Wednesday, April 30, 2025
Google search engine
Homeಶಿವಮೊಗ್ಗಆರೋಗ್ಯShivamogga: ವೈದ್ಯಕೀಯ ವಿಜ್ಞಾನ ಸಂಸ್ಥೆಯ ENT ವಿಭಾಗದ ನೇಮಕಾತಿಯಲ್ಲಿ ಗೊಂದಲ..?!

Shivamogga: ವೈದ್ಯಕೀಯ ವಿಜ್ಞಾನ ಸಂಸ್ಥೆಯ ENT ವಿಭಾಗದ ನೇಮಕಾತಿಯಲ್ಲಿ ಗೊಂದಲ..?!

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇ ಏನ್ ಟಿ ENT ಪ್ರೊಫೆಸರ್ ಹುದ್ದೆ ಕಳೆದ ಹತ್ತು ತಿಂಗಳಿಂದ ಖಾಲಿ ಇದ್ದು ಇಲ್ಲಿಯವರೆಗೂ ಯಾರ ನೇಮಕಾತಿ ಮಾಡದೆ ಇಲ್ಲಿರುವ ಸ್ನಾತಕೋತ್ತರ ಕೋರ್ಸ್ ಗಳು ಅನರ್ಹತೆ ಗೊಳ್ಳುವ ಸಾಧ್ಯತೆಯಿದ್ದು ತುಂಬಾ ಗೊಂದಲ ಇರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಯಾರನ್ನು ನೇಮಕ ಮಾಡಬೇಕು ಎನ್ನುವ ಸ್ಪಷ್ಟತೆ ಇಲ್ಲದೆ ಗೊಂದಲದಲ್ಲಿದೆ.

ಸೀನಿಯರ್ ಟಿ ಲಿಸ್ಟ್ ನಲ್ಲಿರುವ ಸಹ ಪ್ರಾಧ್ಯಾಪಕರ ಕಾರ್ಯನಿರ್ವಹಣೆ 3 ವರ್ಷ ಅತಿಕಳಪೆ ‌1 ವರ್ಷ ಕಳಪೆ ಇದೆ ಇವರನ್ನು ಮಾಡಲು ಬರುವುದಿಲ್ಲ ‌ ಆದರೆ ಇವರನ್ನೇ ಮಾಡಬೇಕು ಎನ್ನುವ ಲಾಬಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವ ಚರ್ಚೆಗಳು ವೈದ್ಯಕೀಯ ವಿದ್ಯಾಲಯ ಸಂಸ್ಥೆಯಲ್ಲಿ ನಡೆಯುತ್ತಿದೆ.

ಒಂದು ವೇಳೆ ಇವರನ್ನೇ ನೇಮಕಾತಿ ಮಾಡಿದರೆ ಈ ವಿಷಯ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇದೆ..?! ನ್ಯಾಯಾಲಯಕ್ಕೆ ಈ ವಿಷಯ ತಲುಪಿದರೆ ಮುಂದಿನ ದಿನಗಳಲ್ಲಿ ಇಲ್ಲಿರುವ ಸ್ನಾತಕೋತ್ತರ ಸೀಟುಗಳು ಅನರ್ಹತೆ ಗೊಳ್ಳುವ ಹಾಗೂ ರದ್ದತಿಯಾಗುವ ಸಂಭವ ಇರುವುದರಿಂದ ಈ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದರಿಂದ ಈ ಗೊಂದಲಕ್ಕೆ ತೆರೆ ಎಳೆದು ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಗತಿಗೆ ಮುನ್ನುಡಿ ಬರೆಯಬೇಕು ಎನ್ನುವುದು ಹಲವರ ಆಕಾಂಕ್ಷಿಯಾಗಿದೆ ‌

ಸರ್ಕಾರ ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನ ಹರಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರು ಹಿಂದೆ ಬಡವರಿಗೆ, ದೀನ ದಲಿತರಿಗೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಒಂದು ಬೃಹತ್ ಆಸ್ಪತ್ರೆ ಇರಲಿ ಎನ್ನುವ ಉದ್ದೇಶದಿಂದ ನಗರದಲ್ಲಿ ಈ ಆಸ್ಪತ್ರೆಯನ್ನು ಅವರ ಅಧಿಕಾರ ಅವಧಿಯಲ್ಲಿ ತಂದರು ಆದರೆ ಇಲ್ಲಿರುವ ಕೆಲವು ತಿಮಿಂಗಲಗಳು ಎಲ್ಲೆಲ್ಲಿ ಹಣ ತಿನ್ನಲು ಸಾಧ್ಯವೊ ಅಲ್ಲ ಅಲ್ಲೆಲ್ಲಾ ಹಣ ತಿನ್ನುತ್ತಿದ್ದಾರೆ ಬಡವರಿಗೆ ಸರಿಯಾದ ಚಿಕಿತ್ಸೆಗಳು ಲಭ್ಯವಾಗುತ್ತಿಲ್ಲ, ಔಷಧಿಗಳನ್ನು ಹೊರಗಡೆ ಬರೆದು ಕೊಡುತ್ತಿದ್ದಾರೆ, ಇಲ್ಲಿರುವ ವೈದ್ಯರು ಸರ್ಕಾರಿ ಸಂಬಳ ತೆಗೆದುಕೊಳ್ಳುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸೇವೆ ಸಲ್ಲಿಸಿ ಸಂಬಳಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಜೆ ಆದರೆ ಸಾಕು ಯಾವುದೇ ಡಾಕ್ಟರಗಳು ಸರಿಯಾದ ಸಮಯಕ್ಕೆ ಲಭ್ಯವಿರುವುದಿಲ್ಲ ‌ ಸ್ವಚ್ಛತೆ ಎನ್ನುವುದು ಕಣ್ಮರೆಯಾಗಿದೆ. ಇದನ್ನೆಲ್ಲಾ ನೋಡಿಕೊಳ್ಳಬೇಕಾದ ಆಡಳಿತ ಹಿಡಿದ ಸಂಸ್ಥೆಯ ಮುಖ್ಯ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ ಇವರದೇನಿದ್ದರೂ ಹಣ ಎಲ್ಲಿ ಬರುತ್ತದೆಯೋ ಅಲ್ಲಿ ತಿನ್ನುವುದೇ ಕೆಲಸ ಅದೆಲ್ಲದರ ಮಾಹಿತಿಯನ್ನು ಪತ್ರಿಕೆ ಸಂಗ್ರಹಿಸುತ್ತಿದೆ ಹೆಸರಿನಲ್ಲಿಯೇ ಲಕ್ಷ್ಮಿಯನ್ನು ಇಟ್ಟುಕೊಂಡಿರುವ ಪತಿಗಳು ಸಂಸ್ಥೆಯ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಜೊತೆ ಸೇರಿ ಮಾಡಬಾರದ ಹಗರಣಗಳನ್ನು ಮಾಡುತ್ತಿದ್ದಾರೆ ಎಲ್ಲದರ ಮಾಹಿತಿ ಪತ್ರಿಕೆ ಸಂಗ್ರಹಿಸುತ್ತಿದ್ದು ಸಂಬಂಧಪಟ್ಟ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ಶೀಘ್ರದಲ್ಲೇ ತಂದು ಪತ್ರಿಕೆಯಲ್ಲಿ ಪ್ರಕಟಿಸಿ ಇಲ್ಲಿ ನಡೆಯುತ್ತಿರುವ ಗೋಲ್ಮಾಲ್ ಹಾಗೂ ಹಗರಣಗಳನ್ನು ಬೈಲಿಗೆ ಎಳೆದು ಬಡವರಿಗೆ ಆಸರೆ ಆಗಿರಬೇಕಾದ ಸಂಸ್ಥೆಯಲ್ಲಿ ಕೆಲವರು ಮಾಡುತ್ತಿರುವ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಪ್ರಕಟಿಸಲಿದೆ ನಿರೀಕ್ಷಿಸಿ….

ರಘುರಾಜ್ ಹೆಚ್.ಕೆ..9449553305..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...