
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ “ವಿವಿಧ ಬಗೆಯ ಹಾಲು ಕರೆಯುವ ವಿಧಾನಗಳು” ಎಂಬ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.ಈ ಕಾರ್ಯಕ್ರಮದಲ್ಲಿ ಹಾಲು ಕರೆಯುವ ವಿಧಾನಗಳು ಮತ್ತು ಅದರ ಉಪಯೋಗಗಳು ಹಾಗೂ ಹಾಲು ಕರೆಯುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಎರಡು ಮುಖ್ಯ ಕೈ ಹಾಲುಕರೆಯುವ ವಿಧಾನಗಳು:-
“ಸ್ಟ್ರಿಪ್ಪಿಂಗ್ “ಮತ್ತು “ಪೂರ್ಣ ಕೈ ವಿಧಾನ”.ಸ್ಟ್ರಿಪ್ಪಿಂಗ್: ಹೆಬ್ಬೆರಳು ಮತ್ತು ತೋರುಬೆರಳಿನಿಂದ ಮೇಲಿನಿಂದ ಕೆಳಕ್ಕೆ ಮೊಲೆ ಅನ್ನು ಹಿಸುಕುವುದು.
ಪೂರ್ಣ ಕೈ: ಮೊಲೆ ಅನ್ನು ಎಲ್ಲಾ ಐದು ಬೆರಳುಗಳಿಂದ ಹಿಡಿದು ಅಂಗೈಗೆ ಒತ್ತಲಾಗುತ್ತದೆ.ಸ್ಟ್ರಿಪ್ಪಿಂಗ್:-1. ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಮೊಲೆಯನ್ನು ಹಿಡಿದುಕೊಳ್ಳಿ.
2. ಮೊಲೆಯ ಮೇಲ್ಭಾಗದಿಂದ ಪ್ರಾರಂಭಿಸಿ, ಅದನ್ನು ಕೆಳಕ್ಕೆ ಹಿಸುಕಬೇಕು.3. ಹೀಗೆ ಎಲ್ಲ ಮೊಲೆ ಇಂದ ಮಾಡಿ ಹಾಲು ಕರೆಯಬೇಕು.
ಪೂರ್ಣ ಕೈ:-1. ಎಲ್ಲಾ ಐದು ಬೆರಳುಗಳಿಂದ ಮೊಲೆಯನ್ನು ಹಿಡಿದುಕೊಳ್ಳಿ.2. ನಿಮ್ಮ ಅಂಗೈ ವಿರುದ್ಧ ಮೊಲೆಯನ್ನು ಒತ್ತಿರಿ.