ಪತಿ ಪತ್ನಿ ಜಗಳಗಳು ಕೊಲೆಯಲ್ಲಿ ಅಂತ್ಯ ವಾಗಿರುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಂದು ಮಹಿಳೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಘಟನೆ..?!
ನಿನ್ನೆ ರಾತ್ರಿ ತಾಳಗುಪ್ಪ-ಮೈಸೂರಿಗೆ ಚಲಿಸುವ 16228 ಕ್ರಮ ಸಂಖ್ಯೆ ರೈಲುಗಾಡಿಗೆ ಕಮಲಾ ಬಿಪಿ ಎನ್ನುವ ವಿವಾಹಿತ ಮಹಿಳೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ವಿನೋಬ ನಗರ ರೈಲ್ವೆ ಟ್ರ್ಯಾಕ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ರೈಲಿಗೆ ಸಿಲುಕಿದ ಮಹಿಳೆಯ ತಲೆ ದೇಹ ಮತ್ತು ಕೈಗಳು ಪ್ರತ್ಯೇಕಗೊಂಡಿದೆ.
ಕಮಲಾ ಬಿ.ಪಿ (35) ಶಿವಮೊಗ್ಗದ ಮೆಗ್ಗಾನ್ ಆಸ್ತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದು. ರಾತ್ರಿ ಪತಿ ಪತ್ನಿ ಜಗಳವಾಡಿಕೊಂಡಿದ್ದಾರೆ ಈ ಜಗಳ ಅತಿರೇಕಕ್ಕೆ ಹೋಗಿ ಮನನೊಂದ ಮಹಿಳೆ ಕಮಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ರಿಕೆಗಿರುವ ಮಾಹಿತಿಯ ಪ್ರಕಾರ ದಿನ ನಿತ್ಯ ಜಗಳವಾಡುತ್ತಿದ್ದ ಈ ದಂಪತಿಗಳು ಪರಸ್ಪರ ವಾಗ್ವಾದಕ್ಕೆ ಇಳಿಯುತ್ತಿದ್ದರು ಗಂಡ ಸದಾ ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗುತ್ತಿದೆ ಇದು ಜಗಳಕ್ಕೆ ಪ್ರಮುಖ ಕಾರಣ ವಾಗಿರುವ ಸಾಧ್ಯತೆ ಇದೆ..?!
ವಿನೋಬ ನಗರ ಪೊಲೀಸರು ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ಕಮಲಾ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಪೊಲೀಸರ ಹೆಚ್ಚಿನ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ.