ಶಿವಮೊಗ್ಗ ನಗರವು ಉನ್ನತ ಶಿಕ್ಷಣಕ್ಕೆ ಎಲ್ಲಾ ರೀತಿಯ ಸೌಲಭ್ಯಗಳು ಹಾಗೂ ಅನುಕೂಲತೆಗಳು ಹೊಂದಿದ್ದು ಎರಡು ವೈಧ್ಯಕೀಯ ಕಾಲೇಜುಗಳಿವೆ, ಇದರಲ್ಲಿ ಖಾಸಗಿ ಹಾಗೂ ಸರಕಾರಿ ಕಾಲೇಜು ಸ್ವಾಮ್ಯದಲ್ಲಿದೆ, ಹೀಗೆಯೇ ಫ್ಯಾರ ಮೆಡಿಕಲ್ ಕಾಲೇಜುಗಳು, ಇಂಜೀನಿಯರಿಂಗ್ ಕಾಲೇಜುಗಳು, ಬಿಎಎಂಎಸ್ ಕಾಲೇಜು ಸೇರಿದಂತೆ ಪದವಿ ಕಾಲೇಜುಗಳಿವೆ, ಸದರಿ ಈ ಕಾಲೇಜುಗಳಿಗೆ ದಾಖಲಾತಿ ಹೊಂದಲು ಅಕ್ಕ-ಪಕ್ಕದ ಜಿಲ್ಲೆಗಳಿಂದ ಅನೇಕ ಮಕ್ಕಳು ವ್ಯಾಸಾಂಗಕ್ಕಾಗಿ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವುದು ಸರಿಯಷ್ಠೆ, ಹಾಗೆಯೇ ಶಿವಮೊಗ್ಗ ಜಿಲ್ಲೆಯನ್ನು ಉನ್ನತ ಶಿಕ್ಷಣವನ್ನು ಬಯಸಿ ಬರುವ ಸಂಖ್ಯೆ ಅಧಿಕವಾಗಿದೆ, ಅಲ್ಲದೆ ಕಾನೂನು ಶಿಕ್ಷಣಕ್ಕಾಗಿ ಅನ್ಯ ಜಿಲ್ಲೆಗಳಿಗೆ ಇಲ್ಲಿನ ಮಕ್ಕಳು ವಲಸೆ ಹೋಗುತ್ತಿರುವುದು ಕಂಡು ಬಂದಿದೆ, ಜೊತೆಗೆ ಕಾನೂನು ಪದವಿ ಪಡೆಯಲು ಬಡ ವಿದ್ಯಾವಂತ ಮಕ್ಕಳಿಗೆ ಆಸಕ್ತಿ ಹೊಂದಿದ್ದರು ಸಹ ಇಲ್ಲಿರುವ ಖಾಸಗಿ ಕಾನೂನು ಕಾಲೇಜಿಗೆ ದಾಖಲಾತಿ ಹೊಂದಲಾಗದೆ ಅನ್ಯ ವಿಷಯಗಳನ್ನು ಅನಿವಾರ್ಯವಾಗಿ ಪಡೆದು ವ್ಯಾಸಾಂಗದಲ್ಲಿ ಮುಂದುವರೆಯುತ್ತಿರುವುದು ಶಿವಮೊಗ್ಗದಲ್ಲಿ ಕಂಡು ಬಂದಿರುವುದರಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳ ಬಡ ಪ್ರತಿಭಾನ್ವಿತ ಮಕ್ಕಳಿಗೆ ಅನುಕೂಲವಾಗುವಂತೆ ಹಾಗೂ ಅವರ ಕಂಡ ಕನಸು ನನಸುಗೊಳಿಸಲು ನಗರದಲ್ಲಿ ಸರಕಾರಿ ಕಾನೂನು ಕಾಲೇಜು ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಗೋನ್ ಸೋಷಿಯಲ್ ಸರ್ವೀಸ್ ಅಸೋಸಿಯೇಷನ್ ನಿಂದ ಮನವಿ ಮಾಡಿದ್ದು.
ಯು ಟಿ ಖಾದರ್ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ಸಂಘಟನೆಯಿಂದ ಮನವಿಯನ್ನು ನೀಡಲಾಯಿತು ಈ ಸಮಯದಲ್ಲಿ ಸಂಘಟನೆಯ ಕರ್ನಾಟಕ ರಾಜ್ಯದ ಸಂರಕ್ಷಕರಾದ.N.M.SIBGATHULLA.ಮತ್ತು ಜಿಲ್ಲಾ ಉಪಾಧ್ಯಕ್ಷಕರು ದೇವರಾಜ್.ಲೀಗಲ್ ಅಡ್ವೊಕೇಟ್ ಆದ ಸುಹಾಸ್ ಹಾಗೂ ಲೋಕೇಶ್ . ಅಸ್ಲಾಂ. ಅಪ್ಪಿ. ನಾಸಿರ್.ಹಾಗೂ ಸಂಘಟನೆಯ ಪದಾಧಿಕಾರಿಗಳು. ಉಪಸ್ಥಿತರಿದ್ದರು