
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು ತಮ್ಮ ಕೃಷಿ ಗ್ರಾಮೀಣ ಕಾರ್ಯಾನುಭ ಕಾರ್ಯಕ್ರಮದ ಅಂಗವಾಗಿ ಅಣಬೆ ಕೃಷಿ ಕುರಿತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.
ಈ ಭಾಗದಲ್ಲಿ ಎರಡನೇ ಮುಖ್ಯ ಬೆಳೆ ಭತ್ತ, ಭತ್ತ ಕಟಾವು ಅದ ನಂತರ ಮನೆಗೆ ಬೇಕಾದಷ್ಟು ಹುಲ್ಲನ್ನು ಇಟ್ಟುಕೊಂಡು ಮಿಕ್ಕಿದ ಹುಲ್ಲನ್ನು ಮಾರಲಾಗುತ್ತದೆ ಅದರ ಬದಲು ಹುಲ್ಲನ್ನು ಬಳಸಿಕೊಂಡು ಅಣಬೆ ಕೃಷಿಯನ್ನು ಪ್ರಾರಂಭಿಸಬಹುದು ಜೊತೆಗೆ ಒಂದು ಕೋಣೆ ಅಥವಾ ಶೆಡ್ ಇದ್ದರೆ ಸಾಕು ಅಣಬೆ ಕೃಷಿ ಸುಲಭವಾಗಿ ಮಾಡಬಹುದು. ಮೊದಲಿಗೆ ಕೋಣೆ ಅಥವಾ ಶೆಡ್ ಅನ್ನು ಫಾರ್ಮಾಲಿನ್ ನಿಂದ ಸ್ವಚ್ಛ ಮಾಡಿ ಯಾವುದೇ ಸೂಕ್ಷ್ಮಮಾಣು ಜೀವಿಗಳು ಇರದಂತೆ ಮಾಡಬೇಕು ನಂತರ ಭತ್ತದ ಹುಲ್ಲನ್ನು ನೀರಲ್ಲಿ ಕುದಿಸಿ ಬೇಯಿಸಬೇಕು ನಂತರ ನೆರಳಲ್ಲಿ ಒಣಗಿಸಬೇಕು ತದನಂತರ ಪಿಪಿ ಕವರ್ ತೆಗೆದುಕೊಂಡು ಹಸಿಯಾದ ಹುಲ್ಲನ್ನು ಒಂದು ಪದರ ಹಾಕಿ ಅಣಬೆ ಬೀಜ ಹಾಕಬೇಕು ಹಾಗೆ ಕವರ್ ತುಂಬುವರೆಗೆ ಹುಲ್ಲು ಮತ್ತು ಅಣಬೆ ಬೀಜಗಳ ಪದರವಾಗಿ ಹಾಕಬೇಕು ಒಂದು ಕವರಗೆ 100ಗ್ರಾಂ ಅಣಬೆ ಬೀಜ ಹಾಕಿ ತುದಿಗೆ ರಬ್ಬರ್ ಹಾಕಬೇಕು ನಂತರ ಕವರ್ ಅನ್ನು ಸಣ್ಣ ಸಣ್ಣ ರಂದ್ರ ಮಾಡಿ ಗಾಳಿ ಆಡುವಂತೆ ಮಾಡಬೇಕು ಮೊದಲು 20 ದಿನ ಕವರ್ ಗೆ ಬೆಳಕು ಬೀಳದಂತೆ ಕತ್ತಲು ಮಾಡಬೇಕು 21 ನೇ ದಿನಕ್ಕೆ ಬೀಜ ಮೊಳಕೆಯೊಡೆದು ಅಣಬೆ ಹೊರಬರುತ್ತದೆ ಎರಡರಿಂದ ಮೂರು ಕೊಯ್ಲು ತೆಗಿಯಬೇಕು ಒಂದು ಕವರ್ ಗೆ ಸುಮಾರು ಒಂದುವರೆ ಕೆಜಿ ಅಣಬೆ ಬರುತ್ತದೆ ಒಂದು ಕೆಜಿಗೆ 250 ರೂಪಾಯಿಯಂತೆ ಮಾರಾಟವಾಗುತ್ತದೆ.ಅಣಬೆ ತಿನ್ನುವುದರಿಂದ ಕೊಬ್ಬಿನಂಶ ಹಾಗೂ ಸಕ್ಕರೆ ಪ್ರಮಾಣ ನಿಯತ್ರಣದಲ್ಲಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಸುತ್ತದೆ.