Home ಶಿವಮೊಗ್ಗಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಆರೋಪಿಗಳ ಬಂಧನ..!

ಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಆರೋಪಿಗಳ ಬಂಧನ..!

by EDITOR NEWS WARRIORS
0 comments

ಕಳೆದ ತಿಂಗಳು ದಿನಾಂಕ:25-03-2025 ರಂದು ಕಾರ್ತಿಕ್ ಎನ್ನುವ 22 ವರ್ಷ ವಯಸ್ಸಿನ ಆರ್.ಎಂ.ಎಲ್ ನಗರದ ನಿವಾಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮಿನಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಬೆಳಗಿನ ಜಾವ ಸುಮಾರು 06:35 ಗಂಟೆ ಸಮಯದಲ್ಲಿ 4 ಜನ ಅಪರಿಚಿತರು 2 ಮೋಟಾರು ಬೈಕುಗಳಲ್ಲಿ ಕಾರನ್ನು ಆಡ್ಡ ಹಾಕಿ ತಡೆದು 3,50,000/- ರೂ ಬೆಲೆ ಬಾಳುವ ಸುಮಾರು 900 ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.

ಈ ಪ್ರಕರಣ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0060/2025 ಕಲಂ 309 (6) ಬಿ.ಎನ್.ಎಸ್ ಕಾಯ್ದೆ ರೀತ್ಯಾ ದಾಖಲಾಗಿರುತ್ತದೆ. .

ಪ್ರಕರಣದಲ್ಲಿ ಮಾಲು ಹಾಗೂ ಆರೋಪಿತರ ಪತ್ತೆ ಬಗ್ಗೆ, ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ. ಕೆ. ಅನಿಲ್ ಕುಮಾರ್ ಭುಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ ಎ. ಜಿ. ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ನಾಗರಾಜ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಜಗದೀಶ್ ಹಂಚಿನಾಳ್, ಪಿ ಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, *ಶ್ರೀಶೈಲಕೆಂಚಣ್ಣವರ, ಪಿಎಸ್ಐ ಮತ್ತು ಎ.ಎಸ್.ಐ. ಚಂದ್ರಶೇಖರ್, ದಿವಾಕರ್ ರಾವ್ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಮಂಜುನಾಥ, ಸಿ.ಪಿ.ಸಿ ಈರಯ್ಯ, ರೇವಣ ಸಿದ್ದಪ್ಪ, ವಿಜಯ್ ಕುಮಾರ್ ಹಾಗೂ ಸಂತೋಷ ಕುಮಾರ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಕವಿರಾಜ, 21 ವರ್ಷ, ಭೋವಿ ಕಾಲೋನಿ ಹೊಸಮನೆ ಭದ್ರಾವತಿ , 2) ಮುಬಾರಕ್, 24 ವರ್ಷ, ಮೇಲಿನ ತುಂಗಾನಗರ ಶಿವಮೊಗ್ಗ, 3) ಅಜಿತ್ @ ಘಟ್ಟ, 19 ವರ್ಷ ಬಾರಂದೂರು, ಭದ್ರಾವತಿ 4) ಮಂಜುನಾಥ @ ಮಂಜು, 21 ವರ್ಷ, ಕಬಳಿಕಟ್ಟೆ ಗ್ರಾಮ, ಭದ್ರಾವತಿ, ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಅಂದಾಜು ಮೌಲ್ಯ 3,50,000/- ರೂಗಳ ಕಳ್ಳತನ ಮಾಡಿದ 700 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 3,00,000/- ರೂಗಳ TATA ACE ವಾಹನ ಮತ್ತು ಅಂದಾಜು ಮೌಲ್ಯ 85,000/- ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು ಮೌಲ್ಯ, 7,35,000 ರೂ ಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...