ಶಿವಮೊಗ್ಗ : ಓಸಿ ಸಾಮ್ರಾಜ್ಯದಲ್ಲಿ ಒಂದು ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ ಆದರೂ ಪೊಲೀಸ್ ಇಲಾಖೆ ಏಕೋ ಸುಮ್ಮನೆ ಕುಳಿತಿದೆ ಓಸಿ ಸಾಮ್ರಾಜ್ಯದ 70 ಭಾಗದ ದೊರೆ ಸಂದೀಪ್ ನ ಬಗ್ಗೆ ಪತ್ರಿಕೆ ಹಿಂದೆ ವರದಿ ಮಾಡಿತ್ತು ಈತನ ವ್ಯವಹಾರದ ಬಗ್ಗೆ ವಿಸ್ತಾರವಾಗಿ ವರದಿ ಮಾಡಿತ್ತು. ಜೊತೆಗೆ ಈಗ ನಡೆಯುತ್ತಿರುವ ದಂಧೆಯ ಬಗ್ಗೆ ಸಾಕ್ಷಿ ಸಮೇತ ಪ್ರಕಟಿಸುವುದಾಗಿ ಪತ್ರಿಕೆ ಸುದ್ದಿ ಕೂಡ ಪ್ರಕಟಿಸಿತ್ತು ಸಂದೀಪನ ಆಸ್ತಿ ವಿವರಗಳನ್ನು ಸಂಗ್ರಹಿಸುತ್ತಿದ್ದು ಅದನ್ನು ಕೂಡ ಪ್ರಕಟಿಸುವುದಾಗಿ ಹೇಳಲಾಗಿತ್ತು ಇದರ ಬೆನ್ನಲ್ಲೇ ಇತ್ತ ಕಡೆ ಸಂದೀಪ್ ತಾನು ಇನ್ನು ಮುಂದೆ ಓಸಿ ಸಾಮ್ರಾಜ್ಯದ ದೊರೆ ಸ್ಥಾನಕ್ಕೆ ನಿವೃತ್ತಿ ಘೋಷಿಸುತ್ತೇನೆ ನಾನು ಮುಂದುವರಿಯವುದು ಕಷ್ಟ ಹಾಗಾಗಿ ಈ ಸಲಹದ ದೀಪಾವಳಿ ಬೋನಸ್ ಅನ್ನು ತಮಗೆ ನೀಡುವುದಿಲ್ಲ ನನ್ನ ಕಡೆ ಹುಡುಗರಿಗೂ ನೀವು ಕರೆ ಮಾಡಬೇಡಿ ನಾನು ನಿಮಗೆ ಫೋನಿಗೆ ಸಿಗುವುದಿಲ್ಲ ನನ್ನ ನಿರ್ಧಾರ ಏನಿದ್ದರೂ 3ನೇ ತಾರೀಕು ತಿಳಿಸುತ್ತೇನೆ ಮೂರನೇ ತಾರೀಕು ಎಲ್ಲರೂ ಫೋನ್ ಆನ್ ಇಟ್ಕೊಳ್ಳಿ ಎಂದು ಹೇಳಿರುವ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ದಿನದಲ್ಲಿ ಲಕ್ಷಗಟ್ಟಲೆ ದುಡ್ಡು ಮಾಡುವ ಕೋಟಿಗೆ ಬಾಳುವ ಸಂದೀಪ್ ಪ್ರತಿ ವರ್ಷ ತಿಂಗಳ ಮಾಮೂಲು ಅಲ್ಲದೆ ದೀಪಾವಳಿಗೆ ಬೋನಸ್ ನೀಡುವುದು ಪದ್ಧತಿ ಆದರೆ ಈ ಸಲ ಬೋನಸ್ ನೀಡುವುದಿಲ್ಲ ಎಂದು ಹೇಳಿರುವುದು ಹಾಗೂ ತನ್ನ ನಿರ್ಧಾರವನ್ನು ಮೂರನೇ ತಾರೀಕು ಪ್ರಕಟಿಸುತ್ತೇನೆ ಎಂದು ಹೇಳಿರುವುದು ತೀವ್ರ ಕುತೂಹಲ ಉಂಟು ಮಾಡಿದೆ ಈ ಆಡಿಯೋ ಇಷ್ಟೆಲ್ಲಾ ವೈರಲ್ ಆಗುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಏಕೆ ಯಾವುದೇ ಪ್ರಕರಣ ದಾಖಲು ಮಾಡದೆ ವಿಚಾರಣೆ ಮಾಡದೆ ಸುಮ್ಮನಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗದ ಓಸಿ ಸಾಮ್ರಾಜ್ಯದಲ್ಲಿ ಏನಾಗ್ತಿದೆ ಲಕ್ಷಗಳ ಲೆಕ್ಕದಲ್ಲಿ ದಿನದಲ್ಲಿ ದುಡಿಯುವ ಓಸಿ ಡಾನ್ ಗಳು ನಿವೃತ್ತಿಯ ಮಾತನಾಡುತ್ತಿರುವುದು ಏಕೆ ..?! ಈತನ ನಿವೃತ್ತಿಯ ನಂತರ ಈತನ ಸ್ಲೀಪಿಂಗ್ ಪಾರ್ಟ್ನರ್ ಪ್ರಕಾಶ್ ಮುನ್ನೆಲೆಗೆ ಬರುತ್ತಾನಾ..?! ಅಥವಾ ಹಳೆ ಓಸಿಡಾನ್ ಸುಧಾಕರ್ ಮತ್ತೆ ಫೀಲ್ಡಿಗೆ ಇಳಿಯುತ್ತಾನ..?! ನಿವೃತ್ತಿಯ ಮಾತನಾಡಿ ಹಿಂದಿನಿಂದ ಆಟವಾಡುವ ಲೆಕ್ಕಾಚಾರ ನಡೆಯುತ್ತಿದೆಯಾ..?! ಲಕ್ಷಗಳ ಲೆಕ್ಕದಲ್ಲಿ ಬಾಳುವ ಈ ಡಾನ್ ಗಳು ನಿವೃತ್ತಿ ಘೋಷಿಸಿ ಬಿಟ್ಟರೆ ಎಲ್ಲವೂ ಸರಿ ಹೋದಂತೆ ಆಗುತ್ತಾ..?! ಇವರು ಮಾಡಿರುವ ಅಕ್ರಮ ಆಸ್ತಿಯ ಮೇಲೆ ಬೆನ್ನು ಬೀಳಲ್ವಾ..?! ಖಂಡಿತಾ ಎಲ್ಲೆಲ್ಲಿ ಇದೆ ಅಕ್ರಮ ಆಸ್ತಿ ಅದು ಹೇಗೆ ಬಂತು .? ಬಹಿರಂಗವಾಗಿ ದೀಪಾವಳಿಯ ಬೋನಸ್ ಕೊಡಲ್ಲ ಎಂದು ಹೇಳುವ ಓಸಿ ಸಾಮ್ರಾಜ್ಯದ ದೊರೆ ಸಂದೀಪ್ ಮಾಡಿರುವ ಆಸ್ತಿಯ ವಿವರಗಳು ನಿರೀಕ್ಷಿಸಿ…
ರಘುರಾಜ್ ಹೆಚ್.ಕೆ..9449553305….