Wednesday, April 30, 2025
Google search engine
Homeಶಿವಮೊಗ್ಗಹೃದಯವಂತ ಕವಿ ಸಾಹಿತಿ ಪತ್ರಕರ್ತ ಶಿ,ಜು ಪಾಶರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ..!

ಹೃದಯವಂತ ಕವಿ ಸಾಹಿತಿ ಪತ್ರಕರ್ತ ಶಿ,ಜು ಪಾಶರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ..!

ಕನ್ನಡ ಭಾಷೆಗೆ ಮನಸ್ಸು ಬೆಸೆಯುವ ಶಕ್ತಿಯಿದೆ- ಸಾಹಿತಿ, ಚಿಂತಕ ಟಿ.ಸತೀಶ್ ಜವರೇಗೌಡ ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಟಿ.ಸತೀಶ್ ಜವರೇಗೌಡ ಹೇಳಿದರು.

ಅವರು ಇಂದು ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ೮ನೇ ಕವಿಕಾವ್ಯ ಸಂಭ್ರಮ ಹಾಗೂ ಜನ್ನಕಾವ್ಯ ಪರೀಕ್ಷೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾಷೆಗೆ ನಮ್ಮೆಲ್ಲರನ್ನು ಪೊರೆಯುವ ಶಕ್ತಿಯಿದೆ, ಅದೊಂದು ಜೀವತಂತು. ವರ್ತಮಾನದ ತಲ್ಲಣದ ಈ ಸಂದರ್ಭದಲ್ಲಿ ವಿಕೃತಗಳೇ ವಿಜೃಂಭಿಸಿರುವಾಗ ಸಾಹಿತ್ಯದ ಮೂಲಕ ಸಾಮರಸ್ಯವನ್ನು ಬೆಸೆಯಬೇಕಾಗಿದೆ. ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿಯಿದೆ. ಹಲವು ಕ್ರಾಂತಿಗಳ ಹಿಂದೆ ಸಾಹಿತ್ಯದ ಪ್ರೇರಕ ಶಕ್ತಿ ಇರುತ್ತದೆ. ಭಾಷೆ ಭಾವೈಕ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.ಸಾಹಿತ್ಯದ ವಿಕೇಂದ್ರಿಕರಣದ ಬದಲು ಜಾತಿಯತೆ, ಧರ್ಮಾಂಧತೆ ವಿಕೇಂದ್ರಿಕರಣವಾಗುತ್ತಿದೆ. ಇದನ್ನೆಲ್ಲ ದಮನ ಮಾಡಲು ಸಾಹಿತ್ಯವೇ ಮದ್ದಾಗುತ್ತದೆ ಕೂಡ, ಸಾಹಿತ್ಯದ ಜವಬ್ದಾರಿ ಕೂಡ ಹೆಚ್ಚಿದೆ. ಒಗ್ಗಟ್ಟನ್ನು ಬೆಸೆಯುವ ಸಾಮಾಜದ ಸಾಮರಸ್ಯವನ್ನು ಹೆಚ್ಚಿಸುವಂತೆ ಸಾಹಿತ್ಯವಿರಬೇಕು ಎಂದರು.

೮ನೇ ಕವಿ ಕಾವ್ಯ ಸಂಭ್ರಮದ ಸರ್ವಾಧ್ಯಕ್ಷರಾದ ಅಬ್ದುಲ್ ಹೈ, ತೋರಣಗಲ್ಲು, ಮಾತನಾಡಿ, ಕಾವ್ಯ ಬದುಕಿನ ಪ್ರತಿಬಿಂಬವಾಗಬೇಕು. ಅದು ಸ್ಪಂದನೆಯ ಗುಣವನ್ನು ಹೊಂದಿರಬೇಕು. ಸಮಾಜದ ಎಲ್ಲಾ ಜನರ ಪ್ರತಿಧ್ವನಿಯಾಗಬೇಕು. ಈ ನೆಲದ ಭಾಷೆ ಕನ್ನಡಕ್ಕೆ ಆ ಶಕ್ತಿಯಿದೆ. ಸಾವಿರಾರು ವರ್ಷಗಳಿಂದ ಕನ್ನಡ ದಬ್ಬಾಳಿಕೆಯನ್ನು ಎದುರಿಸಿಯೂ ಜೀವಂತವಾಗಿದೆ. ಅದು ಸೊರಗಿರಬಹುದು ಆದರೆ ಎಂದು ಸಾಯುವುದಿಲ್ಲ ಎಂದರು.

ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ದತ್ತಿ ಪ್ರಶಸ್ತಿ ಹಾಗೂ ಇತರ ಪ್ರಶಸ್ತಿಗಳು ಲೇಖಕರ ಜವಬ್ದಾರಿಗಳನ್ನು ಹೆಚ್ಚಿಸುತ್ತವೆ. ಅನುಭವದ ಮೂಲಕ ಮೂಡಿಬಂದ ಸಾಹಿತ್ಯ ಯಾವಾಗಲೂ ಗಟ್ಟಿಯಾಗಿರುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕವಿ, ಸಾಹಿತಿ ,ಪತ್ರಕರ್ತ ಶಿ.ಜು.ಪಾಶ, ಮುತ್ತಣ್ಣ, ಸುಂದರಮ್ಮ, ಮನ್ಸೂರು ಮುಲ್ಕಿ, ಖಾಕಿ ಕವಿ ಮಂಜುನಾಥ ಅವರುಗಳಿಗೆ ರಾಜ್ಯಮಟ್ಟದ ಜನ್ನ ಕಾವ್ಯ ಪ್ರಶಸ್ತಿಯನ್ನು ನೀಡಲಾಯಿತು.

ಹಾಗೆಯೇ ಸಮಾಜ ಸೇವಕಿ ಡಾ.ನೇತ್ರಾವತಿ ಟಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜೊತೆಗೆ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ಕಾವ್ಯ ಸಂಭ್ರಮದ ಸಂಚಾಲಕಿ ಹಾಗೂ ಸಾಹಿತಿ ಡಾ.ಹೆಚ್.ಕೆ. ಹಸೀನಾ ವಹಿಸಿದ್ದರು. ಪ್ರಾಂಶುಪಾಲ ಡಾ. ಸೈಯ್ಯದ್ ಸನಾವುಲ್ಲಾ ಸೇರಿದಂತೆ ಹಲವರು ಇದ್ದರು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ಮಾತನಾಡಿದರು.  ಲತಾ ಮಣಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...