Wednesday, April 30, 2025
Google search engine
Homeಶಿಕ್ಷಣShivamogga:ಕುವೆಂಪು ವಿವಿ ಕುಲಪತಿಗಳಿಂದ ಪದವಿ ಅಧ್ಯಾಪಕರಿಗೆ ಸಿಹಿ ಸುದ್ದಿ ಆದರೆ ‌ಇನ್ನು ಕಗ್ಗಂಟಾಗಿ ಉಳಿದ...

Shivamogga:ಕುವೆಂಪು ವಿವಿ ಕುಲಪತಿಗಳಿಂದ ಪದವಿ ಅಧ್ಯಾಪಕರಿಗೆ ಸಿಹಿ ಸುದ್ದಿ ಆದರೆ ‌ಇನ್ನು ಕಗ್ಗಂಟಾಗಿ ಉಳಿದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ ಯಾವಾಗ.?!

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾನಿಲಯದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ ಅದರಲ್ಲೂ ಹಿಂದಿನ ಕುಲಪತಿಗಳಾಗಿದ್ದ ವೀರಭದ್ರಪ್ಪನವರ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಇಲ್ಲಿ ತುಂಬಿ ತುಳುಕುತ್ತಿತ್ತು ಈಗಲೂ ಕೂಡ ಆ ಕೇಸ್ಗಳು ನಡೆಯುತ್ತಿದ್ದಾವೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಜಾಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದಕ್ಕೆಲ್ಲ ಕಾರಣ ಅಂದಿನ ಕುಲಪತಿ ವೀರಭದ್ರಪ್ಪ ಹಾಗೂ ಅವರ ಜೊತೆ ಇದ್ದ ಕೆಲವು ಸಹಚರರು ಈಗಲೂ ಇಲ್ಲಿನ ಆಡಳಿತ ನಿಯಂತ್ರಣಕ್ಕೆ ಬರುತ್ತಿಲ್ಲ ಇನ್ನೂ ಕೆಲವೊಬ್ಬ ಭ್ರಷ್ಟ ಅಧಿಕಾರಿಗಳು ಇಲ್ಲಿ ಇದ್ದಾರೆ ಅವರು ಹೋಗುವ ತನಕ ಇದು ಹೀಗೆ ಮುಂದುವರೆಯುತ್ತದೆ ಕುವೆಂಪು ಅಂತಹ ಮಹಾನ್ ವ್ಯಕ್ತಿಯ ಹೆಸರಿಟ್ಟುಕೊಂಡ ವಿಶ್ವವಿದ್ಯಾನಿಲಯದಲ್ಲಿ ಇಂದು ವಿದ್ಯಾರ್ಥಿಗಳು ಕಲಿಯುವುದೇ ಕಷ್ಟವೇನೋ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವ ಪರಿಸ್ಥಿತಿ ವಿಶ್ವವಿದ್ಯಾನಿಲಯದಲ್ಲಿ ನಿರ್ಮಾಣವಾಗಿದೆ. ಇಡೀ ರಾಜ್ಯಕ್ಕೆ ಮಾದರಿ ಆಗಬೇಕಾಗಿದ್ದ ವಿಶ್ವವಿದ್ಯಾನಿಲಯ ಇಂದು ಕೆಟ್ಟ ಹೆಸರು ತೆಗೆದುಕೊಂಡಿದೆ ಈ ವಿಶ್ವವಿದ್ಯಾನಿಲಯದಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳಾಗಿ ಇಂದು ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸಾಧನೆಗೈದು ಕಾರ್ಯನಿರ್ವಹಿಸುತ್ತಿದ್ದಾರೆ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ವಿಶ್ವವಿದ್ಯಾನಿಲಯದ ಅಭಿವೃದ್ಧಿಗಾಗಿ ನೂತನ ಕುಲಪತಿಗಳು ಶ್ರಮಿಶಲಿ ಎನ್ನುವುದು ಪತ್ರಿಕೆಯ ಹಾರೈಕೆ .

ಪತ್ರಿಕೆ ಜೊತೆ ಮಾತನಾಡಿದ ಕುಲಪತಿಗಳು ವಿದ್ಯಾರ್ಥಿಗಳಿಗೆ ಹಾಗೂ ಪದವಿ ಅಧ್ಯಾಪಕರಿಗೆ ಶುಭ ಸುದ್ದಿ ನೀಡಿದ್ದಾರೆ :

ಎನ್.ಇ.ಪಿ.ಪಠ್ಯಕ್ರಮದ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಈಗ 3 ವರ್ಷದ ಪದವಿ ಮುಗಿಸಿದ್ದಾರೆ. ಅವರಿಗೆ ಎನ್.ಇ.ಪಿ.ಪ್ರಕಾರ 4ನೇ ವರ್ಷದ ಹಾನಸ್೯ ಪದವಿಗೆ ಪ್ರವೇಶ ಪಡೆಯಲು ಸಕಲ ವ್ಯವಸ್ಥೆ ಆಗಬೇಕು. ಆದರೆ ಕುವೆಂಪು ವಿಶ್ವವಿದ್ಯಾಲಯದಿಂದ ಇದುವೆರೆಗೂ ಯಾವ ಮಾರ್ಗಸೂಚಿಯಾಗಲೀ, ಸಿದ್ಧತೆಗಳ ಮಾಹಿತಿಯನ್ನು ಪ್ರಾಂಶುಪಾಲರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೊತ್ತಿಲ್ಲದೆ ಇರುವುದು ದುರಂತವೇ ಸರಿ , ಈ ನಡುವೆ ಅಂತಿಮ ವರ್ಷದ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಸಮಸ್ಯೆ ಬಗೆಹರಿದಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ.

ಆದರೆ .ಎನ್.ಎಸ್.ಎಸ್. ಎನ್.ಸಿಸಿ, ರೇಂಜಸ್೯, ಕ್ರೀಡೆ, ಸಾಂಸ್ಕೃತಿಕ ವಿಷಯಗಳ ಅಂಕಗಳ ಸೇರ್ಪಡೆಗೆ UUCMS ಸಾಫ್ಟ್ ವೇರ್ ನಲ್ಲಿಯ ತಾಂತ್ರಿಕ ದೋಷದಿಂದ ನೂರಾರು ವಿದ್ಯಾರ್ಥಿಗಳ ಫಲಿತಾಂಶ‌ ತಡೆಹಿಡಿಯಲ್ಪಟ್ಟಿದೆ ಇನ್ನೊಂದೆಡೆ ಹಾನಸ್೯ ಪದವಿ ಬಗ್ಗೆ ವಿವಿ ನಿರ್ಣಯ ಕೈಗೊಳ್ಳದೆ PG ಕೋಸ್೯ಗಳಿಗೆ ಪ್ರವೇಶಾತಿ ಅಧಿಸೂಚನೆ ಹೊರಡಿಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಈ ವರ್ಷದಿಂದ ರಾಜ್ಯದಲ್ಲಿ ಎಸ್.ಇ.ಪಿ. ಪಠ್ಯಕ್ರಮ ಜಾರಿಯಾಗಿದೆ. ಇದರಿಂದ ಉಪನ್ಯಾಸಕರಿಗೆ ಪ್ರತಿ ವಿಷಯದಲ್ಲಿ ಎನ್.ಇ.ಪಿ.ಪದ್ಧತಿಯಲ್ಲಿದ್ದುದಕ್ಕಿಂತ ವಾರದ ಕಾರ್ಯಭಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪಾಠ ಮಾಡುವ ಪಠ್ಯಕ್ರಮದ ಒತ್ತಡ ಉಪನ್ಯಾಸಕರ ಮೇಲೆ ಹೆಚ್ಚಾಗಿದೆ.ಇದನ್ನು ಸರಿದೂಗಿಸಲು ರಾಜ್ಯದ ಇತರೆ ವಿವಿಗಳಲ್ಲಿ ಕಾರ್ಯಭಾರ ಹೆಚ್ಚಿಸಿ ವಾರಕ್ಕೆ 6 ಅವಧಿಯ ಕಾರ್ಯಭಾರ ನಿಗಧಿಪಡಿಸಲಾಗಿದೆ. ಆದರೆ ಕುವೆಂಪು ವಿವಿಯಿಂದ ಅದು ಆಗಿಲ್ಲ ಎಂಬ ದೂರನ್ನು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಅರುಣ್ ಶಿವಮೊಗ್ಗ ಹಾಗೂ KGCTA ವಲಯ ಕಾರ್ಯದರ್ಶಿಗಳಾದ ಡಾ/ ಮೋಹನ್ ಮತ್ತು ಡಾ/ ಶಕ್ರಿಯ ಯಾ ನಾಯ್ಕ್ ಹಾಗೂ ಎಲ್ಲಾ ವಿಭಾಗಗಳ ಪತ್ರಿಕಾ ಮಂಡಳಿಯ ಅಧ್ಯಕ್ಷರುಗಳು ವಿ ವಿ ಕುಲಪತಿಗಳನ್ನು ಒತ್ತಾಯಿಸಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮೌಲ್ಯಮಾಪನ ಸ್ಥಗಿತಗೊಳಿಸುವುದಾಗಿ ಆಗ್ರಹಿಸಿದರು .

ಇವರ ಒತ್ತಾಸೆಗೆ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕನ್ನಡ ಪ್ರಾಧ್ಯಾಪಕರಾದ ಡಾ. ಸವಿತಾ ಬನ್ನಾಡಿ ರವರ ಸೂಕ್ತ ಸಲಹೆ ಮೇರೆಗೆ ವಿ ವಿ ಕುಲಪತಿಗಳು 5 ಗಂಟೆ ಉಪನ್ಯಾಸ ಉಳಿದ ಒಂದು ಗಂಟೆ ಬೋಧಕೇತರ ‌ ಕಾರ್ಯನಿರ್ವಹಿಸಲು ಕುಲಪತಿಗಳು ಅನುವು ಮಾಡಿಕೊಟ್ಟಿದ್ದಾರೆ ಇದು ಪ್ರಾಧ್ಯಾಪಕರಲ್ಲಿ ಸಂತಸ ತಂದಿದೆ ಇದನ್ನು ಅಧಿಕೃತವಾಗಿ ಕುಲಪತಿಗಳು ನಾಳೆ ಘೋಷಿಸಲಿದ್ದಾರೆ ಎಂದು ಪತ್ರಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೂ ಉಳಿದ ಸಮಸ್ಯೆಗಳು :

ಕಾಲೇಜುಗಳಲ್ಲಿ ಸೆಮಿಸ್ಟರ್ ಕ್ಲಾಸೆಸ್ ಆರಂಭವಾಗಿವೆ. ಆದರೆ ಬಹುತೇಕ ಉಪನ್ಯಾಸಕರು ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯಕ್ಕೆ ಹೋಗುತ್ತಿದ್ದುದರಿಂದ ಕಾಲೇಜುಗಳಲ್ಲಿ ಕಳೆದ 15-20ದಿನಗಳಿಂದ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಶೈಕ್ಷಣಿಕ ಹಾನಿಯನ್ನು ತುಂಬಿಕೊಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ಆಂತರಿಕ ಪರೀಕ್ಷೆ, ಸೆಮಿಸ್ಟರ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಪೂರೈಸುವ ಉತ್ತರ ಪತ್ರಿಕೆ ತೀವ್ರ ಕಳಪೆ ಗುಣಮಟ್ಟದ್ದಾಗಿದೆ. ಪ್ರತಿ ಪರೀಕ್ಷೆಗಳಲ್ಲಿ ಈ ಉತ್ತರ ಪತ್ರಿಕೆಗಳ ಹಾಳೆಗಳು ಹರಿದು ಹೋಗುತ್ತಿವೆ. ಅಥವಾ ಪರೀಕ್ಷೆಯ ಕೊಠಡಿಗಳಲ್ಲಿ ಸ್ಟ್ಯಾಪ್ಲರ್ ಹಿಡಿದು ಪಿನ್ ಹೊಡೆಯುವ ಕಾರ್ಯ ಸರ್ವೇಸಾಮಾನ್ಯವಾಗಿದೆ ಎಂದು ಪ್ರಾಚಾರ್ಯ ಸಿಬ್ಬಂದಿಗಳ ಅಂಬೋಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಮೈಮೇಲೆ ಹೊದ್ದು ಮಲಗಿರುವ ವಿವಿ ಆಡಳಿತ ಎಚ್ಚೆತ್ತುಕೊಳ್ಳುವುದು ಯಾವಾಗ ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.

ಇದನ್ನು ನೂತನ ಕುಲಪತಿಗಳು ಬಗೆಹರಿಸಿ ಇನ್ನು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು ಆಡಳಿತದಲ್ಲಿ ಸುಧಾರಣೆ ತರಬೇಕು ಎನ್ನುವುದು ಪತ್ರಿಕೆಯ ಹಾಗೂ ಹಳೆಯ ವಿದ್ಯಾರ್ಥಿಗಳ ಅಭಿಲಾಷೆ….

ರಘುರಾಜ್ ಹೆಚ್.ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...