ಶಿವಮೊಗ್ಗ: ನಗರದ ಸೀಗೆ ಹಟ್ಟಿಯ ಅಡುಗೆ ಕಂಟ್ರಾಕ್ಟರ್ ಚಂದ್ರಶೇಖರ್ ಮಗ 21 ವರ್ಷದ ಉಲ್ಲಾಸ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಕಾರು ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಉಲ್ಲಾಸ್ ಮೃತಪಟ್ಟಿದ್ದಾನೆ.
ಸ್ನೇಹಿತೆಯ ಜೊತೆಯಲ್ಲಿ ಜೈಲ್ ರಸ್ತೆಯ ಕಡೆಯಿಂದ ಶರಾವತಿಯ ನಗರ ಕಡೆ ಹೋಗುವಾಗ ಹೊಸಮನೆ ಏರಿಯಾದ ಚಾನೆಲ್ ಏರಿಯಾದ ನಾಗಪ್ಪ ದೇವಸ್ಥಾನದ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈತನ ಜೊತೆಯಲ್ಲಿದ್ದ ಸ್ನೇಹಿತೆಗೂ ಗಂಭೀರ ಗಾಯಗಳಾಗಿದ್ದು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.