
ಶಿವಮೊಗ್ಗ: 04-12-2024 ರಿಂದ ನಡೆಯುತ್ತಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024 ರ ಸಮಾರೋಪ ಸಮಾರಂಭವನ್ನು ಈ ದಿನ ದಿನಾಂಕ: 06-12-2024 ರಂದು ಸಂಜೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದು, ಮಿಥುನ್ ಕುಮಾರ್, ಜಿ.ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತವನ್ನು ಕೋರಿದರು,

ರಮೇಶ್ ಬಿ, ಐಪಿಎಸ್, ಉಪ ಪೊಲೀಸ್ ಮಹಾನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಸದರಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿವಿಧ ಪಂದ್ಯಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿ, ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಹಾಜರಿದ್ದವರ ಕುರಿತು ಮಾತನಾಡಿ ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಒತ್ತಡ ನಿರ್ವಹಣೆಯು ಮುಖ್ಯವಿದ್ದು, ಈ ರೀತಿ ಕ್ರೀಡಾ ಕೂಟವನ್ನು ಆಯೋಜಿಸುವುದರಿಂದ ಒತ್ತಡ ನಿರ್ವಹಣೆಗೆ ಅನುಕೂಲವಾಗಲಿದೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯು ಸಹಕಾರಿಯಾಗಲಿದ್ದು, ಆದ್ದರಿಂದ ನಿಮ್ಮ ದೈನಂದಿನ ಜೀವನದಲ್ಲಿ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಹಾಗೂ ಕರ್ತವ್ಯದ ಜೊತೆಗೆ ಕುಟುಂಭಕ್ಕೂ ಸಹ ಸಮಯಕೊಡಿ ಎಂದು ಹೇಳಿದರು. ನಂತರ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ರವರು ಎಲ್ಲರಿಗೂ ವಂದನಾರ್ಪಣೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, ಕೃಷ್ಣಮೂರ್ತಿ, ಡಿವೈಎಸ್ಪಿ ಡಿಎಆರ್ ಶಿವಮೊಗ್ಗ, ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಗೋಪಾಲ ಕೃಷ್ಣ ಟಿ ನಾಯಕ್, ಡಿವೈಎಸ್ಪಿ, ಸಾಗರ ಉಪ ವಿಭಾಗ, ಬಾಬು ಆಂಜನಪ್ಪ,ಡಿವೈಎಸ್ಪಿ, ಶಿವಮೊಗ್ಗ-ಎ ಉಪ ವಿಭಾಗ, ಕೇಶವ್, ಡಿವೈಎಸ್ಪಿ, ಶಿಕಾರಿಪುರ ಉಪ ವಿಭಾಗ, ಸುರೇಶ್ ಎಂ, ಡಿವೈಎಸ್ಪಿ, ಶಿವಮೊಗ್ಗ-ಬಿ ಉಪ ವಿಭಾಗ, ಗಜಾನನ ವಾಮನ ಸುತರ, ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ ಮತ್ತು ಕೃಷ್ಣ ಮೂರ್ತಿ,ಡಿವೈಎಸ್ಪಿ ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.
