ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಶಿವಮೊಗ್ಗ ಜಿಲ್ಲಾ ಶಾಖೆಯ ಕಾರ್ಯದರ್ಶಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಇದರಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ಇಲಾಖೆ, ಅಗ್ನಿಶಾಮಕ ದಳದ ಕಚೇರಿಯ ಸಿಬ್ಬಂದಿಗಳು ಮತ ಚಲಾಯಿಸಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
ಆದರೆ ಪ್ರತಿವರ್ಷ ತಲಾ 200 ರೂ ರಂತೆ ಸದಸ್ಯತ್ವ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಈ ಹಣವನ್ನು ಸಂಘದಿಂದ ಆಯ್ಕೆ ಮಾಡಿ ಕಳುಹಿಸಿದ ಪ್ರತಿನಿಧಿ ಸಿಬ್ಬಂದಿಗಳಿಂದ ಹಣವನ್ನು ಸಂಗ್ರಹಿಸಿ ತಾಲೂಕು ಸಂಘದ ಕಚೇರಿಗೆ ಪಾವತಿಸಿ ರಶೀದಿ ಹಾಕಿಸಬೇಕು ಇದು ನಿಯಮ,
ಒಂದು ವೇಳೆ ಹಣ ಪಾವತಿಸಿದೆ ಇದ್ದರೆ ಸಂಘದ ವತಿಯಿಂದ ಸದಸ್ಯರಿಗೆ ಹಣ ಪಾವತಿಸಿದೆ ಇರುವ ಬಗ್ಗೆ ತಿಳುವಳಿಕೆ ನೋಟಿಸ್ ನೀಡಬೇಕು ಆದರೆ ಶಿವಮೊಗ್ಗದಲ್ಲಿ ಒಂದು ಹಗರಣ ನಡೆದಿದ್ದು ಇದರಲ್ಲಿ ಸಿಬ್ಬಂದಿಗಳಿಂದ ಆಯ್ಕೆಯಾದ ಸತೀಶ್ ಡಿಬಿ ಎನ್ನುವ ಜಿಲ್ಲಾ ಪೊಲೀಸ್ ಇಲಾಖೆಯ ಪ್ರತಿನಿಧಿ ಎಫ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದು ಇವರು ಸಿಬ್ಬಂದಿಗಳಿಂದ ಹಣವನ್ನು ನಗದು ರೂಪದಲ್ಲಿ ಹಾಗೂ ಫೋನ್ ಪೇ ಮೂಲಕ ಸಂಗ್ರಹಿಸಿ ಸರ್ಕಾರಿ ನೌಕರರ ಸಂಘಕ್ಕೆ ಪಾವತಿಸಿ ರಶೀದಿ ಪಡೆಯಬೇಕಿತ್ತು ನಂತರ ಅದನ್ನು ಸದಸ್ಯರಿಗೆ ನೀಡಬೇಕಿತ್ತು ಆದರೆ ಇಲ್ಲಿ ಪ್ರತಿನಿಧಿ ಸತೀಶ್ ಹಣವನ್ನು ಪಾವತಿಸಿದೆ ತಾನೆ ಚುನಾವಣೆಯಲ್ಲಿ ಮತ್ತೆ ಅವಿರೋಧವಾಗಿ ಆಯ್ಕೆಯಾಗಬೇಕು ಎನ್ನುವ ದುರುದ್ದೇಶದಿಂದ ತನ್ನ ಬಳಿ ಹಣ ಇಟ್ಟುಕೊಂಡು ಕಟ್ಟದೆ ಉಳಿದ ಸದಸ್ಯರಿಗೆ ಮೋಸ ಮಾಡಿರುತ್ತಾರೆ ಆದ್ದರಿಂದ ಸಂಘದ ಬೈಲಾ ಪ್ರಕಾರ ಹಣವನ್ನು ಕಟ್ಟದೆ ಇರುವವರು ಚುನಾವಣೆಯಲ್ಲಿ ಮತ ಚಲಾಯಿಸಬಹುದೇ ವಿನಹ ಚುನಾವಣೆಗೆ ನಿಲ್ಲುವಂತಿಲ್ಲ ಎನ್ನುವ ನಿಯಮವಿದೆ ಇದನ್ನು ಗುರಿಯಾಗಿಸಿಕೊಂಡು ತನ್ನ ಆಸೆ ಈಡೇರಿಸಿಕೊಳ್ಳಲು ಸತೀಶ್ 40 ಜನ ಸಿಬ್ಬಂದಿಗಳ ಪೈಕಿ ತಮ್ಮದು ಒಬ್ಬರದೇ ಹಣ ಕಟ್ಟಿ ಉಳಿದ 39 ಜನರ ಹಣವನ್ನು ಸಂಘಕ್ಕೆ ಕಟ್ಟದೆ ಮೋಸ ಮಾಡಿದ್ದಾರೆ ಎನ್ನುವುದು ಸಿಬ್ಬಂದಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದರ ಮುಂದುವರಿದ ಭಾಗವಾಗಿ ಸತೀಶ್ ಮೇಲೆ ಹಣ ವಂಚನೆ ಆರೋಪದಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಇದೇ ತರಹ ರಾಜ್ಯದಲ್ಲಿ ಎಷ್ಟೋ ಕಡೆ ನಡೆದಿದೆ ಎನ್ನುವ ಚರ್ಚೆ ಶುರುವಾಗಿದೆ.
ಒಟ್ಟಿನಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು ಗೆಲ್ಲಲೇ ಬೇಕು ಎನ್ನುವ ಹಠದಿಂದ ವಾಮ ಮಾರ್ಗ ಹಿಡಿದು ತಮ್ಮ ಗೆಲುವು ಸಾಧಿಸಿಕೊಳ್ಳುವ ಹಠಕ್ಕೆ ಕೆಲವರು ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಚುನಾವಣೆಗಳು ನ್ಯಾಯಯುತವಾಗಿ ನಡೆಯಬೇಕು ಅದರಲ್ಲೂ ಆಡಳಿತ ವರ್ಗದಲ್ಲಿರುವ ಸಿಬ್ಬಂದಿಗಳ ಚುನಾವಣೆಗಳು ಪ್ರತಿಷ್ಠೆಯ ಕಣವಾಗಬಾರದು ಚುನಾವಣೆಯಲ್ಲಿ ಗೆದ್ದವರು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಬೇಕು ಅವರ ಅಭಿವೃದ್ಧಿಗೆ ಶ್ರಮಿಸಬೇಕು ಸರ್ಕಾರದ ವಲಯದಲ್ಲಿ ಕೆಲಸ ಮಾಡಲು ಅರ್ಹರಿರಬೇಕು ಚುನಾವಣೆಯಲ್ಲಿ ಪ್ರತಿನಿಧಿಸಿ ಎಲ್ಲರ ಮತ ಪಡೆದು ಚುನಾವಣೆಯಲ್ಲಿ ಗೆದ್ದು ಬರಬೇಕು ಆಗ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಒಂದು ಬೆಲೆ ಇರುತ್ತದೆ ಆದರೆ ಇತ್ತೀಚಿನ ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆಗಳಂತೆ ಸರ್ಕಾರಿ ನೌಕರರ ಸಂಘದ ಚುನಾವಣೆಗಳು ನಡೆಯುತ್ತಿರುವುದು ದುರದೃಷ್ಟಕರ ಇದನ್ನು ಗಂಭೀರವಾಗಿ ಪರಿಗಣಿಸಿ ಈ ತರದ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರೋರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತಹ ಜಿಲ್ಲೆಗಳಲ್ಲಿ ಚುನಾವಣೆಗಳನ್ನು ಮುಂದೂಡಿ ನ್ಯಾಯಯುತವಾಗಿ ಚುನಾವಣೆಗಳನ್ನು ನಡೆಸಬೇಕು ಎನ್ನುವುದು ಹೆಸರು ಹೇಳಲು ಇಚ್ಛಿಸದ ಕೆಲವೊಂದು ಸರ್ಕಾರಿ ಸಿಬ್ಬಂದಿಗಳ ಅಳಲು….
ರಘುರಾಜ್ ಹೆಚ್ ಕೆ..9449553305…