮತ್ತು ಇತರರು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ಸಿಹಿ ಹಾಗೂ ಪಾನೀಯವನ್ನು ಹಂಚಿ ಸೌಹಾರ್ದತೆ ಹಾಗು ಪ್ರೀತಿಯ ಸಂದೇಶ ಸಾರುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿರುತ್ತಾರೆ.

ರಾಗಿಗುಡ್ಡ ಶಾಂತಿಯ ಸಂಕೇತ ಸಾರಿದ ಶಾಂತಿನಗರ :
ಕಳೆದ ವರ್ಷದ ಕಹಿಯ ನೆನಪು ಮತ್ತೆ ಮರುಕಳಿಸದಂತೆ ಈ ವರ್ಷ ರಾಗಿಗುಡ್ಡ ಶಾಂತಿನಗರ ನಿವಾಸಿಗಳು ಎಲ್ಲೂ ಚಿಕ್ಕ ಘಟನೆಗಳು ನಡೆಯದಂತೆ ಸೌಹಾರ್ದತೆಯಿಂದ ಭಾವೈಕ್ಯತೆಯಿಂದ ಪರಸ್ಪರ ಎರಡು ಹಬ್ಬಗಳಿಗೂ ಗೌರವ ನೀಡಿ ಪರಸ್ಪರ ಸಿಹಿ ಹಂಚಿಕೊಳ್ಳುವುದರ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.ಈದ್ ಮಿಲಾದ್ ಮೆರವಣಿಗೆಯು ರಾಗಿಗುಡ್ಡದ ಶನಿಮಹಾತ್ಮಾ ದೇವಸ್ಥಾನ ಮತ್ತು ರಾಗಿಗುಡ್ಡದ ಸರ್ಕಲ್ ನ ಹತ್ತಿರ ಬಂದಾಗ ರಾಗಿಗುಡ್ಡದ ರಾಮಚಂದ್ರ ವಕೀಲರು,ಗಾರೆ ನಾಗಣ್ಣ, ಬಸವರಾಜು, ಜಯದೇವಪ್ಪ, ಮಾರುತಿ, ರುದ್ರೋಜಿ, ನಾಗರತ್ನಮ್ಮ ಮತ್ತು ಇತರರು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ಸಿಹಿ ಹಾಗೂ ಪಾನೀಯವನ್ನು ಹಂಚಿ ಸೌಹಾರ್ದತೆ ಹಾಗು ಪ್ರೀತಿಯ ಸಂದೇಶ ಸಾರುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು.

ಕೊನೆಗೂ ಶಿವಮೊಗ್ಗ ಪೊಲೀಸರ ಶ್ರಮ ಗೆದ್ದಿದೆ ಕಳೆದ ಮೂರು ತಿಂಗಳಿಂದ ತಳಮಟ್ಟದ ಸಿಬ್ಬಂದಿಗಳಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗಳ ವರೆಗೂ ಹಾಕಿದ ಶ್ರಮ ವ್ಯರ್ಥವಾಗಲಿಲ್ಲ ಜನ ಪೊಲೀಸರ ಶ್ರಮಕ್ಕೆ ಬೆಲೆ ನೀಡಿದ್ದಾರೆ ಅದು ಈ ಹಬ್ಬದಲ್ಲಿ ಗೊತ್ತಾಗಿದೆ ಈ ಭಾವೈಕ್ಯತೆ ಹೀಗೆ ಮುಂದುವರೆಯಲಿ ಎನ್ನುವುದು ಪತ್ರಿಕೆಯ ಹಾರೈಕೆ….
ರಘುರಾಜ್ ಹೆಚ್.ಕೆ..9449553305..