ಶಿವಮೊಗ್ಗ : ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು ಪತ್ರಿಕೆ ಯಾವ ಯಾವ ಪ್ರದೇಶದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ವಿವರವಾಗಿ ಸುದ್ದಿ ಪ್ರಕಟಿಸಿದ್ದು.
ಸುದ್ದಿ ಬೆನ್ನಲ್ಲೇ ಇಂದು ಮುಂಜಾನೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಜ್ಯೋತಿ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಸಿದ್ಲಿಪುರ ಮರಳು ಅಡ್ಡೆಯ ಮೇಲೆ ದಾಳಿ ನಡೆದಿದ್ದು .
ಈ ದಾಳಿಯಲ್ಲಿ ಒಂದು ಜೆಸಿಬಿ ಎರಡು ಟಿಪ್ಪರ್ ಹಾಗೂ ಎರಡು ಟ್ರಾಕ್ಟರ್ ವಶಪಡಿಸಿಕೊಂಡ ಗಣಿ ಇಲಾಖೆ ಸಿಬ್ಬಂದಿಗಳು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ವಶಪಡಿಸಿಕೊಂಡ ಜೆಸಿಬಿ ಟಿಪ್ಪರ್ ಟ್ರ್ಯಾಕ್ಟರ್ ಗಳನ್ನು ಹಸ್ತಾಂತರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಿರಂತರವಾಗಿ ಈ ದಂಧೆ ನಡೆಯುತ್ತಿದ್ದು ಗಣಿ ಇಲಾಖೆ ಪೊಲೀಸ್ ಇಲಾಖೆ ಆ ಅಡ್ಡೆಗಳ ಮೇಲು ದಾಳಿ ನಡೆಸಿ ಅಕ್ರಮ ಮರಳು ದಂಧೆ ಗೆ ಬ್ರೇಕ್ ಹಾಕಬೇಕು.
ರಘುರಾಜ್ ಹೆಚ್.ಕೆ..9449553305…