ಶಿವಮೊಗ್ಗ : ಭಾರತದಲ್ಲಿ ಬಂದ್ ಆಗಿರುವ ಚೈನಾ ಬೆಳ್ಳುಳ್ಳಿ ಶಿವಮೊಗ್ಗದ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿಜಕ್ಕೂ ಇದೊಂದು ಆತಂಕಕಾರಿ ವಿಷಯ ಈಗಾಗಲೇ ಭಾರತ ಸರ್ಕಾರ ಚೈನಾದಿಂದ ಅಮದು ಆಗುತ್ತಿದ್ದ ಬೆಳ್ಳುಳ್ಳಿಯನ್ನು ನಿಷೇಧ ಮಾಡಿದೆ ಕಾರಣ ಈ ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯದಲ್ಲಿ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೈನಾದಿಂದ ಅಮದಾಗುತ್ತಿದ್ದ ಬೆಳ್ಳುಳ್ಳಿಯನ್ನು ಸಂಪೂರ್ಣ ಭಾರತ ಸರ್ಕಾರ ನಿಷೇಧ ಮಾಡಿದೆ.
ವಾಮ ಮಾರ್ಗದಲ್ಲಿ ಬರುತ್ತಿರುವ ಬೆಳ್ಳುಳ್ಳಿ :
ಕೆಲವು ವ್ಯಾಪಾರಿಗಳು ಹಣದ ಆಸೆಗೆ ಕಡಿಮೆ ಬೆಲೆಗೆ ಬೆಳ್ಳುಳ್ಳಿ ಸಿಗುತ್ತದೆ ಎನ್ನುವ ಕಾರಣಕ್ಕೆ ಚೈನಾದ ಈ ಕಡಿಮೆ ಬೆಳೆಯ ಬೆಳ್ಳುಳ್ಳಿಯನ್ನು ವಾಮ ಮಾರ್ಗದಿಂದ ತರಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರಾದ್ಯಂತ ಹಲವು ಕಡೆ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು :
ವಾಮ ಮಾರ್ಗದಿಂದ ಬಂದ ಬೆಳ್ಳುಳ್ಳಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಾರುಕಟ್ಟೆಗೆ ಪ್ರವೇಶವಾದ ನಂತರ ಆಹಾರ ಸುರಕ್ಷತಾ ಅಧಿಕಾರಿಗಳು ಅಂತಹ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
ಶಿವಮೊಗ್ಗದ ಮಾರುಕಟ್ಟೆಯಲ್ಲಿ ಚೈನಾದ ಬೆಳ್ಳುಳ್ಳಿ :
ಆತಂಕಕಾರಿ ಬೆಳವಣಿಗೆಯಲ್ಲಿ ಚೈನಾದ ಬೆಳ್ಳುಳ್ಳಿ ಶಿವಮೊಗ್ಗದ ಮಾರುಕಟ್ಟೆಗೆ ಬಂದು ತಲುಪಿದೆ ಶಿವಮೊಗ್ಗದ ಮಾರುಕಟ್ಟೆಯಲ್ಲಿ ಹಲವು ಕಡೆ ಚೈನಾದ ಬೆಳ್ಳುಳ್ಳಿ ಲಭ್ಯವಾಗುತ್ತಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ ಕೂಡಲೇ ಆಹಾರ ಸುರಕ್ಷತಾ ಅಧಿಕಾರಿಗಳು ಇದನ್ನು ಪರಿಶೀಲಿಸಿ ಅಂತಹ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡು ಇಂತಹ ಆರೋಗ್ಯಕ್ಕೆ ಹಾನಿಕರವಾಗಿರುವ ಭಾರತ ಸರ್ಕಾರ ನಿಷೇಧ ಮಾಡಿರುವ ಬೆಳ್ಳುಳ್ಳಿಯನ್ನು ಶಿವಮೊಗ್ಗಕ್ಕೆ ಅಕ್ರಮವಾಗಿ ತರಿಸಿಕೊಂಡಿರುವ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು.
ರಘುರಾಜ್ ಹೆಚ್.ಕೆ..9449553305.