ಶಿವಮೊಗ್ಗ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಮಿತಿ ರಚನೆ ಮಾಡಲಾಗಿದೆ ಪುಸ್ತಕ, ಶೂ, ಗಳನ್ನು ಕೊಡುವುದುವಿಳಂಬವಾಗುತ್ತಿತ್ತು ನಾನು ಬಂದ ನಂತರ ತಕ್ಷಣವೇ ಕೊಡಲಾಗುತ್ತಿದೆ.
ಮಕ್ಕಳಿಗೆ ಇರುವ ಆಹಾರ ಕೊರತೆಯನ್ನು ರಾಗಿ ಮಾಲ್ ಮೊಟ್ಟೆಗಳನ್ನು ಕೊಡುವುದರ ಮೂಲಕ ನಿಗಿಸಲಾಗುತ್ತಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ 10 ಕೋಟಿ ಅನುದಾನ ಇಡಬೇಕಾಗಿತ್ತು ವಿಮಾನ ನಿಲ್ದಾಣಕ್ಕೆ 630 ಕೋಟಿ ಖರ್ಚು ಮಾಡಲಾಗಿದೆ 10 ಕೋಟಿ ಇಡಲಿಕ್ಕೆ ಆಗಲಿಲ್ಲವಾ? ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ ಮತ್ತು ವಿಮಾನ ನಿಲ್ದಾಣ ಕಾಮಗಾರಿ ಕುರಿತ ಅಕ್ಷೇಪಣೆಗಳ ಬಗ್ಗೆ ಸಿಎಂ ಜೊತೆಗೆ ಮಾತನಾಡುತ್ತೇನೆ ವಿ ಐ ಎಸ್ ಎಲ್ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಮಾತನಾಡಿದ ಸಚಿವರು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಶಿವಮೊಗ್ಗ ಜಿಲ್ಲೆಯ ಬಂದಾಗ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮಾತನಾಡಿದರು ಆದರೆ ತೆಲಂಗಾಣದ ಕಾರ್ಖಾನೆಗಳಿಗೆ ಅನುದಾನ ನೀಡಿದ್ದಾರೆ.
ಕುವೆಂಪು ವಿವಿ ಮುಚ್ಚುವ ಹುನ್ನಾರ ಎಂದು ವಿಧಾನ ಪರಿಷತ್ ಶಾಸಕ ಡಿಎಸ್ ಅರುಣ್ ಹೇಳಿಕೆ ವಿಚಾರ ಗಮನಕ್ಕೆ ಬಂದಿದೆ ಆದರೆ ಕುವೆಂಪು ವಿವಿಯ ಇಂದಿನ ಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣ ಬಂಗಾರಪ್ಪನವರು ಕುವೆಂಪು ಪ್ರಾರಂಭಿಸಿದಾಗ ಭರ್ತಿ ಮಾಡಿದ ಹುದ್ದೆಗಳನ್ನು ನಂತರ ತುಂಬಿಸಿಲ್ಲ ರಾಜ್ಯಪಾಲರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾಗ ನಾನು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದೆ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರ್ ಕೊಡುವ ಹಿನ್ನೆಲೆಯಲ್ಲಿ ನಾನು ಬಂದಿದ್ದೆ ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ವಿಧಾನಸೌಧ ಎದುರು ಗಾಂಧಿ ಪುತ್ತಳಿ ನಿರ್ಮಾಣ ಮಾಡಲಾಗಿದೆ.ಡಿಸ್ ಅರುಣ್ ಅವರ ತಂದೆ ಸ್ಪೀಕರ್ ಆಗಿದ್ದ ಡಿ ಎಚ್ ಶಂಕರಮೂರ್ತಿ ಅಧಿಕಾರ ಅವಧಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಎಂಟು ಕೋಟಿ ಖರ್ಚು ಮಾಡಿದರೆ ನಮ್ಮ ಅವಧಿಯಲ್ಲಿ 4.5 ಕೋಟಿ ಖರ್ಚಾಗಿದೆ ಪ್ರತಿಮೆ ನಿರ್ಮಾಣದ ಪ್ರಕರಣ ದೆಹಲಿಯವರೆಗೂ ತಲುಪಿತ್ತು ಎಂಬುದು ಅರುಣ್ ಗೆ ಗೊತ್ತಿರಲಿ ಎಂದರು.
ಯತ್ನಾಳ್ ಹೇಳಿಕೆ ನೋಡಿದರೆ ಬಿಜೆಪಿಯವರನ್ನು ಹರಾಜು ಹಾಕಿದ್ದಾರೆ ನಿಮ್ಮ ಪಾರ್ಟಿಯಲ್ಲಿ ದಿನ ಬೆಳಗ್ಗೆ ಎದ್ದರೆ ಹೊಲಸು ಬೇಕಾಬಿಟ್ಟಿ ಬೈದಾಡಿಕೊಳ್ಳುತ್ತಿದ್ದಾರೆ.
ಶಾಸಕ ಚನ್ನಬಸಪ್ಪ ತಮ್ಮ ವಿರುದ್ಧ ಸ್ಪೀಕರ್ ಗೆ ಹಕ್ಕು ಚ್ಯುತಿ ಮಂಡಿಸಿರುವ ವಿಚಾರ ಹಾಗೂ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಹೇಳಿಕೆ ವಿಚಾರ ಹಕ್ಕು ಚ್ಯುತಿ ಮಂಡಿಸಿದರೆ ಮಂಡಿಸಲಿ ಸ್ಪೀಕರ್ ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ.ಅಧಿಕಾರದ ಪಿತ್ತ ನೆತ್ತಿಗಿರುವುದು ನಿಮಗೆ ಕಂಡಿದ್ದೀಯಾ? ಯಾರಿಗೆ ದುರಂಕಾರ ಎಂದು ಜನರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಶಾಸಕ ಚನ್ನಬಸಪ್ಪ ಫೆಬ್ರವರಿ ನಾಲ್ಕರಂದು ಆಶ್ರಯ ಮನೆಗಳ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವ ವಿಚಾರ ಶಾಸಕ ಚನ್ನಬಸಪ್ಪನವರಿಗೆ ಆ ಅಧಿಕಾರ ಇಲ್ಲ ಡಿಸಿ ಅವರು ದಿನಾಂಕ ನಿಗದಿಗೊಳಿಸುತ್ತಾರೆ ಎಂದರು.