ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದಿಂದ ನಿವೇಶನಗಳ ಹಂಚಿಕೆ ಸಂಬಂಧವಾಗಿ ಅರ್ಜಿಯನ್ನು ಸಲ್ಲಿಸಲು ಇದೇ ತಿಂಗಳ 31ನೇ ತಾರೀಕು ಕೊನೆಯ ದಿನಾಂಕವಾಗಿತ್ತು ಆದರೆ ಕೆಲವು ತಾಂತ್ರಿಕ ದೋಷಗಳಿಂದ ನಿರಂತರ ರಜೆ ಬಂದರಿಂದ ನಿವಾಸಿ ದೃಢೀಕರಣಕ್ಕೆ ಹಲವರು ಅರ್ಜಿ ಸಲ್ಲಿಸಿದರು ನಿವೇಶನಕ್ಕೆ ಅರ್ಜಿ ಹಾಕುವಾಗ ನಿವಾಸಿ ದೃಢೀಕರಣ ಪತ್ರವನ್ನು ಹಾಕಬೇಕು ಆದರೆ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ ಇದರಿಂದ ಸಾಕಷ್ಟು ಜನಕ್ಕೆ ತೊಂದರೆಯಾಗಿತ್ತು ಸಾರ್ವಜನಿಕರು ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್ ಅವರಿಗೆ ಹಾಗೂ ಆಯುಕ್ತ ರಿಗೆ ಮನವಿ ಮಾಡಿದ್ದರು ಆ ಮನವಿಯ ಮೇರೆಗೆ ನಿವೇಶನ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದಿನ ತಿಂಗಳು 25ರವರೆಗೆ ವಿಸ್ತರಣೆ ಮಾಡಿದ್ದಾರೆ.
ಎಷ್ಟು ನಿವೇಶನಗಳಿಗೆ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ..?!
ಭದ್ರಾವತಿ ಶಿವಮೊಗ್ಗ ಪ್ರಾಧಿಕಾರದ 450 ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಈಗಾಗಲೇ ಸುಮಾರು5 ಸಾವಿರ ಅರ್ಜಿಗಳು ಬಂದಿದ್ದು 9000 ಅರ್ಜಿಗಳು ಒಟ್ಟಾರೆ ಸಾರ್ವಜನಿಕರು ತೆಗೆದುಕೊಂಡಿದ್ದಾರೆ. ಅದರಲ್ಲಿ ಇನ್ನೂ ನಾಲ್ಕು ಸಾವಿರ ಅರ್ಜಿಗಳು ಬರುವುದು ಬಾಕಿ ಇದೆ. ಈಗ ಅವಧಿ ವಿಸ್ತರಣೆ ಮಾಡಿರುವುದರಿಂದ ಇನ್ನಷ್ಟು ಜನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಾಗುತ್ತದೆ.