
ಎಸಿ ಸತ್ಯನಾರಾಯಣ, ತಹಸೀಲ್ದಾರ್ ,ಪೋಲಿಸ್ ಇಲಾಖೆ ಭೂ ವಿಜ್ಞಾನ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ದಂಧೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ಆದರೂ ಕೂಡ ಹಾಡೋನಹಳ್ಳಿ ಮತ್ತು ಮಂಗೋಟಿ ಭಾಗದಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಿರಂತರವಾಗಿ ಯಾರ ಭಯವಿಲ್ಲದೆ ನಡೆಯುತ್ತಿದೆ ಇದಕ್ಕೆ ಕಾರಣ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ವಾಹನಗಳನ್ನು ಸೀಜ್ ಮಾಡದೇ ಹಾಗೆ ಬಿಡುವುದು ಅದರ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇರುವುದು ಇವರಿಗೆ ಭಯವಿಲ್ಲದಾಗಿದೆ…. ಎನ್ನುತ್ತಾರೆ ಸ್ಥಳೀಯರು…
ಇಂದು ಮುಂಜಾನೆ ಎಸಿ ನೇತೃತ್ವದಲ್ಲಿ ಭರ್ಜರಿ ದಾಳಿ..!
ಇಂದು ಮುಂಜಾನೆ ಸುಮಾರು ನಾಲ್ಕು ಮೂವತ್ತರ ಹೊತ್ತಿಗೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ಹಾಡೋನಹಳ್ಳಿ ಅಕ್ರಮ ಮರಳು ದಂಧೆಯ ಮೇಲೆ ಭರ್ಜರಿ ದಾಳಿ ನಡೆಸಿದ್ದು ದಾಳಿಯ ವೇಳೆ ಸುಮಾರು 10 ಜೆಸಿಬಿ, ಐದು ಟ್ರಾಕ್ಟರ್, ಒಳಗೊಂಡಂತೆ ಇನ್ನಷ್ಟು ವಾಹನಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಸಿಕ್ಕಿರುವ ವಾಹನಗಳ ಮೇಲೆ ಹಾಗೂ ಮರಳುದಂಧೆಯ ಮೇಲೆ ಕೇಸ್ ದಾಖಲಾಗುತ್ತಾ..?!
ಸಿಕ್ಕಿರುವ ಜೆಸಿಬಿ ಟ್ರ್ಯಾಕ್ಟರ್ ಹಾಗೂ ಇನ್ನಷ್ಟು ವಾಹನಗಳ ಮೇಲೆ ಹಾಗೂ ಅದರ ಮಾಲೀಕರ ಮೇಲೆ ಕೇಸ್ ದಾಖಲಾಗುತ್ತಾ..?! ಅಥವಾ ಒತ್ತಡಕ್ಕೆ ಒಳಗಾಗಿ ವಾಹನಗಳನ್ನು ಬಿಡುತ್ತಾರಾ..? ಕೇಸ್ ದಾಖಲಿಸುವುದಿಲ್ಲವೇ..? ಅಲ್ಲಿನ ವಿಡಿಯೋ ಫೋಟೋಸ್ ಗಳು ಪತ್ರಿಕೆಗೆ ಲಭ್ಯವಾಗಿದ್ದು…. ದಾಳಿಯ ವಿವರದ ನಂತರ ಪ್ರಕಟಿಸಲಾಗುವುದು….
ರಘುರಾಜ್ ಹೆಚ್.ಕೆ..9449553305….