ತೀರ್ಥಹಳ್ಳಿಗೆ ಸೌಹಾರ್ಧಯುತ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಶುಶ್ರೂಷಣಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷೆ ಡಾ.ವಿಜಯಮ್ಮರವರನ್ನು ಶ್ರೀ ಜೆ ಸಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸತೀಶ ಟಿ ವಿ, ಸಂಘದ ಕಾರ್ಯಾಧ್ಯಕ್ಷರೂ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರೂ ಆದ ಗೀತಾ ಎಲ್, ಖಜಾಂಚಿ ರಾಘವೇಂದ್ರ ಸಿ ಡಿ, ಉಪಾದ್ಯಕ್ಷರುಗಳಾದ ಅನುಸೂಯ, ತಿಲಕಮ್ಮ, ಪದಾಧಿಕಾರಿಗಳಾದ ಪ್ರಮೀಳ, ತನುಜಾ ನಾಯ್ಕ, ಶ್ರೀಲತಾ, ಜೆ ಸಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ರುಗಳಾದ ಜಯಲಕ್ಷ್ಮಿ,, ಶಿವಿಗಂಗಾ,, ಸಾಗರ ತಾಲ್ಲೂಕು ಶುಶ್ರೂಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಜುಬೇದ ಅಲಿ, ಶುಶ್ರೂಷಣಾಧಿಕಾರಿಗಳಾದ ಗಣೇಶ್, ರಾಧಾ, ಸುಚಿತ್ರ, ಪ್ರಭಾವತಿ, ಲತಾ, ಲುಕ್ಮನ್ ಮತ್ತಿತರರು ಇದ್ದ ಸಮಾರಂಭದಲ್ಲಿ ಪ್ರಮೀಳ ಪ್ರಾರ್ಥಿಸಿ, ಗಣೇಶ್ ಸ್ವಾಗತಿಸಿ,ಗೀತಾ ನಿರೂಪಿಸಿ ತನುಜಾ ವಂದಿಸಿದರು.