
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024-25 ಹಳೇಮುಗಳಗೆರೆ ಗ್ರಾಮದಲ್ಲಿ ಜೇನು ಕೃಷಿ ಲಾಭದಾಯಕ ಎಂದು ಗೌತಮ್ ಬಿಚ್ಚುಗತ್ತಿ ಎಲುಸಿ ಗ್ರಾಮ ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ ಇವರು ಸಮಗ್ರ ಕೃಷಿ ಪದ್ಧತಿ ಮತ್ತು ಜೇನು ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
ಖಾಸಗಿ ಉದ್ಯಮ ಜೊತೆಗೆ ತೋಟಗಾರಿಕಾ ಗಿಡಗಳ ನರ್ಸರಿಯನ್ನು ನಡಸುತ್ತಿದ್ದಾರೆ.40 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಮತ್ತು 2000-3000 ಜನಕ್ಕೆ ತರಬೇತಿಗಳನ್ನು ನೀಡಿದ್ದಾರೆ. ಇವರು ಇಂದು ಗ್ರಾಮದಲ್ಲಿ ಜೇನು ಕೃಷಿ ಬಗ್ಗೆ ತರಬೇತಿಯನ್ನು ನೀಡಿದರು.
ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ವಿವಿಧ ತಳಿಗಳ ಜೇನುಗಳಿದ್ದು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಆದ್ದರಿಂದ ಜೇನುಗಳ ಸಂತತಿಯನ್ನು ಉಳಿಸುವ ಮೂಲಕ ಪ್ರಕೃತಿಯ ಅಸಮತೋಲನ ತಪ್ಪಿಸ ಬಹುದಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ತೋಟಗಳಲ್ಲಿ ವಿಪರೀತ ಕೀಟ ನಾಶಕ ಮತ್ತು ಕಳೆನಾಶಕ ಬಳಕೆ ಹೆಚ್ಚಾಗಿರುವುದರಿಂದ ಜೇನು ಸಂತತಿ ಕ್ಷೀಣಿಸುತ್ತಿದೆ. ಆದ್ದರಿಂದ ರೈತರು ಎಚ್ಚರಿಕೆ ವಹಿಸಬೇಕಿದೆ.ಸಮಗ್ರ ಹಾಗೂ ಸುಸ್ಥಿರ ಕೃಷಿಯಲ್ಲಿ ಜೇನಿನ ಪಾತ್ರ ಹಿರಿದು, ಉತ್ತಮ ಇಳುವರಿಯ ಬೆಳೆಯೊಂದಿಗೆ ಅತ್ಯುತ್ತಮ ಆದಾಯ ನೀಡುವ ಜೇನು ಕೃಷಿಯಿಂದ ಜೀವವೈವಿಧ್ಯತೆಯ ಸಮತೋಲನ, ನಮ್ಮ ಆರೋಗ್ಯದ ಸದೃಢತೆಗೂ ಇವು ನೆರವಾಗುತ್ತವೆ. ಜೇನು ನಮ್ಮ ಆಡಳಿತಗಳು ಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದರು.
ಅವರು ಪದ್ಧತಿ ಪ್ರಾತ್ಯಕ್ಷಿಕೆ ಮಾಡಲು ಬೇಕಾದ ಎಲ್ಲಾ ವಸ್ತುಗಳನ್ನು ತಂದು ಎಲ್ಲಾ ರೈತರಿಗೆ ಜೇನು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು .
ಹೆಚ್ಚಿನ ಮಾಹಿತಿಗಾಗಿ: 93536 18416