ಧಾರವಾಡ : ಕಳೆದ ಅಕ್ಟೋಬರ್ 30 ರಂದು ಕಾನೂನು ವಿಶ್ವವಿದ್ಯಾನಿಲಯ ದಲ್ಲಿ ನಡೆದ ಇಂಟರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗದ ಉಮೇಶ್ ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ . ಯು CBR ರಾಷ್ಟ್ರೀಯ ಕಾನೂನು ಕಾಲೇಜಿನ ಮತ್ತು ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿಯು ಮೈನಸ್ 67 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜನವರಿ 6 , 7 ಮತ್ತು 8 ರಂದು ಚೆನ್ನೈನಲ್ಲಿ ನಡೆಯಲಿರುವಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದಂತಹ ಕ್ರೀಡಾಪಟುವಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಿ.ಎಸ್. ನಾರಾಯಣರಾವ್, ಸಂಸ್ಥೆಯ ಕಾರ್ಯದರ್ಶಿಯಾದಂತಹ ಶ್ರೀಯುತ ಎಸ್ಎನ್ ನಾಗರಾಜ ರವರು, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ,ಹಾಗೂ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದಂತಹ ಶಿಹಾನ್ ಎ . ಝೆಡ್ . ಮುಹೀಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾಧಿಕ್, ತರಬೇತಿದಾರರಾದ ಸನ್ ಸೈ ಮಂಜುನಾಥ್ ರವರು ಅಭಿನಂದಿಸುತ್ತಾರೆ.