ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು ಹಿರಿಯ ಮೂರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಹಿರಿಯ ಐಪಿಎಸ್ ಅಧಿಕಾರಿ ಎನ್ ಸತೀಶ್ ಕುಮಾರ್ ಅವರನ್ನು ಹೆಚ್ಚುವರಿ ಆಯುಕ್ತರಾಗಿ ಪೋಲಿಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು. ದಾವಣಗೆರೆಯ ಐಜಿಯಾಗಿದ್ದ ಬಿ ರಮೇಶ್ ಅವರ ಜಾಗಕ್ಕೆ ಖಡಕ್ ಅಧಿಕಾರಿಯಂದೇ ಹೆಸರುವಾಸಿಯಾದ ರವಿಕಾಂತ್ ಗೌಡ ಅವರನ್ನು ವರ್ಗಾವಣೆ ಮಾಡಿದ್ದಾರೆ.
ಬಿ ರಮೇಶ್ ಅವರನ್ನು ಡಿಐಜಿಪಿ & ಜಂಟಿ ಪೊಲೀಸ್ ಆಯುಕ್ತರಾಗಿ ಬೆಂಗಳೂರು ಪೂರ್ವ ವಲಯಕ್ಕೆ ಟ್ರಾನ್ಸ್ ಫರ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.