
ದೇಶ ಕಂಡ ಮಹಾನ್ ಚೇತನಗಳಾದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ತೀರ್ಥಹಳ್ಳಿತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಸ್ವಚ್ಚತಾ ಕಾರ್ಯವನ್ನು ನಡೆಸುವ ಮೂಲಕ ವಿಶಿಷ್ಟವಾಗಿ ಸಂಭ್ರಮಿಸಿತು.
ಶ್ರಮದಾನದ ಮೂಲಕ ಪಟ್ಟಣದ ಕುವೆಂಪು ರಸ್ತೆಯಲ್ಲಿನ ಸರ್ಕಾರಿ ನೌಕರರ ಭವನದ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಸಂಘಟನೆ ರಸ್ತೆಯ ಇಕ್ಕೆಲಗಳಲ್ಲೂ ಸಂಗ್ರಹವಾಗಿದ್ದ ದೊಡ್ಡ ಸಂಖ್ಯೆಯ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡುವುದರ ಜೊತೆಗೆ “ನಮ್ಮ ಪರಿಸರದ ಸ್ವಚ್ಚತೆ ನಮ್ಮ ಜವಬ್ದಾರಿ” ಎಂಬ ಸಂದೇಶದ ಮೂಲಕ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಿತು.
ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ- 2024 ರ ಅಂಗವಾಗಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟದ 70 ವರ್ಷ ಮೇಲ್ಪಟ್ಟವರ 100 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕಾಡಪ್ಪ ಗೌಡರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಸತೀಶ ಟಿ ವಿ, ಕಾರ್ಯದರ್ಶಿ ರಾಮು ಬಿ, ಖಜಾಂಚಿ ಪವಿತ್ರ ಹೆಚ್ ಸಿ, ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಎಸ್, ಜಂಟಿ ಕಾರ್ಯದರ್ಶಿ ರಮೇಶ್, ಕಾಡಪ್ಪ ಗೌಡ, ರಾಜೇಶ್ವರಿ, ದುಗ್ಗಣ್ಣ, ಹನುಮಂತ ರೆಡ್ಡಿ ನಚಿಕೇತ್ ಎಸ್ ಶೆಟ್ಟಿ ,ಶ್ರೀನಿವಾಸ್, ಮತ್ತಿತರರಿದ್ದರು.