ನಟ ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಅಮೆರಿಕದಲ್ಲಿ ಹಲವು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿಯಿಂದ ಅವರ ಕುಟುಂಬಸ್ಥರು ಅಭಿಮಾನಿಗಳು ಹಿತೈಷಿಗಳು ಆನಂದಿಸಿದ್ದಾರೆ. ಭಾರತೀಯ ಕಾಲಮಾನ ಮಂಗಳವಾರ (ಡಿಸೆಂಬರ್ 24) ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ .
ಶಿವರಾಜ್ ಕುಮಾರ್ ಹೆಸರಿನಲ್ಲಿ ಹೋಮ ಹವನ ನಡೆಸಿದ ಅಭಿಮಾನಿಗಳು ಹಿತೈಷಿಗಳು..!
ನಟ ಶಿವರಾಜ್ ಕುಮಾರ್ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಅವರ ಅಭಿಮಾನಿಗಳು ಹಿತೈಷಿಗಳು ಹಲವು ಕಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ಹೋಮ ಹವನಗಳನ್ನು ಸಲ್ಲಿಸಿ ಪ್ರಾರ್ಥಿಸಿದ್ದರು ಅದು ಈಗ ಫಲ ಕೊಟ್ಟಿದೆ ಎನ್ನಬಹುದು ನಟ ಶಿವರಾಜ್ ಕುಮಾರ್ ಕೂಡ ಯಾವಾಗಲೂ ಪಾಸಿಟಿವ್ ಥಿಂಕಿಂಗ್ ಇಂದ ಯೋಚಿಸುತ್ತಿದ್ದರು ಏನು ಆಗುವುದಿಲ್ಲ ಎಂದು ಹೋಗುವಾಗ ಹೇಳಿದ್ದರೂ ಕೂಡ ಹಾಗೂ ಇವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಕೂಡ ಜಗತ್ತಿನಲ್ಲೇ ಅತ್ಯುತ್ತಮ ವೈದ್ಯರು.
ಮತ್ತೆ ಚಿತ್ರರಂಗಕ್ಕೆ ಕೆಲವೇ ದಿನಗಳಲ್ಲಿ..!
ಶಸ್ತ್ರ ಚಿಕಿತ್ಸೆ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಒಂದಷ್ಟು ತಿಂಗಳುಗಳ ಕಾಲ ಚೇತರಿಕೆಯ ನಂತರ ಮತ್ತೆ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ.