ಶಿವಮೊಗ್ಗ: ರಾಜ್ಯದ್ಯಂತ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂ ಗಳಲ್ಲಿ ದರೋಡೆ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಈಗಲೂ ಕೂಡ ಹಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ.
ನಿನ್ನೆ ತಡರಾತ್ರಿ ಸುಮಾರು ಹತ್ತರಿಂದ ಹನ್ನೊಂದು ಗಂಟೆ ಸುಮಾರಿಗೆ ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ಗೆ ಒಬ್ಬ ವ್ಯಕ್ತಿ ಬಂದು ಕಳ್ಳತನ ಮಾಡಲು ಪ್ರಯತ್ನ ಮಾಡಿ ಎಟಿಎಂ ನ ಸೈರನ್ ಹೊಡೆದುಕೊಂಡ ನಂತರ ಆತ ಓಡಿ ಹೋಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಪೊಲೀಸ್ ಇಲಾಖೆ ಕೂಡ ಆತನನ್ನು ತೀವ್ರ ಹುಡುಕಾಟ ನಡೆಸಿ ಕೊನೆಗೂ ಬಂಧಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಅಸಲಿಗೆ ನಡೆದಿದ್ದೇನು..?!
ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾರ್ಯನಿರ್ವಹಿಸಲು ಬಂದ ಬಿಹಾರ ಮೂಲದ ವ್ಯಕ್ತಿ ರಾತ್ರಿ ಕುಡಿದ ಅಮಲಿನಲ್ಲಿ ಹಣ ಬಿಡಿಸಲು ಎಟಿಎಂಗೆ ತೆರಳಿದ್ದಾನೆ ಆಗ ಹಣ ಬರದೇ ಇದ್ದಾಗ ಎಟಿಎಂ ನನ್ನು ಓಪನ್ ಮಾಡಲು ಪ್ರಯತ್ನಿಸಿದ್ದಾನೆ ಆ ಪ್ರಯತ್ನದಲ್ಲಿದ್ದಾಗ ಎಟಿಎಂನ ಸೈರನ್ ಹೊಡೆದುಕೊಂಡಿದೆ ಆಗ ಆತ ಅಲ್ಲಿಂದ ಹೊರಟು ಹೋಗಿದ್ದಾನೆ.
ಈತನ ಬೆನ್ನು ಹತ್ತಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ.
ಈತ ನಿಜವಾಗಲೂ ಹಣ ಬಿಡಿಸಲು ಹೋಗಿ ಕುಡಿದ ಮತ್ತಿನಲ್ಲಿ ಬ್ಯಾಂಕ್ ನ ಎಟಿಎಂ ಕೀಳಲು ಪ್ರಯತ್ನ ನಡೆಸಿದನಾ..?! ಅಥವಾ ಇದು ಮೊದಲ ಪ್ರಯತ್ನ ಮಾಡಿ ಮುಂದೆ ದೊಡ್ಡ ಯತ್ನಕ್ಕೆ ಕೈಹಾಕಲು ಪ್ರಯತ್ನಪಟ್ಟಿರಬಹುದಾ..?! ಬಿಹಾರ ಮೂಲದ ವ್ಯಕ್ತಿಯಾಗಿರುವುದರಿಂದ ಅನುಮಾನಗಳು ಹೆಚ್ಚಾಗಿವೆ ಪೊಲೀಸರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ…
ರಘುರಾಜ್ ಹೆಚ್.ಕೆ..
944
9553305…