
ಶಿವಮೊಗ್ಗ : ಇಂದು ಡಿಎ ಆರ್ ಮೈದಾನದಲ್ಲಿ ಕಳ್ಳತನವಾದ ವಸ್ತುಗಳನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಎರಡು ಘಟನೆಗಳು ಗಮನ ಸೆಳೆದವು ಮಲವಗೊಪ್ಪದ ನಿವಾಸಿಯಾಗಿದ್ದ ನಾಗರತ್ನಮ್ಮ ಗೃಹಪ್ರವೇಶಕ್ಕೆ ತೆರಳಿದ ವೇಳೆ ಮನೆಕಳ್ಳತನ ನಡೆದಿತ್ತು. 40 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ ಜೊತೆಗೆ 2000 ರೂ. ನಗದು ಕಳುವಾಗಿತ್ತು. ಈ ಪ್ರಕರಣವನ್ನ 4 ದಿನಗಳಲ್ಲಿ ಪತ್ತೆ ಮಾಡುವಲ್ಲಿ ಡಿವೈಎಸ್ಪಿ ಬಾಬು ಅಂಜನಪ್ಪ, ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆ.ಟಿ ಯಶಸ್ವಿಯಾಗಿದ್ದು.
ಕಳುವಾದ ವಸ್ತುಗಳನ್ನು ಅತಿ ಬೇಗ ಪತ್ತೆ ಹಚ್ಚಿ ಹಿಂತಿರುಗಿಸಿದ ಬಗ್ಗೆ ವೇದಿಕೆಯ ಮಧ್ಯದಲ್ಲಿ ಈ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗೂ ಸಲಾಂ ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗದ ಪ್ರಭಾವತಿ ಎಂಬುವರು ದೀಪಾವಳಿಗೆ ಭದ್ರಾವತಿಯಲ್ಲಿರುವ ತಾಯಿಯ ಮನೆಗೆ ಹೋದಾಗ ಭದ್ರಾವತಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಬಸ್ ನಿಲ್ದಾಣದಿಂದ ಅಮ್ಮನ ಮನೆಗೆ ಹೋಗಲು 290 ಗ್ರಾಂ ಬ್ಯಾಗ್ ನ್ನ ಬಸ್ ನಿಲ್ದಾಣದಲ್ಲೇ ಬಿಟ್ಟು ತೆರಳಿದ್ದರು. ಸುಮಾರು ಒಂದು ಗಂಟೆಯ ನಂತರ ಚಿನ್ನಾಭರಣದ ಬಗ್ಗೆ ನೆನಪಾಗಿದೆ. ಹೋಗಿ ನೋಡಿದಾಗ ಒಂದು ಹೆಂಗಸು ಆ ಬ್ಯಾಗ್ ನ್ನ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನ ಬೇಧಿಸಿದ ಪೊಲೀಸರು ಅಷ್ಟು ಚಿನ್ನವನ್ನ ವಾಪಾಸ್ ಪ್ರಭಾವತಿಗೆ ಒಪ್ಪಿಸಿದ್ದಾರೆ. ಎಸ್ಪಿ ಅವರು 7 ಸ್ಟಾಲ್ ಗಳಲ್ಲಿ ನ್ಯೂಟೌನ್ ಪೊಲೀಸರ ಬಳಿ ಬರ್ತಿದ್ದಂತೆ ಪ್ರಭಾವತಿಯವರು ಮುಂದು ಬಂದು ನಿಮಗೂ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ಕ್ರೈಂ ಪೊಲೀಸರಾದ ನವೀನ್ ಮತ್ತು ಪ್ರಸನ್ನವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ವೇಳೆ ಕ್ರೈಂ ಪೊಲೀಸರು ಹಾಜರಿರಲಿಲ್ಲದಿದ್ದರೂ ಧನ್ಯವಾದಗಳನ್ನ ಹೇಳಿದ್ದಾರೆ.