ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಯ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಳೆದ ಎರಡು ದಿನದ ಹಿಂದೆ ತಡರಾತ್ರಿ ಕಾರ್ಯಚರಣೆ ನಡೆಸಿದ್ದು. ಈ ಕಾರ್ಯಾಚರಣೆ ವೇಳೆ ಭದ್ರಾವತಿ ಶಾಸಕರ ಮಗ ಬಸವೇಶ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು.
ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೀಡಿದ ದೂರಿನಲ್ಲಿ ಬಸವೇಶ್ ಹೆಸರು ಬಿಟ್ಟು ಆರರಿಂದ ಏಳು ಜನರ ಹೆಸರು ಸೇರ್ಪಡೆಯಾಗಿತ್ತು. ಅದರಲ್ಲಿ ಪೊಲೀಸರು ಕಾರ್ಯಾಚರಣೆಯಲ್ಲಿ ಮೂರು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧನವಾದವರ ವಿವರ ಈ ಕೆಳಗಿನಂತೆ…
1) ರವಿ ಬಿನ್ ಮಲ್ಲೇಶಪ್ಪ, 30 ವರ್ಷ, ಮಾವಿನಕಟ್ಟೆ, ಚನ್ನಗಿರಿ, ದಾವಣಗೆರೆ, 2) ವರುಣ್ ಬಿನ್ ರಾಜಶೇಖರ್, 34 ವರ್ಷ, ಅರಕಲ ಗೂಡು, ಹಾಸನ ಮತ್ತು 3) ಅಜಯ್ ಬಿನ್ ತಿಪ್ಪೇಶ್, 28 ವರ್ಷ, ಸುರೇಂದ್ರ ಗೌಡ ಕ್ಯಾಂಪ್, ಭದ್ರಾವತಿ, ಇವರುಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ…
ಈಗ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಕಾದು ನೋಡಬೇಕಾಗಿದೆ…