ಶಿವಮೊಗ್ಗ : ನಗರದ ಸವಳಂಗ ರಸ್ತೆಯ ನವಿಲೆ ಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ 6 ದಿನಗಳ ವರೆಗೆ 25 ವರ್ಷದ ವಯೋಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಗಳು ಪ್ರಾರಂಭವಾಗಲಿದ್ದು.
ಇದೆ ಪ್ರಥಮ ಬಾರಿಗೆ ಅಂತರ-ವಲಯ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೊರತುಪಡಿಸಿ) 25 ವರ್ಷ ವಯೋಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ.
ಇಂದಿನಿಂದ ಏಪ್ರಿಲ್ 2025 ರಿಂದ ಪ್ರಾರಂಭವಾಗುವ ಈ ಪಂದ್ಯಗಳು ನವಿಲೆ ಕೆ.ಎಸ್.ಸಿ.ಎ. ಎರಡು ಅಂಕಣಗಳಲ್ಲಿ ಹಾಗೂ ಜೆ.ಎನ್.ಎನ್.ಸಿ.ಇ. ಕಾಲೇಜಿನ ಒಂದು ಅಂಕಣದಲ್ಲಿ ನಡೆಯುತ್ತದೆ.
ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು ಪ್ರತಿ ಪಂದ್ಯವು 35 ಓವರ್ ಗಳದ್ದಾಗಿರುತ್ತದೆ. ಒಟ್ಟಾರೆ 15 ಪಂದ್ಯಗಳು ನಡೆಯಲಿದ್ದು ಪ್ರತಿ ಎರಡು ದಿನ ಪಂದ್ಯಗಳ ನಂತರ ಒಂದು ದಿನ ವಿರಾಮ ಇರುತ್ತದೆ. ಪ್ರತಿದಿನ ಬೆಳಿಗ್ಗೆ 9:30 ಗಂಟೆಗೆ ಪಂದ್ಯಗಳು ಪ್ರಾರಂಭವಾಗುತ್ತದೆ.