
ಶಿವಮೊಗ್ಗ : ಭಾರತ ಸರ್ಕಾರದಿಂದ ಬ್ಯಾನ್ ಆಗಿದ್ದ ಚೈನಾ ಮಾರುಕಟ್ಟೆಯ ಬೆಳ್ಳುಳ್ಳಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು ಪತ್ರಿಕೆ ಇದರ ಬಗ್ಗೆ ಸುದ್ದಿ ಪ್ರಕಟಿಸಿತ್ತು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು ಜಿಲ್ಲಾಧಿಕಾರಿಗಳು ಕೂಡಲೇ ಇದಕ್ಕೆ ಸ್ಪಂದಿಸಿ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ತಿಳಿಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಹಾಗೂ ದಾಸ್ತಾನಿದ್ದ ಬೆಳ್ಳುಳ್ಳಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಾನವರ ಆರೋಗ್ಯಕ್ಕೆ ಹಾನಿಕರವಾಗುತ್ತಿದ್ದ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದ ಬೆಳ್ಳುಳ್ಳಿಯನ್ನು ಹಣದ ಹಾಸಿಗೆ ಬಿದ್ದ ಕೆಲವು ವ್ಯಾಪಾರಿಗಳು ವಾಮ ಮಾರ್ಗದಿಂದ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು ಇದನ್ನು ಮನಗಂಡ ಭಾರತ ಸರ್ಕಾರ ಇಂತಹ ಬೆಳ್ಳುಳ್ಳಿಯನ್ನು ಅಮದು ಮಾಡಿಕೊಳ್ಳುವುದನ್ನು ನಿಷೇಧ ಮಾಡಿತ್ತು. ನಂತರ ಕೂಡ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಹಣದ ಆಸೆಗೆ ಬಿದ್ದ ವ್ಯಾಪಾರಿಗಳು ಇದನ್ನು ವಾಮ ಮಾರ್ಗದಿಂದ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು ಆದರೆ ಪಕ್ಕದ ರಾಜ್ಯಗಳಾದ ರಾಜಸ್ಥಾನ್, ಮಧ್ಯಪ್ರದೇಶ ,ಉತ್ತರ ಪ್ರದೇಶ್, ಹರಿಯಾಣಗಳಲ್ಲಿ, ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಾಗ ಅಧಿಕಾರಿಗಳು ಅದನ್ನು ಸಿಜ್ ಮಾಡಿ ಸಂಬಂಧಪಟ್ಟ ವ್ಯಾಪಾರಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದ್ದರು.
ಶಿವಮೊಗ್ಗಕ್ಕೂ ಆಗಮಿಸಿದ ಚೈನಾ ಬೆಳ್ಳುಳ್ಳಿ..!
ಭಾರತ ಅಮದು ಮಾಡಿಕೊಳ್ಳುವುದನ್ನು ಬಂದ್ ಮಾಡಿದ್ದ ಚೈನಾ ಬೆಳ್ಳುಳ್ಳಿ ವಾರ್ಮ ಮಾರ್ಗದಿಂದ ಶಿವಮೊಗ್ಗದ ಮಾರುಕಟ್ಟೆಗೆ ಬಂದಿದ್ದು ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್, ರಸ್ಕಿನ್ ಮೌಲಾ, ಗಾಂಧಿ ಬಜಾರ್ ನ ಕೆಲವು ಅಂಗಡಿಗಳಲ್ಲಿ ಹಾಗೂ ಗೋಡಾನ್ ಗಳಲ್ಲಿ ದಾಸ್ತಾನು ಇಟ್ಟಿದ್ದರು ಇದರ ಬಗ್ಗೆ ಪತ್ರಿಕೆ ಸುದ್ದಿ ಪ್ರಕಟಿಸಿತ್ತು ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೂ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು.

ಸುದ್ದಿ ಬೆನ್ನಲ್ಲೇ ದಿಡೀರ್ ದಾಳಿ ಮಾಡಿದ ಆಹಾರ ಸುರಕ್ಷಿತ ಅಧಿಕಾರಿಗಳು :
ಸುದ್ದಿ ಬೆನ್ನಲ್ಲೇ ನಗರದ ಏಳು ಕಡೆ ದಾಳಿ ಮಾಡಿದ ಆಹಾರ ಸುರಕ್ಷಿತ ಅಧಿಕಾರಿಗಳು ಅನುಮಾನ ಬಂದ ಎರಡು ಕಡೆ ಲೀಗಲ್ ಸ್ಯಾಂಪಲ್ ತೆಗೆದುಕೊಂಡಿದ್ದು ಅದನ್ನು ತಪಾಸಣೆಗೆ ಕಳುಹಿಸಿದ್ದಾರೆ.
ಬೆಂಗಳೂರಿನಲ್ಲಿರುವ ಎನ್ಎಬಿಎಲ್ ಲ್ಯಾಬ್ ಗೆ ಲೀಗಲ್ ಸ್ಯಾಂಪಲ್‌ಗೆ ಕಳುಹಿಸಲಾಗಿದ್ದು ಹತ್ತರಿಂದ ಹದಿನೈದು ದಿನದಲ್ಲಿ ಫಲಿ ಫಲಿತಾಂಶ ಬರುವ ನೀರಿಕ್ಷೆ ಇದೆ.
ಫಲಿತಾಂಶ ಬಂದ ನಂತರ ಸಂಬಂಧಪಟ್ಟವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುವ ಸಾಧ್ಯತೆ ಇದೆ.
ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾಕ್ಟರ್ ಹರೀಶ್ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಸದಾಶಿವಪ್ಪ ಜಿ ಅವರ ನೇತೃತ್ವದಲ್ಲಿ ತಂಡ ದಿಡೀರ್ ಭೇಟಿ ನೀಡಿದ್ದು ಎಲ್ಲಾ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡಿದ್ದು ಮಾರುಕಟ್ಟೆಯಲ್ಲಿ ಬಂದ್ ಆಗಿರುವ ವಸ್ತುಗಳನ್ನು ಮಾರುವಂತಿಲ್ಲ ಒಂದು ವೇಳೆ ಇಂಥಹ ವಸ್ತುಗಳು ಮಾರುಕಟ್ಟೆಗೆ ಬಂದರೆ ನಮ್ಮ ಗಮನಕ್ಕೆ ತರಬೇಕು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು ಎನ್ನುವ ತಿಳುವಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಅತಿ ಬೇಗ ಸುದ್ದಿಗೆ ಸ್ಪಂದಿಸಿದ್ದು ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡುವುದರ ಮುಖಾಂತರ ಸಾರ್ವಜನಿಕರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ ಮುಂದೆ ಕೂಡ ಹೀಗಾಗದಂತೆ ದಿಡೀರ್ ದಾಳಿ, ಪರೀಕ್ಷೆ ನಿರಂತರವಾಗಿ ನಡೆಯುತ್ತಿರಲಿ ಎನ್ನುವುದು ಪತ್ರಿಕೆಯ ಕಳಕಳಿ.
ರಘುರಾಜ್ ಹೆಚ್.ಕೆ..9449553305.