Wednesday, April 30, 2025
Google search engine
Homeಶಿವಮೊಗ್ಗಶಿವಮೊಗ್ಗ : ಏನಿದು ಈದ್ಗಾ ವಿವಾದ ..?! ಅಸಲಿಗೆ ಈ ಜಾಗ ಯಾರಿಗೆ ಸೇರಿದ್ದು‌...?! ಕಂಪ್ಲೀಟ್...

ಶಿವಮೊಗ್ಗ : ಏನಿದು ಈದ್ಗಾ ವಿವಾದ ..?! ಅಸಲಿಗೆ ಈ ಜಾಗ ಯಾರಿಗೆ ಸೇರಿದ್ದು‌…?! ಕಂಪ್ಲೀಟ್ ಡೀಟೇಲ್ಸ್ ..‌..!!

ಶಿವಮೊಗ್ಗ : ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಇರುವ ದರ್ಗಾ ಕಾಂಪ್ಲೆಕ್ಸ್ ಪಕ್ಕ ಇರುವ ಖಾಲಿ ಜಾಗ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ಏನಿದು ವಿವಾದ :

ಮಾಹಿತಿಯ ಪ್ರಕಾರ ಹಿಂದೆ ಅಮೀರ್ ಅಹ್ಮದ್ ಎನ್ನುವವರ ಹೆಸರಿಗೆ ಶಿವಮೊಗ್ಗದ ಹಲವು ಜಾಗಗಳು ಇದ್ದು ನಂತರ ಅವರು ಮುಸ್ಲಿಂಮರು ತಮ್ಮ ಪವಿತ್ರ ಪ್ರಾರ್ಥನೆಗಾಗಿ ಬಳಸಿಕೊಳ್ಳಲು ಹಲವು ಜಾಗಗಳನ್ನು ನೀಡಿದ್ದರು ಜೊತೆಗೆ ಹಲವು ಸಾರ್ವಜನಿಕರಿಗೂ ಓಡಾಡಲು ಅನುಕೂಲವಾಗುವ ರಸ್ತೆಗಳ ಜಾಗಗಳನ್ನು ಕೂಡ ನೀಡಿದ್ದರು . ಅದರಲ್ಲಿ ದರ್ಗಾ ಕಾಂಪ್ಲೆಕ್ಸ್ ಹಾಗೂ ವಿವಾದದ ಕೇಂದ್ರಬಿಂದುವಾಗಿರುವ ಈದ್ಗಾ ಜಾಗವು ಒಂದು ಈ ಜಾಗ ಹಿಂದೆ ಗೆಜೆಟ್ ನೋಟಿಫಿಕೇಶನ್ ನಲ್ಲಿ ಅನುಮೋದನೆಗೊಂಡಿದೆ ನಂತರ ಪಾಲಿಕೆಯಲ್ಲಿ ಖಾತೆ ಏರಿದೆ ನಾವು ನಿರಂತರವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿದ್ದೇವೆ ಪ್ರಸ್ತುತ ಈ ಜಾಗ ಜಾಮಿಯಾ ಮಸೀದಿಯ ನಿಯಂತ್ರಣದಲ್ಲಿದ್ದು ಇದಕ್ಕೋಸ್ಕರವೇ ಒಂದು ಕಮಿಟಿ ರಚಿಸಲಾಗಿದೆ ಆ ಕಮಿಟಿಯ ತೀರ್ಮಾನದಂತೆ ಈ ಜಾಗದಲ್ಲಿ ಬೇಲಿ ಹಾಕಲಾಗಿದೆ ಎನ್ನುತ್ತಾರೆ.

ಆದರೆ ಈ ಜಾಗ ಸೇರಿ ದರ್ಗಾ ಕಾಂಪ್ಲೆಕ್ಸ್ ಜಾಗ ಕೂಡ ನ್ಯಾಯಾಲಯದ ಅಂಗಳದಲ್ಲಿದೆ ಎನ್ನುತ್ತಾರೆ ಹಿಂದೂ ಸಂಘಟನೆ ಅವರು…

ಹಿಂದೆ ನಡೆದಿತ್ತು ವಶಪಡಿಸಿಕೊಳ್ಳುವ ಪ್ರಯತ್ನ..!

2018-19ರಲ್ಲಿ ಈ ಜಾಗವನ್ನು ವಶಪಡಿಸಿಕೊಂಡು ಅದಕ್ಕೆ ಬೇಲಿ ಹಾಕಿ ತಮ್ಮ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿತ್ತು ಆಗ ಪೊಲೀಸರ ಮಧ್ಯಪ್ರವೇಶದಿಂದ ಇದು ತಣ್ಣಗಾಗಿತ್ತು.

ಎರಡು ವರ್ಷಗಳ ಹಿಂದೆ ಪುರಾತನ ಪ್ರಸಿದ್ಧ ಬಾಲಾಜಿ ಹೋಟೆಲ್ ತೆರುವಿಗೆ ಪ್ರಯತ್ನ..!

ಎರಡು ವರ್ಷಗಳ ಹಿಂದೆ 2023ರಲ್ಲಿ ಪುರಾತನ ಪ್ರಸಿದ್ಧ ಹೋಟೆಲ್ ಬಾಲಾಜಿ ಹೋಟೆಲ್ ಕೂಡ ಈ ವಿವಾದಿತ ಪ್ರದೇಶದಲ್ಲಿದ್ದು ಅದರ ತೆರವಿಗೂ ಕೂಡ ಪ್ರಯತ್ನ ನಡೆದಿತ್ತು ಆಗ ಹೋಟೆಲ್ ನವರು ಈ ಜಾಗದ ಮೇಲೆ ಸ್ಟೇ ತಂದಿದ್ದರು ಪ್ರಸ್ತುತ ಬಾಲಾಜಿ ಹೋಟೆಲ್ ಕೇಸ್ ನ್ಯಾಯಾಲಯದಲ್ಲಿದೆ.ಈ ವಿವಾದ ಕೂಡ ಅಲ್ಲಿಗೆ ತಣ್ಣಗಾಗಿತ್ತು.

ಏಕೆ ಜಾಮಿಯಾ ಮಸೀದಿಯಿಂದ ಬೇಲಿ ಹಾಕುವ ಪ್ರಯತ್ನ..?!

ಮೂಲಗಳ ಪ್ರಕಾರ ಈ ಜಾಗದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಾರೆ ಇದೊಂದು ಪವಿತ್ರ ಸ್ಥಳ ಈ ಸ್ಥಳದಲ್ಲಿ ರಾತ್ರಿ ಹೊತ್ತು ಕೆಲವರು ಕುಡಿದು ಮಲ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಾರೆ ಹಾಗಾಗಿ ಈ ಪವಿತ್ರ ಸ್ಥಳ ಅಪವಿತ್ರವಾಗುತ್ತದೆ ಇದನ್ನು ನಾವು ರಕ್ಷಣೆ ಮಾಡಬೇಕು ಹಾಗಾಗಿ ಅಲ್ಲಿ ಬೇಲಿ ಹಾಕಿ ಆ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅದಕ್ಕೋಸ್ಕರ ಈ ಪ್ರಯತ್ನ ಎನ್ನುತ್ತಾರೆ…

ಹಿಂದೂಪರ ಸಂಘಟನೆಗಳ ವಾದವೇನು..?!

ಹಿಂದೂಪರ ಸಂಘಟನೆಗಳ ಪ್ರಕಾರ ಇದು ಮುಸ್ಲಿಂಮರ ಆಸ್ತಿಯಲ್ಲ ಇದು ಸಾರ್ವಜನಿಕರ ಆಸ್ತಿ ಗೆಜೆಟ್ ನೋಟಿಫಿಕೇಶನ್ ನಲ್ಲಿ ಇದು ಕ್ಲಿಯರ್ ಆಗಿ ಇಲ್ಲ ಇವರು ಅನಧಿಕೃತವಾಗಿ ಖಾತೆ ಮಾಡಿಕೊಂಡಿದ್ದಾರೆ ಇದನ್ನು ತೆರವುಗೊಳಿಸಬೇಕು ಇದು ಸಾರ್ವಜನಿಕರ ಆಸ್ತಿ ಪ್ರಸ್ತುತ ನ್ಯಾಯಾಲಯದಲ್ಲಿದೆ ಅವರಲ್ಲಿ ಯಾವುದೇ ಅಧಿಕೃತ ಆಧಾರ ಇಲ್ಲ ಆದರೂ ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದು ನಿಲ್ಲಬೇಕು ಮುಂದುವರಿಯಬಾರದು ಹಬ್ಬಗಳನ್ನು ಆಚರಿಸಲು ನಮ್ಮದೇನು ತಕರಾರಿಲ್ಲ ಆದರೆ ಈ ವರ್ತನೆ ಸರಿಯಲ್ಲ ಎನ್ನುತ್ತಾರೆ.

ಇಂದು ಜಿಲ್ಲಾಧಿಕಾರಿಗಳ ಭೇಟಿ ಮಹತ್ವದ ಚರ್ಚೆ :

ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ಮುಖಂಡರು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿ ಈ ಜಾಗದಲ್ಲಿ ಅಭಿವೃದ್ಧಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ನಂತರ ಪತ್ರಿಕಾಗೋಷ್ಠಿ :

ಜಿಲ್ಲಾಧಿಕಾರಿಗಳ ಭೇಟಿಯ ನಂತರ ಪತ್ರಿಕಾಗೋಷ್ಠಿ ನಡೆಸುವ ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ಮುಖಂಡರಿಂದ ಹಲವು ವಿಚಾರಗಳು ಹೊರಬರುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ತಣ್ಣಗಿದ್ದ ಶಿವಮೊಗ್ಗಕ್ಕೆ ಹೊಸದೊಂದು ವಿವಾದ ಹುಟ್ಟಿಕೊಂಡಿದ್ದು ಅದು ಸೌಹಾರ್ದಯುತವಾಗಿ ಬಗೆಹರಿದರೆ ಒಳ್ಳೆಯದು ಶಿವಮೊಗ್ಗಕ್ಕೆ ವಿವಾದಗಳು ಹೊಸದೇನಲ್ಲ ಆದರೆ ಅದು ಜನಸಾಮಾನ್ಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಬಾರದು ಯಾರದು ಸ್ವ ಪ್ರತಿಷ್ಠೆಗಾಗಿ ಇನ್ಯಾರದೋ ಬಲಿಯಾಗಬಾರದು ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಈ ಸಮಸ್ಯೆ ಒಳ್ಳೆಯ ರೀತಿಯಲ್ಲಿ ಬಗೆಹರಿಯಲಿ ಎನ್ನುವುದು ಶಿವಮೊಗ್ಗ ನಾಗರೀಕರ ಮನವಿ…

ರಘುರಾಜ್ ಹೆಚ್.ಕೆ…9449553305….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...