ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಮೂಲದ ವ್ಯಕ್ತಿ ಓರ್ವರಿಗೆ ಕೈಮರ ಮೂಲದ ಮಹಿಳೆ ಹಾಗೂ ಆಕೆಯ ಸಹೋದರ ಮೇಗರವಳ್ಳಿ ಮೂಲದ ವ್ಯಕ್ತಿಯ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಅದು ಈಗ ದೂರಿನಲ್ಲಿ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏನಿದು ಘಟನೆ : ಮೇಗರವಳ್ಳಿ ಮೂಲದ ವ್ಯಕ್ತಿ ಓರ್ವರು ಕೈಮರ ಮೂಲದ ಮಹಿಳೆಯ ಜೊತೆ ಇದ್ದ ವಿಡಿಯೋ ಇಟ್ಟುಕೊಂಡು ಆಕೆಯ ಸಹೋದರ ಮೊದಲು ತಂದೆಗೆ ನಂತರ ಮಗನಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಸುತ್ತಿದ್ದರಿಂದ ಬೇರೆ ದಾರಿ ಕಾಣದೆ ಇಲಾಖೆ ಮರೆಹೋದ ನೊಂದ ವ್ಯಕ್ತಿಗೆ ಇಲಾಖೆ ಸೂಕ್ತ ರಕ್ಷಣೆ ನೀಡಿದ್ದು ಆಕೆಯ ವಿರುದ್ಧ ಹಾಗೂ ಆಕೆಯ ಸಹೋದರನ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾರು ಆ ವ್ಯಕ್ತಿ..? ಯಾರು ಆ ಮಹಿಳೆ..? ಆತನಿಗೂ ಆಕೆಗೂ ಏನು ಸಂಬಂಧ..? ಈ ಹಣಕ್ಕಾಗಿ ಬೇಡಿಕೆಯ ವಿಷಯ ಯಾವಾಗಿಂದ ನಡೆಯುತ್ತಿದೆ..?! ಎಲ್ಲವನ್ನು ಪತ್ರಿಕೆ ಮುಂದೆ ತಿಳಿಸಲಿದೆ ನಿರೀಕ್ಷಿಸಿ…