
ಕೃಷಿ ವಿದ್ಯಾರ್ಥಿಗಳಿಂದ ಪನೀರ್ ಹಾಗೂ ಟುಟ್ಟಿ ಫ್ರುಟ್ಟಿ ತಯಾರಿಕೆ..!
ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಪನೀರ್ ಹಾಗೂ ಟುಟ್ಟಿ ಫ್ರುಟ್ಟಿ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪನ್ನೀರ್ ಮತ್ತು ಟುಟ್ಟಿ ಫ್ರುಟ್ಟಿ ಎಂದರೆ ಏನು,ಹೇಗೆ ಮಾಡುವುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು.
ಪನ್ನೀರ್ ಒಂದು ಹಾಲಿನ ಮೌಲ್ಯವರ್ಧನೆಯಾಗಿದೆ ಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು ತದನಂತರ ಹಾಲು ಒಡೆಯುತ್ತದೆ ಅದನ್ನ ಸೋಸಿ ನೀರಿನ ಅಂಶ ಹೋಗುವವರೆಗೂ ಕಾಟನ್ ಬಟ್ಟೆಯಿಂದ ಹಿಂಡಬೇಕು ನಂತರ ಫ್ರೀಜರ್ನಲ್ಲಿ ಶೇಕರಿಸಬೇಕು, ಪನ್ನೀರ್ ಪ್ರೋಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ್ ಗಳಿಂದ ತುಂಬಿದೆ ಹಾಗೂ ಇದರ ಮೌಲ್ಯ ಒಂದು ಕೇಜಿ ಗೆ ಸುಮಾರು 400 ರೂಪಾಯಿಗಳು ಹಾಗೂ 1 ಲೀಟರ್ ಹಾಲಿಗೆ 200 ಗ್ರಾಂ ಪನ್ನೀರ್ ತಯಾರಿಸಬಹುದು ಎಂಬುದನ್ನು ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.

ಟುಟ್ಟಿ ಫ್ರುಟ್ಟಿ ಎಂದರೆ ಪರಂಗಿ ಕಾಯಿಂದ ಮಾಡುವ ಒಂದು ಸಿಹಿ ತಿನಿಸು ಇದನ್ನು ಮಾಡಲು ಪರಂಗಿ ಕಾಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿ ನೀರಲ್ಲಿ ಕಾಯಿಸಿ ತದನಂತರ ಸಕ್ಕರೆಯ ಪಾಕದಲ್ಲಿ ಕುದಿಸಿ ಆರಿಸಬೇಕು ತದನಂತರ ನಮಗೆ ಯಾವ ಬಣ್ಣದಲ್ಲಿ ಬೇಕೋ ಆ ಅಡುಗೆ ಬಣ್ಣವನ್ನು ಹಾಕಬಹುದು ಎಂದು ತೋರಿಸಿಕೊಟ್ಟರು, ಇದು ಅಂಗಡಿಯಲ್ಲಿ 1kg ಗೆ ಸುಮಾರು 90 ರೂಗಳು ಎಂಬುದನ್ನು ಕೂಡ ವಿದ್ಯಾರ್ಥಿಗಳು ಮನವರಿಕೆ ಮಾಡಿ ಕೊಟ್ಟರು.ನೆಲವಾಗಿಲಿನ ಜನರು ಈ ಎರಡು ಪದಾರ್ಥವನ್ನು ಮೆಚ್ಚಿದರು ಹಾಗೂ ಮಹಿಳೆಯರು ಮನೆಯಲ್ಲೇ ಮಾಡಿ ವಾಣಿಜ್ಯೋದ್ಯಮಿ ಯಾಗಬಹುದು. ಇದು ಲಾಭದಾಯಕವಾಗಿದೆ ಮತ್ತು ಸ್ವಚ್ಛತೆಯಿಂದ ಮಾಡುವುದರಿಂದ ಆರೋಗ್ಯಕರವಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.