
ಭದ್ರಾವತಿ : ತಾಲೂಕಿನ ಅಂತರಗಂಗೆ ಯಿಂದ ಸ್ವಲ್ಪ ದೂರವಿರುವ ಕೆ ಹೆಚ್ ನಗರದ ನಿವಾಸಿ ದೇವೇಂದ್ರಪ್ಪ(52) ಕರಡಿ ದಾಳಿಗೆ ಒಳಗಾಗಿದ್ದು, ತಲೆ ಮುಖ ಸೇರಿದಂತೆ ದೇಹದ ವಿವಿಧ ಕಡೆ ಗಂಭೀರ ಗಾಯಗಳಾಗಿವೆ. ಈತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು.
ಈತ ಬದುಕು ಉಳಿದಿದ್ದೆ ಪವಾಡ ಎನ್ನಬಹುದು ಕೆ.ಹೆಚ್ ನಗರದಿಂದ ಬಿಸಿಲು ಮನೆಯಲ್ಲಿ ಜಮೀನು ಕೆಲಸಕ್ಕೆ ಹೋದಾಗ ಕರಡಿ ದಿಡೀರನೆ ದಾಳಿ ನಡೆಸಿದ್ದು ಜಮೀನು ಕೆಲಸ ಮುಗಿಸಿ ಮನೆಗೆ ವಾಪಾಸಾಗುವಾಗ ಜಮೀನಿನ ಬಳಿಯೇ ದಾಳಿ ನಡೆಸಿದೆ.
ದೇವೇಂದ್ರಪ್ಪ ಮೂಲತಃ ಟೈಲರಿಂಗ್ ಕೆಲಸ ಮಾಡುವವರಾಗಿದ್ದಾರೆ. ಟೈಲರಿಂಗ್ ಕೆಲಸ ಜೀವನೋಪಯಾಕ್ಕೆ ಸಾಗುತ್ತಿಲ್ಲವಾದುದರಿಂದ ಕೃಷಿ ಕೂಲಿ ಕೆಲಸಕ್ಕೆ ದೇವೇಂದ್ರಪ್ಪ ಹೋಗುತ್ತಿದ್ದರು. ಇದಕ್ಕೂ ಮೊದಲು ದೇವೇಂದ್ರಪ್ಪ ಜಮೀನು ಗುತ್ತಿಗೆ ಹಿಡಿದು ಜೀವನ ನಡೆಸುತ್ತಿದ್ದರು. ಇವರಿಗೆ ಮಕ್ಕಳಿಬ್ವರಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.