ಶಿವಮೊಗ್ಗ: ಜಿಲ್ಲೆಯ ಹಲವು ಕಡೆ ದೇವಸ್ಥಾನದ ಹೆಸರಿನಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುವವರ ಜೊತೆ ಕೈಜೋಡಿಸಿ ಕೆಲವು ಗ್ರಾಮದ ಗ್ರಾಮಸ್ಥರು ಮರಳು ಲೂಟಿ ಮಾಡುತ್ತಿದ್ದಾರೆ.
ಈ ಅನಧಿಕೃತ ದಂದೆಗೆ ಬ್ರೇಕ್ ಹಾಕಲು ಮುಂದಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಂದು ಮುಂಜಾನೆ ಸುಮಾರು 3:30ರ ಹೊತ್ತಿಗೆ ಜೆಸಿಬಿಯನ್ನು ಬಳಸಿ ಮರಳನ್ನು ಎತ್ತುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಹೊಳೆಹಟ್ಟಿ, ಸಿದ್ದರಳ್ಳಿ , ಮತ್ತೂರು ಕಡೆಕಲ್ಲು, ಭಾಗದ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿ ನಾಲ್ಕು ಜೆಸಿಬಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಂದು ಮುಂಜಾನೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿಕೆ ನಾಯ್ಕ್ ನೇತೃತ್ವದಲ್ಲಿ ಭೂ ವಿಜ್ಞಾನಿ ಪ್ರಿಯಾ ಗೌಡರ್ ಮತ್ತು ಸಿಬ್ಬಂದಿಗಳ ಒಳಗೊಡ ತಂಡ ದಾಳಿ ನಡೆಸಿ ಜೆಸಿಬಿಗಳನ್ನು ವಶಪಡಿಸಿಕೊಂಡು ನಂಬರ್ ಪ್ಲೇಟ್ ಗಳು ಇಲ್ಲದ ಜೆಸಿಬಿಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡು ಅಕ್ರಮ ಮರಳು ದಂದೆಯ ಹಿಂದೆ ಯಾರಿದ್ದಾರೆ..? ಎನ್ನುವ ತನಿಖೆ ನಡೆಸುತ್ತಿದ್ದಾರೆ.
ದೇವರ ಹೆಸರಿನಲ್ಲಿ ಲಕ್ಷಾಂತರ ಲೂಟಿ…?!
ಹಲವು ಗ್ರಾಮಗಳಲ್ಲಿ ದೇವಸ್ಥಾನದ ಹೆಸರಿನಲ್ಲಿ ತಾವೇ ಹಣವನ್ನು ನಿಗದಿಪಡಿಸಿ ಲಕ್ಷಾಂತರ ಹಣವನ್ನು ಪಾವತಿಸುವಂತೆ ಅಕ್ರಮ ಮರಳು ದಂಧೆ ಅವರ ಜೊತೆ ಕೈಜೋಡಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ ನಷ್ಟ ಉಂಟು ಮಾಡುತ್ತಿದ್ದು ಇದನ್ನು ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ ಅಂಥವರ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಪಡಿಸಿಕೊಂಡಿರುವ ಜೆಸಿಬಿಗಳ ಮಾಲೀಕರ ವಿರುದ್ಧ ಹಾಗೂ ಈ ಅಕ್ರಮ ಮರಳು ದಂಧೆಯ ಮಾಡುವವರ ವಿರುದ್ಧ ಸಮಗ್ರ ತನಿಖೆ ನಡೆಸಿ ಜಾಮೀನು ಸಿಕ್ಕದ ಹಾಗೆ ಎಫ್ ಐ ಆರ್ ದಾಖಲಿಸಿ ಈ ದಂಧೆಗೆ ಕಡಿವಾಣ ಹಾಕಬೇಕು ಎನ್ನುವುದು ಈ ಶಾಮಿಲ್ ಆಗಿರದ ಗ್ರಾಮಸ್ಥರ ಮನವಿ ಹಾಗೂ ಆಗ್ರಹ.
ರಘುರಾಜ್ ಹೆಚ್.ಕೆ..9449553305..