ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯ ಜಾವಳ್ಳಿ ಅಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜ್ಞಾನದೀಪ ಶಾಲೆಯ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕ ಸಹ ಸಿಬ್ಬಂದಿಗಳಿಂದ ಒಂದು ಅಮಾನವೀಯ ಕೃತ್ಯ ನಡೆದಿದೆ.
ಏನಿದು ಘಟನೆ :
5 ನೇ ತರಗತಿ ಓದುತ್ತಿರುವ ಒಂದು ಮಗು ಜ್ಞಾನದೀಪ ಶಾಲೆಯಲ್ಲಿ ಓದುತ್ತಿದ್ದು ಅವರ ಪೋಷಕರಿಗೆ ಕೆಲವು ಅನಿವಾರ್ಯ ಕಾರಣಗಳಿಂದ ಶಾಲೆಯ ಶುಲ್ಕವನ್ನು ಕಟ್ಟಲು ವಿಳಂಬವಾಗಿತ್ತು ಇದನ್ನೇ ಮುಂದಿಟ್ಟುಕೊಂಡು ಪೋಷಕರ ಮೀಟಿಂಗಿಗೆ ಹೋಗಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಟ್ಟ ಪದಗಳ ಪ್ರಯೋಗ ಮಾಡಿದ್ದಾರೆ. ಅವರ ಜಾತಿಯ ಹೆಸರಿಡಿದು ಕೆಟ್ಟ ಪದಗಳನ್ನು ಪ್ರಯೋಗಿಸಿ ನಿಂದಿಸಿದ್ದಾರೆ.
ಪ್ರಕರಣ ಠಾಣೆಯ ಮೆಟ್ಟಿಲಿಗೆ :
ಇದೀಗ ಈ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಶಾಲಾ ಶಿಕ್ಷಕಿ ಮುಖ್ಯ ಶಿಕ್ಷಕ ಹಾಗೂ ಸಹ ಸಿಬ್ಬಂದಿಯ ಮೇಲೆ ಜಾತಿ ನಿಂದನೆ ಆರೋಪ ದಡಿ ಕೇಸ್ ದಾಖಲಾಗುವ ಸಾಧ್ಯತೆ ಇದೆ.
ಉತ್ತಮ ಸಂಸ್ಕಾರ ಕಲಿಸಬೇಕಾದ ಶಾಲೆಯೇ ಹೀಗಾದರೆ ಹೇಗೆ.?!
ಲಕ್ಷಾಂತರ ರೂಪಾಯಿ ಶುಲ್ಕವನ್ನು ತೆಗೆದುಕೊಂಡು ಉತ್ತಮ ಶಿಕ್ಷಣವನ್ನು ಕಲಿಸುತ್ತೇವೆ ಎಂದು ಭಾಷಣ ಹೊಡೆಯುತ್ತಾ ಬೋರ್ಡ್‌ಗಳನ್ನು ಹಾಕುತ್ತಾ ಜಾಹೀರಾತುಗಳನ್ನು ನೀಡುವ ಇಂತಹ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂಸ್ಕಾರ ಕಲಿಸುವ ಬದಲು ತಾವೇ ಜಾತಿಯ ವಿಷಬೀಜ ಬಿತ್ತಲು ಪ್ರಯತ್ನಪಡುತ್ತಿರುವುದು ಎಷ್ಟು ಸರಿ..?! ಶಾಲೆಯ ಶುಲ್ಕ ಕಟ್ಟಲು ವಿಳಂಬವಾಗುವುದು ಸಹಜ ಕಟ್ಟುತ್ತಾರೆ ಅದಕ್ಕೆ ಸಮಯ ಅವಕಾಶ ನೀಡಬೇಕು ಆದರೆ ಅದನ್ನೇ ಮುಂದಿಟ್ಟುಕೊಂಡು ಜಾತಿಯ ವಿಚಾರದಲ್ಲಿ ಹೀಯಾಳಿಸುವುದು, ಅವಮಾನಿಸುವುದು, ನಿಂದಿಸುವುದು ಸರಿನಾ..? ಇಂತಹ ಶಿಕ್ಷಣ ಸಂಸ್ಥೆಗಳಿಗೆ ತಕ್ಕ ಶಿಕ್ಷೆ ಆಗಬೇಕು ಇದರಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ…
ಶಿವಮೊಗ್ಗದಲ್ಲೂ ಇರುವ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಇದೇ ತರಹ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಷ್ಟೋ ಪೋಷಕರು ಅಂಜಿ ದೂರು ನೀಡದೆ ಸುಮ್ಮನಾಗಿದ್ದಾರೆ ಹಾಗಾಗಿ ಇವರುಗಳು ಇಷ್ಟು ಧೈರ್ಯದಿಂದ ಇತರ ಮಾಡುವ ಮಟ್ಟಕ್ಕೆ ಹೋಗಿದ್ದಾರೆ ಇದು ಇಲ್ಲಿಗೆ ನಿಲ್ಲಬೇಕು ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುವುದು ಸಾರ್ವಜನಿಕರ ಪ್ರಜ್ಞಾವಂತ ನಾಗರಿಕರ ಕಳಕಳಿ…
ರಘುರಾಜ್ ಹೆಚ್. ಕೆ ..9449553305…